ನವದೆಹಲಿ : ಆಧಾರ್‌ ಕಾರ್ಡ್‌ ಇಲ್ಲದವರಿಗೆ ಯುಐಡಿಎಐ ಬಿಗ್‌ ಶಾಕ್‌ ನೀಡಿದ್ದು, ಎಲ್ಲಾ ಸರ್ಕಾರಿ ಸಬ್ಸಿಡಿ ಮತ್ತು ಸೌಲಭ್ಯಗಳಿಗೆ ಆಧಾರ್ ಸಂಖ್ಯೆಯನ್ನ ಕಡ್ಡಾಯಗೊಳಿದೆ. ಹೌದು, ಈ ಕುರಿತು ಯುಐಡಿಎಐ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಎಲ್ಲಾ ಸಚಿವಾಲಯಗಳಿಗೆ ಸುತ್ತೋಲೆ ಹೊರಡಿಸಿದೆ.

ಆಗಸ್ಟ್ 11 ರಂದು ಯುಐಡಿಎಐ ಸುತ್ತೋಲೆ ಹೊರಡಿಸಿದ ಎನ್ನಲಾಗ್ತಿದ್ದು, ಆಧಾರ್ ನಿಯಮಗಳನ್ನ ಬಿಗಿಗೊಳಿಸಲಾಗಿದೆ. ಇನ್ನು ಆಧಾರ್ ಕಾಯ್ದೆಯ ಸೆಕ್ಷನ್ 7ರ ಅನ್ವಯ ಆಧಾರ್ ಇಲ್ಲದ ವ್ಯಕ್ತಿಗೆ ಸೌಲಭ್ಯಗಳ ಒದಗಿಸಲು ಅಸ್ತಿತ್ವದಲ್ಲಿರುವ ನಿಯಮ ಅವಕಾಶ ಕೊಡುತ್ತದೆ.

ಅದ್ರಂತೆ, ಸುತ್ತೋಲೆಯಲ್ಲಿ “ಆಧಾರ್ ಕಾಯಿದೆಯ ಸೆಕ್ಷನ್ 7 ರ ಪ್ರಕಾರ, ಭಾರತದ ಪ್ರಜೆಯಾಗಿದ್ದು, ಇನ್ನೂ ಆಧಾರ್ ಕಾರ್ಡ್‌ ಪಡೆದಿರದಿದ್ರೆ, ಆತ ಆಧಾರ್‌ಗಾಗಿ ಅರ್ಜಿ ಸಲ್ಲಿಸಬಹುದು. ಇನ್ನು ಅಂತಹ ವ್ಯಕ್ತಿಗೆ ಆಧಾರ್ ಸಂಖ್ಯೆಯನ್ನ ನಿಗದಿಪಡಿಸುವವರೆಗೆ, ಅವನು/ಅವಳು ಆಧಾರ್ ನೋಂದಣಿ ಗುರುತಿನ (EID) ಸಂಖ್ಯೆ/ಸ್ಲಿಪ್‌ನೊಂದಿಗೆ ಪರ್ಯಾಯ ಮತ್ತು ಕಾರ್ಯಸಾಧ್ಯವಾದ ಗುರುತಿನ ವಿಧಾನಗಳ ಮೂಲಕ ಸರ್ಕಾರದ ಪ್ರಯೋಜನಗಳು, ಸಬ್ಸಿಡಿಗಳು ಮತ್ತು ಸೇವೆಗಳನ್ನ ಪಡೆಯಬಹುದು. ಇದರರ್ಥ ಯಾರಾದರೂ ಇನ್ನೂ ಆಧಾರ್ ಸಂಖ್ಯೆಯನ್ನ ಹೊಂದಿಲ್ಲದಿದ್ರೆ, ಅವರು ಸರ್ಕಾರಿ ಸೇವೆ, ಪ್ರಯೋಜನ ಅಥವಾ ಸಬ್ಸಿಡಿಗಾಗಿ ತಕ್ಷಣವೇ ಆಧಾರ್ ಅನ್ನು ನೋಂದಾಯಿಸಬೇಕಾಗುತ್ತದೆ. ಆಧಾರ್ ಸಂಖ್ಯೆ ಬರುವವರೆಗೆ ನೋಂದಣಿ ಸ್ಲಿಪ್ ತೋರಿಸಿ ಸರ್ಕಾರಿ ಸೇವೆಗಳನ್ನ ಪಡೆಯಬಹುದು” ಎಂದಿದೆ.

ಅಂದ್ಹಾಗೆ, ದೇಶದ 90 ಪ್ರತಿಶತ ವಯಸ್ಕರು ಆಧಾರ್ ಸಂಖ್ಯೆಯನ್ನ ಹೊಂದಿದ್ದಾರೆ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.

Share.
Exit mobile version