ನವದೆಹಲಿ: ಎಲ್ ಪಿಜಿ (LPG) ಸಿಲಿಂಡರ್ ಗಳ ಹೊಸ ದರಗಳನ್ನು ಬಿಡುಗಡೆ ಮಾಡಲಾಗಿದೆ. ಎಲ್ ಪಿಜಿ (LPG) ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ, ಆದರೆ ವಾಣಿಜ್ಯ ಅನಿಲ ಸಿಲಿಂಡರ್ ಬೆಲೆಯನ್ನು ಕಡಿಮೆ ಮಾಡಲಾಗಿದೆ. 19 ಕೆಜಿ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಇಂದಿನಿಂದ 115 ರೂ.ಗಳಷ್ಟು ಇಳಿಕೆಯಾಗಿದೆ.

ಐಒಸಿಎಲ್ ಪ್ರಕಾರ, ನವೆಂಬರ್ 1 ರಿಂದ ದೆಹಲಿಯಲ್ಲಿ 19 ಕೆಜಿ ಇಂಡೇನ್ ವಾಣಿಜ್ಯ ಸಿಲಿಂಡರ್ ಬೆಲೆ 115.5 ರೂ., ಕೋಲ್ಕತಾದಲ್ಲಿ 113 ರೂ., ಮುಂಬೈನಲ್ಲಿ 115.5 ರೂ., ಚೆನ್ನೈನಲ್ಲಿ 116.5 ರೂ. ಇಳಿಕೆಯಾಗಿದೆ. ಇದಕ್ಕೂ ಮೊದಲು ಅಕ್ಟೋಬರ್ 1 ರಂದು, ಈ ಸಿಲಿಂಡರ್ ಬೆಲೆಯನ್ನು 25 ರೂ.ಗಳಷ್ಟು ಕಡಿಮೆ ಮಾಡಲಾಗಿತ್ತು. 14.2 ಕೆಜಿ ತೂಕದ ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ ಹಳೆಯ ಬೆಲೆಯಲ್ಲಿ ಲಭ್ಯವಾಗಲಿದೆ.

ದೆಹಲಿಯಲ್ಲಿ 19 ಕೆಜಿ ಇಂಡೇನ್ ಸಿಲಿಂಡರ್ 1859.5 ರೂ.ಗೆ ಬದಲಾಗಿ 1744 ರೂ.ಗೆ ಲಭ್ಯವಾಗಲಿದೆ. ಕೋಲ್ಕತಾದಲ್ಲಿ ವಾಣಿಜ್ಯ ಸಿಲಿಂಡರ್ಗಳು 1846 ರೂ.ಗೆ ಲಭ್ಯವಾಗಲಿವೆ. ಈ ಮೊದಲು ಇದು 1995.50 ರೂ.ಗೆ ಲಭ್ಯವಿತ್ತು. ಮುಂಬೈನಲ್ಲಿ ವಾಣಿಜ್ಯ ಸಿಲಿಂಡರ್ಗಳು 1844 ರೂ.ಗಳ ಬದಲು 1696 ರೂ.ಗೆ ಲಭ್ಯವಾಗಲಿವೆ. ಚೆನ್ನೈನಲ್ಲಿ ಎಲ್ಪಿಜಿ ಸಿಲಿಂಡರ್ 1893 ರೂ.ಗೆ ಲಭ್ಯವಾಗಲಿದೆ. ಈ ಮೊದಲು, ಇದು 2009.50 ರೂ.ಗೆ ಲಭ್ಯವಿತ್ತು.

14.2 ಕೆ.ಜಿ ಸಿಲಿಂಡರ್ ದರಗಳು ರೂ.

ಕೊಲ್ಕತ್ತಾ 1079

ದೆಹಲಿ 1053

ಮುಂಬೈ 1052.5

ಚೆನ್ನೈ 1068.5

ಪ್ರತಿ ತಿಂಗಳ ಮೊದಲನೇ ತಾರೀಖಿನಂದು ಬೆಲೆಯನ್ನು ನಿಗದಿಪಡಿಸಲಾಗುತ್ತದೆ. ಶದ ಅನಿಲ ಕಂಪನಿಗಳು ಪ್ರತಿ ತಿಂಗಳ ಮೊದಲನೆಯ ತಾರೀಖಿನಂದು ಅನಿಲ ಸಿಲಿಂಡರ್ ಗಳ ಬೆಲೆಯನ್ನು ನಿಗದಿಪಡಿಸುತ್ತವೆ.

Share.
Exit mobile version