ಬೆಂಗಳೂರು : ರಾಜ್ಯದಲ್ಲಿ ಮತ್ತೆ ಕೊರೊನಾ ಅಬ್ಬರ ಶುರುವಾಗಿದ್ದು, ಶನಿವಾರ ಒಂದೇ ದಿನ ಬೆಂಗಳೂರು ನಗರದಲ್ಲಿ 146 ಸೇರಿದಂತೆ ರಾಜ್ಯಾದ್ಯಂತ ಒಒಟ್ಟು 247 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಶನಿವಾರ 10,481 ಮಂದಿಗೆ ಪರೀಕ್ಷೆ ನಡೆಸಲಾಗಿದ್ದು, ಶೇ.2.84 ರಷ್ಟು ಪಾಸಿಟಿವಿಟಿ ದರ ದಾಖಲಾಗಿದೆ. 247 ಪ್ರಕರಣಗಳ ಪೈಕಿ ಬೆಂಗಳೂರು ನಗರದಲ್ಲಿ 146, ಶಿವಮೊಗ್ಗ 20, ಚಿಕ್ಕಮಗಳೂರು 12, ಬಳ್ಳಾರಿ 11, ಮೈಸೂರು 7, ಬಾಗಲಕೋಟೆ, ದಕ್ಷಿಣ ಕನ್ನಡದಲ್ಲಿ ತಲಾ 4, ಬೆಂಗಳೂರು ಗ್ರಾಮಾಂತರ, ಬೆಳಗಾವಿ, ದಾವಣಗೆರೆ, ಧಾರವಾಡ, ಹಾವೇರಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ತಲಾ 3, ತುಮಕೂರು, ಕೊಒಡಗು ತಲಾ 2, ಚಿತ್ರದುರ್ಗ, ಗದಗ, ಹಾಸನ, ಕೊಪ್ಪಳ, ಮಂಡ್ಯ ರಾಮನಗರದಲ್ಲಿ ಒಂದೊಂದು ಕೇಸ್ ಪತ್ತೆಯಾಗಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
BIGG NEWS : ಕರ್ನಾಟಕ ವಿಧಾನಸಭಾ ಚುನಾವಣೆ: ಈವರೆಗೆ ಜಪ್ತಿಯಾದ ಹಣ, ದಾಖಲಾದ ದೂರು ಎಷ್ಟು ಗೊತ್ತಾ? ಇಲ್ಲಿದೆ ಮಾಹಿತಿ