ಬೆಂಗಳೂರು : ರಾಜ್ಯದಲ್ಲಿ ಎಂಇಎಸ್ ನಿಷೇಧಕ್ಕೆ ಆಗ್ರಹಿಸಿ ಡಿಸೆಂಬರ್ 31 ರ ನಾಳೆ ಕರ್ನಾಟಕ ಬಂದ್ ಮಾಡೇ ಮಾಡುತ್ತೇವೆ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ.
BIGG NEWS: ಫೆ.28ರವರೆಗೆ KSRTCಯಿಂದ ಪತ್ರಕರ್ತರಿಗೆ ನೀಡಿರುವ ‘ಬಸ್ ಪಾಸ್’ ಅವಧಿ ವಿಸ್ತರಣೆ
ಈ ಕುರಿತು ಮಾಹಿತಿ ನೀಡಿರುವ ಅವರು, ರಾಜ್ಯದಲ್ಲಿ ಎಂಇಎಸ್ ನಿಷೇಧ ಮಾಡಲೇಬೇಕು. ಹೀಗಾಗಿ ನಾಳೆ ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ಬಂದ್ ಮಾಡುತ್ತೇವೆ. ನೂರಾರು ಕನ್ನಡ ಪರ ಸಂಘಟನೆಗಳು ಬಂದ್ ಗೆ ಬೆಂಬಲ ಸೂಚಿಸಿದ್ದು, ಇದು ಕನ್ನಡಿಗರ ಗೌರವದ ಪ್ರಶ್ನೆಯಾಗಿದೆ ಎಂದರು.
ನಾಳೆಯ ಕರ್ನಾಟಕ ಬಂದ್ ಸ್ವಾಭಿಮಾನದ ಬಂದ್, ಕನ್ನಡದ ಬಂದ್. ಬಂದ್ ನಲ್ಲಿ ರೈತರು, ಲಾರಿ ಮಾಲೀಕರು, ಕಾರು ಮಾಲೀಕರು, ಚಾಲಕರು ಸೇರಿದಂತೆ ಎಲ್ಲರೂ ಭಾಗವಹಿಸಬೇಕು ಎಂದು ಹೇಳಿದ್ದಾರೆ.