ಬೆಂಗಳೂರು : ನಗರದಲ್ಲಿನ ಈದ್ಗಾ ಮೈದಾನ ವಿವಾದಕ್ಕೆ ಈಗ ಮತ್ತೊಂದು ಸ್ಪೋಟಕ ಟ್ವಿಸ್ಟ್ ಸಿಕ್ಕಿದೆ. ಈದ್ಗಾ ಮೈದಾನ ( Edga Maidana ) ಸಂಬಂಧದ ದಾಖಲೆಗಳನ್ನು ನಾಳೆ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ( MLA Zameer Ahmad Khan ) ಬಿಡುಗಡೆ ಮಾಡಲಿದ್ದಾರೆ. ಇದೇ ವೇಳೆ ಈದ್ಗಾ ಮೈದಾನ ನಮ್ಮ ಮಾಲೀಕತ್ವದಲ್ಲಿ ಇಲ್ಲ ಎಂಬುದಾಗಿ ಬಿಬಿಎಂಪಿ ( BBMP ) ಕೂಡ ಸ್ಪಷ್ಟ ಪಡಿಸಿದೆ. ಈ ಮೂಲಕ ಬೆಂಗಳೂರಿನ ಈದ್ಗಾ ಮೈದಾನ ವಿವಾದಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಇಡಿಯಿಂದ ವಿಚಾರಣೆ ನೆಪದಲ್ಲಿ ರಾಹುಲ್ ಗಾಂಧಿಗೆ ಕಿರುಕುಳ – ಮಾಜಿ ಸಿಎಂ ಕುಮಾರಸ್ವಾಮಿ ಕಿಡಿ
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಶಾಸಕ ಜಮೀರ್ ಅಹ್ಮದ್ ಖಾನ್, ಈದ್ಗಾ ಮೈದಾನ ಸಂಬಂಧ ನಮ್ಮ ಬಳಿಯಲ್ಲಿ ದಾಖಲೆಗಳಿದ್ದಾವೆ. ಆ ದಾಖಲೆಗಳನ್ನು ನಾಳೆ ಬಹಿರಂಗವಾಗಿ ಬಿಡುಗಡೆ ಮಾಡೋದಾಗಿ ಹೇಳಿದರು.
ನಮ್ಮ ನಾಯಕ ರಾಹುಲ್ ಗಾಂಧಿಗೆ ಇಡಿ ಕಿರುಕುಳ ನಿಲ್ಲಿಸೋವರೆಗೆ ನಮ್ಮ ಹೋರಾಟ ನಿಲ್ಲಲ್ಲ – ಶಾಸಕ ಜಮೀರ್ ಅಹ್ಮದ್ ಖಾನ್
ಮತ್ತೊಂದೆಡೆ ಬಿಬಿಎಂಪಿಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು, ಈದ್ಗಾ ಮೈದಾನ ನಮ್ಮ ಮಾಲೀಕತ್ವದಲ್ಲಿ ಇಲ್ಲ. ವಕ್ಬ್ ಬೋರ್ಡ್ ಖಾತಾ ಮಾಡಿಕೊಳ್ಳಲು ಅರ್ಜಿ ಸಲ್ಲಿಸಬಹುದು. ಆ ದಾಖಲೆಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
BIG NEWS: ಯಾರ್ ಇವರಿಗೆ ‘ಅಗ್ನಿಪಥ್ ಯೋಜನೆ’ ಜಾರಿಗೆ ತರಲು ಹೇಳಿದ್ದು.? – ಮಾಜಿ ಸಿಎಂ ಕುಮಾರಸ್ವಾಮಿ
ಇನ್ನೂ ಈದ್ಗಾ ಮೈದಾನದಲ್ಲಿ ಕಾರ್ಯಕ್ರಮ ನಡೆಸುವ ಸಂಬಂಧ ಹಲವರು ಅರ್ಜಿ ಸಲ್ಲಿಸಿದ್ದಾರೆ. ಆದ್ರೇ ನಮಗೆ ಅನುಮತಿ ನೀಡೋದಕ್ಕೆ ಬರೋದಿಲ್ಲ. ಈ ಬಗ್ಗೆ ವಕ್ಫ್ ಬೋರ್ಡ್ ಗೆ ಸಂಬಂಧಿಸಿದಂತವರು ಅರ್ಜಿಯನ್ನು ಸಲ್ಲಿಸಬಹುದು. ವಕ್ಫ್ ಬೋರ್ಡ್ ಈ ಅರ್ಜಿಗಳ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.
ಪ್ರಧಾನಿ ಮೋದಿ ಹೇಳ್ತಾ ಇರೋದು ಸುಳ್ಳು: 75 ವರ್ಷಗಳ ಅಭಿವೃದ್ಧಿ 8 ವರ್ಷಗಳಲ್ಲಿ ಆಗಿದ್ದಲ್ಲ – HDK