ಬೆಂಗಳೂರು: ಈ ತಿಂಗಳ ಆರಂಭದಲ್ಲಿ ಬೆಂಗಳೂರಿಗೆ ಬಂದಿದ್ದ ಮಧ್ಯವಯಸ್ಕ ಇಥಿಯೋಪಿಯನ್ ಪ್ರಜೆಗೆ ಮಂಕಿಪಾಕ್ಸ್ ರೋಗಲಕ್ಷಣಗಳು ಕಂಡುಬಂದಿವೆ ಎಂದು ಶಂಕಿಸಿದ ನಂತರ ಅವರನ್ನು ಮಂಕಿಪಾಕ್ಸ್ ಪರೀಕ್ಷೆಗೆ ಒಳಪಡಿಸಲಾಯಿತು. ಇದು ಚಿಕನ್ ಪಾಕ್ಸ್ ಪ್ರಕರಣ ಎಂದು ಅವರ ವರದಿ ಈಗ ದೃಢಪಡಿಸಿದೆ. ಈ ಬಗ್ಗೆ ಆರೋಗ್ಯ ಸಚಿವ ಆರ್‌ ಸುಧಾಕರ್‌ ಟ್ವಿಟರ್‌ನಲ್ಲಿ ಮಾಹತಿ ನೀಡಿದ್ದಾರೆ.

ಬಾಧಿತ ದೇಶಗಳಿಂದ ಬೆಂಗಳೂರು/ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ಆಗಮಿಸುವ ಪ್ರಯಾಣಿಕರನ್ನು ಜೊತೆಗೆ ಜ್ವರ, ಶೀತ ಮತ್ತು ಬೆವರು, ದುಗ್ಧರಸ ಗ್ರಂಥಿ ಊತ, ತಲೆನೋವು, ಸ್ನಾಯು ನೋವು, ಬಳಲಿಕೆ, ಗಂಟಲು ನೋವು ಮತ್ತು ಕೆಮ್ಮು, ಚರ್ಮದ ದದ್ದುಗಳಿಗಾಗಿ ಪ್ರತ್ಯೇಕವಾಗಿ ಪರೀಕ್ಷಿಸಲಾಗುತ್ತಿದೆ ಅಂತ ಅವರು ಇದೇ ವೇಳೇ ಹೇಳಿದ್ದಾರೆ..

Share.
Exit mobile version