ನವದೆಹಲಿ : ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಇಂದು ಮುಂಬರುವ ಪೇಟಿಎಂ ವೆಸ್ಟ್ ಇಂಡೀಸ್(Paytm West Indies)ನ ಭಾರತ ಪ್ರವಾಸದ ಸ್ಥಳಗಳಲ್ಲಿ(Location of India Tour) ಬದಲಾವಣೆಯನ್ನ ಘೋಷಿಸಿದೆ. ವೆಸ್ಟ್ ಇಂಡೀಸ್ ಮೂರು ಏಕದಿನ(three ODIs) ಮತ್ತು ಅಷ್ಟೇ ಟಿ20 ಪಂದ್ಯಗಳನ್ನ(T20Is) ಒಳಗೊಂಡ ವೈಟ್ ಬಾಲ್ ಸರಣಿ(white-ball series )ಗಾಗಿ ಇಲ್ಲಿಗೆ ಬರಲಿದೆ.
ಅದ್ರಂತೆ, ಈಗ ಮೂರು ಏಕದಿನ ಪಂದ್ಯಗಳು ಅಹ್ಮದಾಬಾದ್ʼನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ(Narendra Modi Stadium) ನಡೆಯಲಿವೆ. ಇನ್ನು ಕೋಲ್ಕತ್ತಾದ ಈಡನ್ ಗಾರ್ಡನ್(Eden Gardens)ನಲ್ಲಿ ಮೂರು ಟಿ20 ಪಂದ್ಯಗಳು(three T20Is) ನಡೆಯಲಿವೆ.
ಅದ್ರಂತೆ, ತಂಡಗಳು, ಪಂದ್ಯದ ಅಧಿಕಾರಿಗಳು, ಪ್ರಸಾರಕರು ಮತ್ತು ಇತರ ಮಧ್ಯಸ್ಥಗಾರರ ಪ್ರಯಾಣ ಮತ್ತು ಚಲನೆಯನ್ನ ಕಡಿತಗೊಳಿಸುವ ಮೂಲಕ ಬಯೋ ಸೆಕ್ಯೂರಿಟಿ ಅಪಾಯಗಳನ್ನು ತಗ್ಗಿಸಲು ಮೂಲತಃ ಘೋಷಿಸಿದಂತೆ ಸರಣಿಯನ್ನು ಆರು ಸ್ಥಳಗಳಿಗೆ ಸೀಮಿತಗೊಳಿಸುವ ನಿರ್ಧಾರವನ್ನ ಮಾಡಲಾಗಿದೆ ಎಂದು ಬಿಸಿಸಿಐ ಹೇಳಿದೆ.
ಪರಿಷ್ಕೃತ ವೇಳಾಪಟ್ಟಿ ಈ ಕೆಳಗಿನಂತಿದೆ..!
BCCI announces a change in venues for the upcoming West Indies’ Tour of India. The West Indies will arrive here for a white-ball series comprising three ODIs and as many T20Is: Board of Control for Cricket in India (BCCI)#IndvsWI pic.twitter.com/4Az7cT9qcp
— ANI (@ANI) January 22, 2022
ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳೇ ಗಮನಿಸಿ : ‘ವಿದ್ಯಾರ್ಥಿ ವೇತನ’ಕ್ಕೆ ಅರ್ಜಿ ಸಲ್ಲಿಸಲು ಜ.31 ಕೊನೆಯ ದಿನಾಂಕ