ಬೆಂಗಳೂರು : ನಾನು ಪ್ರಲ್ಹಾದ್ ಜೋಶಿ ವಿರೋಧಿ ಅಲ್ಲ. ಜೋಶಿ ಅವರನ್ನು ಮುಖ್ಯಮಂತ್ರಿ ಮಾಡುವುದಾದರೆ ಚುನಾವಣೆಗೆ ಮೊದಲೇ ಪ್ರಹ್ಲಾದ್ ಜೋಶಿ ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡಲಿ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬ್ರಾಹ್ಮಣ ಸಮುದಾಯಕ್ಕೆ ಯಾವತ್ತೂ ಅವಹೇಳನ ಮಾಡಿಲ್ಲ. ಬ್ರಾಹ್ಮಣ ಸಮುದಾಯದ ಹಲವರು ನನ್ನ ಸ್ನೇಹಿತರಿದ್ದಾರೆ. ರಾಮಕೃಷ್ಣ ಹೆಗಡೆ ಸಿಎಂ ಆಗಲು ಹೆಚ್.ಡಿ. ದೇವೇಗೌಡರು ಕಾರಣ ಎಂದರು.
ನಮ್ಮ ಭಾಗದ ಬ್ರಾಹ್ಮಣ ಸಮುದಾಯದ ಸಂಸ್ಕೃತಿ ನನಗೆ ಗೊತ್ತಿದೆ. ಬಿಜೆಪಿಯವರಿಗೆ ಅಭಿವೃದ್ಧಿ, ಶಾಂತಿ ಬೇಕಿಲ್ಲ. ಗಾಂಧೀಜಿ ಹತ್ಯೆ ಮಾಡಿದವರ ದೇವಸ್ಥಾನ ಕಟ್ಟಲು ಹೊರಟಿದ್ದಾರೆ. ರಾಜಕೀಯ ಲೆಕ್ಕಚಾರದಲ್ಲಿ ನಾನು ಹೇಳಿಕೆ ನೀಡಿಲ್ಲ. ರಾಜ್ಯ ಸಮಸ್ಯೆಗಳ ವಿಚಾರ ಮುಂದಿಟ್ಟು ಹೇಳಿಕೆ ನೀಡಿದ್ದೇನೆ. ನಾನು ಯಾವುದೇ ತಪ್ಪು ಮಾತನಾಡಿಲ್ಲ. ಈ ವಿಚಾರದಲ್ಲಿ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.
WATCH VIDEO : ಟರ್ಕಿ ‘ಭೂಕಂಪಕ್ಕೆ ಸ್ವಲ್ಪ ಮುನ್ನ ಭಯದಿಂದ’ ಪಕ್ಷಿಗಳು ಹಾರುತ್ತಿರೋ ಹೃದಯವಿದ್ರಾವಕ video viral