ತುಮಕೂರು : ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ವಿಪಕ್ಷಗಳ ಆರೋಪ-ಪ್ರತ್ಯಾರೋಪಗಳು ಹೆಚ್ಚಾಗುತ್ತಿದೆ. ಇದೀಗ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಸುದ್ದಿಗಾರರ ಜೊತೆ ಇಂದು ಮಾತನಾಡಿದ ಹೆಚ್ಡಿಕೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪಾವಗಡ ಸೋಲಾರ್ ಪಾರ್ಕ್ ಯೋಜನೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಹೇಳಿದ್ದಾರೆ. ಈಗಿರುವ ಸರ್ಕಾರ ಅಲ್ಲಿರುವ ವ್ಯವಹಾರವನ್ನು ಜನರ ಮುಂದಿಡಬೇಕು, ಅಂದಿನ ಸರ್ಕಾರ ರೈತರ ಭೂಮಿ ದಾಖಲೆಗಳನ್ನು ತಿದ್ದುಪಡಿ ಮಾಡಿದೆ, ಇದರಲ್ಲಿ ಭಾರೀ ಅವ್ಯವಹಾರ ಮಾಡಲಾಗಿದೆ ಎಂದು ವಾಗ್ಧಾಳಿ ನಡೆಸಿದರು.

ಸೋಲಾರ್ ಪಾರ್ಕ್ ಯೋಜನೆಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಸರ್ಕಾರ ತನಿಖೆ ಮಾಡ್ತೀವಿ ಎಂದು ಬರೀ ಸುಳ್ಳು ಹೇಳುತ್ತಿದೆ. ಸರ್ಕಾರ ಪ್ರಾಮಾಣಿಕವಾಗಿ ತನಿಖೆ ಮಾಡಿ ಕ್ರಮ ಕೈಗೊಳ್ಳಬೇಕು, ಬಿಜೆಪಿ ಸರ್ಕಾರ ಅಲ್ಲಿ ನಡೆದಿರುವ ವ್ಯವಹಾರವನ್ನು ಜನರ ಮುಂದಿಡಬೇಕು ಎಂದು ಆಗ್ರಹಿಸಿದರು.

BIGG NEWS: ನಾನು ಕೊತ್ವಾಲ್‌ ರಾಮಚಂದ್ರ, ಜಯರಾಜ್ ಶಿಷ್ಯ: ಕಾಂಗ್ರೆಸ್‌ ಗೆ ಸಿ.ಟಿ.ರವಿ ತಿರುಗೇಟು

BIG BREAKING NEWS: ಡಿ.17ರಂದು ವಿದ್ಯಾರ್ಥಿಗಳ ಸಮಸ್ಯೆ ಬಗೆರಿಸುವಂತೆ ಆಗ್ರಹಿಸಿ NSUIನಿಂದ ಕರ್ನಾಟಕ ಬಂದ್ ಗೆ ಕರೆ | Karnataka Bandh

Share.
Exit mobile version