ಕಲಬುರಗಿ : ರಾಜ್ಯದಲ್ಲಿ ನೂತನವಾಗಿ ಘೋಷಿಸಲಾದ ತಾಲೂಕುಗಳ ಪೈಕಿ 20 ಕಡೆ ಆಡಳಿತ ಸೌಧ ನಿರ್ಮಿಸಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ ಹೇಳಿದರು.

BIGG NEWS: ಇಂದು ಹಾವೇರಿ, ಧಾರವಾಡ ಜಿಲ್ಲಾ ಪ್ರವಾಸ ಕೈಗೊಳ್ಳಲಿರುವ ಸಿಎಂ ಬಸವರಾಜ ಬೊಮ್ಮಾಯಿ‌

ಶನಿವಾರ ಆಡಕಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಕಾರಣ ನೂತನ ತಾಲೂಕುಗಳಿಗೆ ಮೂಲಸೌಕರ್ಯ ಕಲ್ಪಿಸಲು ಸಮರ್ಪಕವಾಗಿ ಸಾಧ್ಯವಾಗಿಲ್ಲ. ಕಷ್ಟದ ನಡುವೆಯೂ 12 ತಾಲೂಕುಗಳಿಗೆ ತಾಲೂಕಾ ಕಚೇರಿಗಳನ್ನು ಮಂಜೂರು ಮಾಡಿದೆ. ಮುಂದಿನ ದಿನದಲ್ಲಿ ಆರ್ಥಿಕ ಇತಿಮಿತಿ ನೋಡಿ ನೂತನ ತಾಲೂಕುಗಳನ್ನು ಬಲಪಡಿಸಲಾಗುವುದು ಎಂದರು.

ಹಳ್ಳಿ ಜನರ ಬದುಕು ಹಸನಗೊಳಿಸಲು ಅವರೊಂದಿಗೆ ಬೆರೆತು, ಚರ್ಚಿಸಿ ಅಡಳಿತದಲ್ಲಿ ಸರಳೀಕರಣಗೊಳಿಸಲೆಂದೆ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಆರಂಭಿಸಲಾಗಿದೆ. ಕಾರ್ಯಕ್ರಮ ಘೋಷಣೆಯಾದ ಮೇಲೆ ಒಂದು ತಿಂಗಳಿನಿಂದ ಕಂದಾಯ ಸಿಬ್ಬಂದಿಗಳು ಗ್ರಾಮದ ಪ್ರತಿ ಮನೆ-ಮನೆಗೂ ಹೋಗಿ ಸರ್ಕಾರಿ ಸೌಲಭ್ಯ ಪಡೆಯಲು ಪ್ರಯತ್ನಿಸುತ್ತಾರೆ. ಡಿ.ಸಿ-ತಹಶೀಲ್ದಾರರು ಹಳ್ಳಿಗೆ ಹೋಗಿ ಸಮಸ್ಯೆ ಆಲಿಸುತ್ತಿದ್ದಾರೆ. ಇದು ಅದ್ಭುತ ಪರಿಕಲ್ಪನೆಯ ಕಾರ್ಯಕ್ರಮ ಎಂದರು.

ಕಳೆದ ಎರಡು ಅಧಿವೇಶನದಲ್ಲಿ ಕಂದಾಯ ಇಲಾಖೆಯ ಸಾಮಾಜಿಕ ಪಿಂಚಣಿಗೆ ಸಂಬಂಧಿಸಿದಂತೆ ಉಭಯ ಸದನದ ಯಾರೊಬ್ಬ ಸದಸ್ಯರು ಪ್ರಶ್ನೆ ಕೇಳಿಲ್ಲ. ಕಾರಣ ಸಾಮಾಜಿಕ ಪಿಂಚಣಿಯನ್ನು ಸಮರ್ಕವಾಗಿ ಮತ್ತು ತ್ವರಿತವಾಗಿ ರಾಜ್ಯದಲ್ಲಿ ನೀಡಲಾಗುತ್ತಿದೆ. 72 ಗಂಟೆಯಲ್ಲಿ ವೃದ್ಧಾಪ್ಯ ವೇತನ ನೀಡುವ “ಹಲೋ ಕಂದಾಯ ಸಚಿವರೇ” ಯೋಜನೆಯೂ ಇದಕ್ಕೆ ಪೂರಕವಾಗಿದೆ. ಈ ರೀತಿ ಕಂದಾಯ ಇಲಾಖೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಾಗಿದೆ ಎಂದರು.

ಜಂದಿಂಚು ಜಾಗ ಬಿಡಲ್ಲ: ರಾಯಚೂರು ಜಿಲ್ಲೆಯನ್ನು ತೆಲಾಂಗಣಾಕ್ಕೆ ಸೇರಬೇಕೆಂಬ ತೆಲಾಂಗಣಾ ಮುಖ್ಯಮಂತ್ರಿ ಹೇಳಿಕೆ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಕಂದಾಯ ಸಚಿವ ಆರ್.ಅಶೋಕ ಅವರು, ರಾಜ್ಯದ ಒಂದಿಂಚು ಜಾಗ ನೀಡಲ್ಲ. ತೆಲಾಂಗಾಣಾದಲ್ಲಿ ಆಡಳಿತ ಸರಿಯಿಲ್ಲದ ಕಾರಣ ಅಲ್ಲಿಂದ ಉದ್ಯೋಗ ಅರಸಿ ಲಕ್ಷಾಂತರ ಕಾರ್ಮಿಕರು ನಮ್ಮಲ್ಲಿ ಬರ್ತಾರೆ. ಇಲ್ಲಿನವರು ಅಲ್ಲಿ ಹೋಗಿರೋ ಉದಾಹರಣೆಯಿಲ್ಲ ಎಂದರು.

ಪ್ರಾದೇಶಿಕ ಕಚೇರಿ ರದ್ದು: ಪ್ರಾದೇಶಿಕ ಅಯುಕ್ತರ ರದ್ದತಿ ಕುರಿತಂತೆ ಸುದ್ದಿಗಾರರೊಬ್ಬರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪ್ರಾದೇಶಿಕ ಅಯುಕ್ತರ ಕಚೇರಿ ಬಿಳಿ ಅನೆ ಇದ್ದಂತೆ. ಇದರ ರದ್ದತಿಗೆ ಹಾರನಳ್ಳಿ ರಾಮಸ್ವಾಮಿ ಸೇರಿದಂತೆ ಅನೇಕ ಅಡಳಿತ ಸುಧಾರಣೆ ಅಯೋಗಗಳು ವರದಿ ನೀಡಿವೆ. ಹೀಗಾಗಿ 4 ವಿಭಾಗೀಯ ಕಚೇರಿಯನ್ನು ರದ್ದುಪಡಿಸಿ ಅಲ್ಲಿರುವ ಸಿಬ್ಬಂದಿಗಳನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ನೀಡಿ ಡಿ.ಸಿ.ಗಳಿಗೆ ಹೆಚ್ಚಿನ ಅಧಿಕಾರ ನೀಡಲಾಗುವುದು. ಜೊತೆಗೆ ಇತರೆ ಇಲಾಖೆಗಳಂತೆ ಜಿಲ್ಲಾಧಿಕಾರಿಗಳ ಮೇಲೆ ಕೇಂದ್ರೀಕೃತವಾಗಿ ರಾಜ್ಯದಲ್ಲಿ ಆಯುಕ್ತಾಲಯ ಸ್ಥಾಪಿಸಲಾಗುವುದು ಎಂದರು.

Share.
Exit mobile version