ಬೆಂಗಳೂರು : ಪೋಕ್ಸೋ ಕಾಯ್ದೆಯಡಿ ಮುರುಘಾಮಠದ ಶಿವಮೂರ್ತಿ ಸ್ವಾಮೀಜಿಗಳ ಬಂಧನವಾಗಿದ್ದು, ಇದೀಗ ಶ್ರೀಗಳಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.  ಬೆಂಗಳೂರು ಮೆಟ್ರೊಪಾಲಿಟನ್​ ಮ್ಯಾಜಿಸ್ಟ್ರೇಟ್ ಕೋರ್ಟ್​ನಿಂದ ಅರೆಸ್ಟ್ ವಾರಂಟ್ ಜಾರಿ ಮಾಡಲಾಗಿದೆ.​​

INS ವಿಕ್ರಾಂತ್ ಸ್ವಾವಲಂಬಿ ಭಾರತದ ಅಸಾಧಾರಣ ಸಂಕೇತ: ರಕ್ಷಣಾ ಸಚಿವ ರಾಜನಾಥ್ ಸಿಂಗ್

ಮುರುಘಾ ಶ್ರೀಗಳ ವಿರುದ್ಧ ಮತ್ತೊಂದು ಆರೋಪ ಕೇಳಿಬಂದಿದೆ. ತಿಪ್ಪಶೆಟ್ಟಿ ಮಠಕ್ಕೆ ಸೇರಿದ ಕೆಂಗೇರಿ ಸೂಲಿಕೆರೆಯ 8 ಕೋಟಿ ಮೌಲ್ಯದ ಮಠದ ಆಸ್ತಿ 49 ಲಕ್ಷ ರೂಪಾಯಿಗಳಿಗೆ ಮಾರಾಟವಾಗಿದೆ ಮುರುಘಾಶ್ರೀಗಳ ವಿರುದ್ಧ ಪಿ.ಎಸ್.ಪ್ರಕಾಶ್ ಎಂಬುವರ ಖಾಸಗಿ ದೂರು ನೀಡಿದ್ದಾರೆ.

ಶ್ರೀಗಳ ವಿರುದ್ಧ ಜಮೀನು  ಅಕ್ರಮ ಮಾರಾಟ, ವಂಚನೆ, ವಿಶ್ವಾಸದ್ರೋಹ ಆರೋಪ ಮಾಡಿದ್ದು, ಮುರುಘಾ ಶರಣರ ವಿರುದ್ಧ 2013ರಲ್ಲಿ ಖಾಸಗಿ ದೂರು ದಾಖಲಾಗಿತ್ತು. ಸಮನ್ಸ್ ನೀಡಿದರೂ ಕೋರ್ಟ್ಗೆ ಹಾಜರಾಗದ ಹಿನ್ನೆಲೆಯಲ್ಲಿ ಮುರುಘಾ ಶರಣರ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿ ಮಾಡಲಾಗಿತ್ತು. ಹೀಗಾಗಿ ಮುರುಘಾ ಮಠದ ಸ್ವಾಮೀಜಿ ಮತ್ತೊಂದು ಸಂಕಷ್ಟ ಎದುರಾಗಿದ್ದು, ಬೆಂಗಳೂರು ಮೆಟ್ರೊಪಾಲಿಟನ್ಮ್ಯಾಜಿಸ್ಟ್ರೇಟ್ ಕೋರ್ಟ್ನಿಂದ ಅರೆಸ್ಟ್ ವಾರಂಟ್ ಜಾರಿ ಮಾಡಲಾಗಿದೆ.​​

BIGG NEWS : ಸಾರ್ವಜನಿಕರೇ ಗಮನಿಸಿ : ಗ್ರಾಮಾ ಒನ್ ಕೇಂದ್ರದಲ್ಲಿ `ಆಯುಷ್ಮಾನ್ ಆರೋಗ್ಯ ಕಾರ್ಡ್’ ಪಡೆಯಬಹುದು

Share.
Exit mobile version