ಬೆಂಗಳೂರು : ರಾಜ್ಯದಲ್ಲಿ ಕಳೆದ ಎರಡು ದಿನಗಳಲ್ಲಿ ಜೆಇ ಮಿದುಳು ಜ್ವರ ನಿಯಂತ್ರಣಕ್ಕಾಗಿ ವಿಶೇಷ ಲಸಿಕಾ ಅಭಿಯಾನದಡಿ 8.41 ಲಕ್ಷ ಮಕ್ಕಳಿಗೆ ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

‘ವಾಟ್ಸಾಪ್’ನಲ್ಲಿ ನಿಮ್ಮ ಡೇಟಾ ಸೇಫಾಗಿ ಇರ್ಬೇಕಾ.? ‘ಸೆಟ್ಟಿಂಗ್’ನಲ್ಲಿ ಈ ಬದಲಾವಣೆ ಮಾಡಿ

ರಾಜ್ಯದ ಬಾಗಲಕೋಟೆ, ಗದಗ, ಕಲಬುರಗಿ, ದಕ್ಷಿಣ ಕನ್ನಡ, ಹಾಸನ, ಹಾವೇರಿ, ತುಮಕೂರು, ರಾಮನಗರ, ಉಡುಪಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಸೋಮವಾರದಿಂದ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, 1-15 ವರ್ಷ ವಯಸ್ಸಿನ ಮಕ್ಕಳಿಗೆ ಒಂದು ಡೋಸ್ ಲಸಿಕೆ ನೀಡಲಾಗುತ್ತಿದೆ.

ವಿಶೇಷ ಲಸಿಕಾ ಅಭಿಯಾನದಡಿ ಮೊದಲ ದಿನ 4,22,932 ಮಕ್ಕಳಿಗೆ ಲಸಿಕೆ ನೀಡಲಾಗಿದ್ದು, ಎರಡನೇ ದಿನ 4,18,272 ಮಕ್ಕಳು ಸೇರಿ ಒಟ್ಟಾರೆ 8,41,204 ಮಕ್ಕಳು ಲಸಿಕೆ ಪಡೆದುಕೊಂಡಿದ್ದಾರೆ.

BIGG NEWS : ನಾಳೆ 5 ಕೋಟಿ ಜನರಿಗೆ ‘ಆಯುಷ್ಮಾನ್ ಕಾರ್ಡ್’ ವಿತರಣೆ : ದೇಶದ ಯಾವುದೇ ‘ನೋಂದಾಯಿತ ಆಸ್ಪತ್ರೆ’ಗಳಲ್ಲಿ ಚಿಕಿತ್ಸೆ ಲಭ್ಯ|Ayushman Bharat Card

Share.
Exit mobile version