ಕೆಎನ್‌ಎನ್‌ಡಿಜಿಟಲ್ ಡೆಸ್ಕ್ : ಭಾರತದ ಎಎಫ್ ಸಿ ಮಹಿಳಾ ಏಷ್ಯನ್ ಕಪ್ ಗುಂಪು ಚೈನೀಸ್ ತೈಪೆ(India’s AFC Women’s Asian Cup group Chinese Taipei) ವಿರುದ್ಧದ ಪಂದ್ಯವನ್ನ ಭಾನುವಾರ ಕಿಕ್ ಆಫ್ʼಗೆ ಕೆಲವೇ ನಿಮಿಷಗಳ ಮೊದಲು ರದ್ದುಗೊಳಿಸಲಾಗಿದೆ. ನಂತ್ರ ತವರು ತಂಡದ 12 ಆಟಗಾರರು ಕೋವಿಡ್-19ಗೆ ಪಾಸಿಟಿವ್ ಆಗಿದ್ದು, ಇಬ್ಬರು ಗಾಯಾಳುಗಳಾಗಿದ್ದಾರೆ ಎನ್ನಲಾಗ್ತಿದೆ.
ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ (AIFF)ನ ಉನ್ನತ ಮೂಲವೊಂದು ಈ ಬೆಳವಣಿಗೆಯನ್ನ ಪಿಟಿಐಗೆ ದೃಢಪಡಿಸಿದೆ. ಅದರ ನಂತ್ರ ಏಷ್ಯನ್ ಫುಟ್ಬಾಲ್ ಕಾನ್ಫೆಡರೇಷನ್ (AFC) ಕೂಡ ಹೇಳಿಕೆಯೊಂದನ್ನ ಬಿಡುಗಡೆ ಮಾಡಿದೆ.
“ಕೋವಿಡ್-19ರ ಹಲವಾರು ಧನಾತ್ಮಕ ಪ್ರಕರಣಗಳ ನಂತ್ರ ಚೈನೀಸ್ ತೈಪೆ ವಿರುದ್ಧದ ಗ್ರೂಪ್ ಎ ಪಂದ್ಯಕ್ಕೆ ಅಗತ್ಯವಿರುವ ಕನಿಷ್ಠ 13 ಆಟಗಾರರನ್ನ ಹೆಸರಿಸಲು ಭಾರತ ವಿಫಲವಾಗಿದೆ” ಎಂದು ಎಎಫ್ ಸಿ ಹೇಳಿದೆ.
ಎ ಗುಂಪಿನ ಪಂದ್ಯ ನಡೆಯುತ್ತಿಲ್ಲ ಎಂದರೆ 12 ರಾಷ್ಟ್ರಗಳ ಪ್ರಧಾನ ಕಾಂಟಿನೆಂಟಲ್ ಶೋಪೀಸ್ʼನ ಕ್ವಾರ್ಟರ್ ಫೈನಲ್ʼಗೆ ಅರ್ಹತೆ ಪಡೆಯುವ ಆತಿಥೇಯರ ಸಾಧ್ಯತೆಗಳು ಮಂಕಾಗಿವೆ. ಅಂದ್ಹಾಗೆ, ಈ ಪಂದ್ಯ ಡಿ.ವೈ.ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಬೇಕಿತ್ತು.
AFC Women’s Asian Cup 2022 | The match between Chinese Taipei and India has been called off due to positive COVID-19 cases in the India team.
— ANI (@ANI) January 23, 2022
BIGG NEWS : ಪ್ರಜಾಪ್ರಭುತ್ವ ಮೌಲ್ಯ ಮತ್ತು ಭವಿಷ್ಯದ ಪೀಳಿಗೆಗೆ ʼನೇತಾಜಿ ಪ್ರತಿಮೆʼ ಸ್ಫೂರ್ತಿ : ಪ್ರಧಾನಿ ಮೋದಿ
BIGG NEWS : ಒಮಿಕ್ರಾನ್ ಅಬ್ಬರದ ನಡುವೆ ರೂಪಾಂತರಿಯ ಮತ್ತೊಂದು ಉಪ ಪ್ರಭೇದ ʼStealth Omicronʼ ಪತ್ತೆ