ನವದೆಹಲಿ : ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ನಿಧನರಾದ ಸಿಡಿಎಸ್ ಬಿಪಿನ್ ರಾವತ್ ಮತ್ತು ಅವ್ರ ಪತ್ನಿ ಮಧುಲಿಕಾ ರಾವತ್ ಅವ್ರ ಅಂತ್ಯಕ್ರಿಯೆಯನ್ನ ಸಕಲ ಸೇನಾ ಗೌರವದ ಮೂಲಕ ದೆಹಲಿಯ ಕಂಟೋನ್ಮೆಂಟ್ ಪ್ರದೇಶದಲ್ಲಿರುವ ಬ್ರಾರ್ ಸ್ಕ್ವೇರ್‌ನಲ್ಲಿ ನೆರವೇರಿಸಲಾಯ್ತು.
ರಾವತ್ ಅಂತ್ಯಕ್ರಿಯೆ ವೇಳೆ 800 ಸೇನಾಧಿಕಾರಿಗಳು ಭಾಗಿಯಾಗಿದ್ದು, 17 ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಗೌರವ ನಮನ ಸಲ್ಲಿಸಿದ್ರು. ಮೂರು ಸೇನಾ ಪಡೆಗಳ ಸದಸ್ಯರಿಂದ ವಾದ್ಯವೃಂದ ಮೊಳಗಿಸಲಾಯ್ತು. ಇನ್ನು ರಾವತ್ ಅವ್ರಿಗೆ ಕೊನೆಯದಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಭೂಸೇನೆ, ವಾಯುಪಡೆ, ನೌಕಪಡೆ ಅಧಿಕಾರಿಗಳು, ಅಂತಿಮವಾಗಿ ಕುಟುಂಬಸ್ಥರಿಂದ ರಾವತ್ ದಂಪತಿಗೆ ನಮನ ಸಲ್ಲಿಸಿದ್ರು.
ರಾವತ್ ಅವ್ರ ಇಬ್ಬರು ಪುತ್ರಿಯರಾದ ಕೃತಿಕಾ, ತಾರಿಣಿಯಿಂದ ಅಂತಿಮ ವಿಧಿವಿಧಾನ ನೇರವೇರಿಸಿದ್ರು. ಅಂತ್ಯಸಂಸ್ಕಾರ ವಿಧಿವಿಧಾನ ಮುಕ್ತಾಯದ ನಂತ್ರ ರಾವತ್ ಪುತ್ರಿಯರಿಗೆ ತ್ರಿವರ್ಣ ಧ್ವಜ ಹಸ್ತಾಂತರಿಸಲಾಯ್ತು. ಇನ್ನು ಸಕಲ ಸೇನಾ ಗೌರವಗಳ ಮೂಲಕ ದೇಶದ ಮೊಟ್ಟ ಮೊದಲ ರಕ್ಷಣಾಪಡೆ ಮುಖ್ಯಸ್ಥನಿಗೆ ಅಂತಿಮ ವಿದಾಯ ಹೇಳಲಾಯ್ತು.
ಮಹಿಳೆಯರೇ ಹುಷಾರ್.! ಥೇಟ್ ‘ಬೆಲ್ ಬಾಟಂ ಚಿತ್ರ’ದಲ್ಲಿನಂತೆ ಚಿನ್ನಾಭರಣ ಎಗರಿಸ್ತಾರೆ ‘ನಕಲಿ ಫಕೀರ’ರು.!
ನಾನು ಮುಖ್ಯ ಮಂತ್ರಿಯಾಗುತ್ತೇನೆಂದು ಎಲ್ಲಿಯೂ ಹೇಳಿಲ್ಲ – ಸಚಿವ ಮುರುಗೇಶ್ ನಿರಾಣಿ