ಬೆಂಗಳೂರು : ದೀಪಾವಳಿ ಹಬ್ಬಕ್ಕಾಗಿ ಊರುಗಳಿಗೆ ತೆರಳಲು ಸಿದ್ಧತೆ ನಡೆಸಿರುವ ಪ್ರಯಾಣಿಕರಿಗೆ ಖಾಸಗಿ ಬಸ್ ಗಳು ಪ್ರಯಾಣ ದರ ಹೆಚ್ಚಿಸಿ ದುಪ್ಪಟ್ಟು ಹಣ ವಸೂಲಿ ಮಾಡಿದ್ರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ಖಡಕ್ ಎಚ್ಚರಿಕೆ ನೀಡಿದ್ದರೂ, ಖಾಸಗಿ ಬಸ್ ಗಳ ಮಾಲೀಕರು ದುಪಟ್ಟು ದರ ವಸೂಲಿ ಮಾಡುತ್ತಿದ್ದಾರೆ ಎನ್ನಲಾಗಿದೆ.

BIG NEWS: ಇಂದು ಕೇದಾರನಾಥ, ಬದರಿನಾಥಕ್ಕೆ ಪ್ರಧಾನಿ ಮೋದಿ ಭೇಟಿ, ಹಲವು ಕಾರ್ಯಕ್ರಮಗಳಲ್ಲಿ ಭಾಗಿ

ಬೆಂಗಳೂರಿನಿಂದ ವಿವಿಧ ಊರುಗಳಿಗೆ ಹೋಗುವ ಪ್ರಯಾಣಿಕರಿಂದ ಖಾಸಗಿ ಬಸ್ ಮಾಲೀಕರು ದುಪ್ಪಟ್ಟು ಹಣ ವಸೂಲಿ ಮಾಡುತ್ತೀವೆ. ಬೆಂಗಳೂರು-ಬಳ್ಳಾರಿ ಬಸ್ ಟಿಕೆಟ್ ದರ ಪರಿಶೀಲಿಸಿದಾಗ ಖಾಸಗಿ ಬಸ್ ಟಿಕೆಟ್ ದರ 1000 ರೂ-1500 ರೂ.ವರೆಗೆ ನಿಗದಿ ಮಾಡಿವೆ. ಅಕ್ಟೋಬರ್ 21 ರಂದು ಬೆಂಗಳೂರಿನಿಂದ ಹುಬ್ಬಳ್ಳಿಗೆ ಖಾಸಗಿ ಟ್ರಾವೆಲ್ಸ್ ಒಂದರ ಬಸ್ ನ ಟಿಕೆಟ್ ದರ 5,000 ರೂ. ದರ ನಿಗದಿಪಡಿಸಲಾಗಿದೆ. ಸಚಿವರ ಎಚ್ಚರಿಕೆ ನೀಡಿದ್ದರೂ ಖಾಸಗಿ ಬಸ್‌ಗಳ ಮಾಲೀಕರು ಕ್ಯಾರೆ ಎನ್ನದೆ ದುಪ್ಪಟ್ಟು ದರ ವಸೂಲಿ ಮಾಡುತ್ತಿದ್ದಾರೆ.

BIGG NEWS: ಇಂದು ಅರಮನೆ ಮೈದಾನದಲ್ಲಿ ‘ಪುನೀತ್ ಪರ್ವ’ ಕಾರ್ಯಕ್ರಮ; ಪೊಲೀಸ್ ಬಿಗಿ ಭದ್ರತೆ

ಇನ್ನೇನು ದೀಪಾವಳಿ ಹಬ್ಬ ಹತ್ರ ಬರುತ್ತಿದೆ. ಹೀಗಾಗಿ ನಗರದಲ್ಲಿ ಇದ್ದ ಜನರು ಊರಿಗಳಿಗೆ ಹೋಗುವ ಪ್ಲಾನ್‌ ಮಾಡುತ್ತಿರುತ್ತಾರೆ. ಹೀಗಿರುವಾಗ ಸಾಮಾನ್ಯವಾಗಿ ಹಬ್ಬದಿನಗಳಲ್ಲಿ ಬಸ್‌ ದರ ಹೆಚ್ಚಳವಾಗುತ್ತದೆ. ಆದರೆ ಈ ಬಾರಿ ಹಬ್ಬದ ದಿನದಲ್ಲಿ ಸರ್ಕಾರಿ ಬಸ್‌ ಗಳು ಸೇರಿ ಯಾವುದೇ ಬಸ್‌ ಗಳ ಪ್ರಯಾಣ ದರ ಹೆಚ್ಚಿಸದಂತೆ ಸಚಿವ ಶ್ರೀರಾಮುಲು ಎಚ್ಚರಿಕೆ ನೀಡಿದ್ದಾರೆ.

Share.
Exit mobile version