ಬೆಂಗಳೂರು: ನಗರದ ಜನತೆಯನ್ನು ಬೆಚ್ಚಿ ಬೀಳುವಂತೆ ಹಾಡ ಹಗಲೇ ನಡೆದಿದ್ದಂತ ಅರ್ಚನಾ ರೆಡ್ಡಿ ಎಂಬುವರ ಕೊಲೆ ಪ್ರಕರಣ ಸಂಬಂಧ, ಅವರ ಪುತ್ರಿ ಯುವಿಕಾ ಎಂಬುವರನ್ನು ಸತತ ಎರಡು ದಿನಗಳ ಕಾಲ ವಿಚಾರಣೆ ನಡೆಸಿದ ಬಳಿಕ, ಇಂದು ಅರ್ಚಾನಾ ರೆಡ್ಡಿ ಕೊಲೆ ( Archana Reddy Murder Case ) ಪ್ರಕರಣದಲ್ಲಿ ಅವರ ಪುತ್ರಿ ಯುವಿಕಾಳನ್ನು ಪೊಲೀಸರು ಬಂಧಿಸಿದ್ದಾರೆ.
BIGG BREAKING NEWS: ‘ಸೆಂಚುರಿಯನ್ ಮೈದಾನ’ದಲ್ಲಿ ಭಾರತಕ್ಕೆ ಐತಿಹಾಸಿಕ ಜಯ | India vs South Africa 1st Test
ಕಳೆದ ಎರಡು ದಿನಗಳ ಹಿಂದೆ ಬೆಂಗಳೂರಿನ ಹೆಚ್ ಎಸ್ ಆರ್ ಲೇ ಔಟ್ ನ ಮಹಿಳೆ ಅರ್ಚನಾ ರೆಡ್ಡಿ ಎಂಬುವರು ಹೊಸೂರು ರಸ್ತೆಯ ಹೊಸ ರೋಡ್ ಜಂಕ್ಷನ್ ಬಳಿಯಲ್ಲಿ ಮನೆಗೆ ಮರಳುತ್ತಿದ್ದರು. ಈ ಸಂದರ್ಭದಲ್ಲಿ ಆಕೆಯನ್ನು ಹೆದ್ದಾರಿಯಲ್ಲೇ ಅಡ್ಡಗಟ್ಟಿ ತೆಡೆದಂತ ಹಂತಕರಿಬ್ಬರು, ಮಾರಕಾಸ್ತ್ರಗಳಿಂದ ಕೊಲೆ ಮಾಡಿದ್ದಾರೆ. ಹೆದ್ದಾರಿಯಲ್ಲೇ ನಡೆದಂತ ಈ ಘಟನೆಯಿಂದ ಬೆಂಗಳೂರಿನ ಜನರು ಬೆಚ್ಚಿ ಬೀಳುವಂತೆ ಮಾಡಿತ್ತು.
HEALTH TIPS : ತ್ವಚೆಯ ಸೌಂದರ್ಯ ವೃದ್ಧಿಗೆ ಮನೆಯೊಳಗಿದೆ ಸಿಂಪಲ್ ಟಿಪ್ಸ್….
ಅರ್ಚನಾ ರೆಡ್ಡಿ ಕೊಲೆಯ ಬಗ್ಗೆ ನಿಖರ ಕಾರಣ ಏನೆಂದು ತಿಳಿದು ಬಂದಿಲ್ಲ. ಆದ್ರೇ.. ಅನೈತಿಕ ಸಂಬಂಧಕ್ಕೆ ನವೀನ್ ಹಾಗೂ ಸಂತೋಷ್ ಎಂಬುವರು ಕೃತ್ಯ ನೆಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆಸಿದ್ದರು. ಜೊತೆಗೆ ಪ್ರಕರಣ ಸಂಬಂಧ ಅರ್ಚನಾ ರೆಡ್ಡಿಯವರ ಪುತ್ರಿ ಯುವಿಕಾಳನ್ನು 2 ದಿನಗಳಿಂದ ವಿಚಾರಣೆಗೆ ಒಳಪಡಿಸಿದ್ದರು.
BIG NEWS : ಕರೋನ ಕೇಸ್ ಹೆಚ್ಚಳ : ಶಾಲಾ ಮಕ್ಕಳಿಗೆ 15 ದಿನ ರಜೆ ಘೋಷಿಸಿದ ಈ ರಾಜ್ಯ ಸರ್ಕಾರ
ಈ ವಿಚಾರಣೆಯ ಬಳಿಕ, ಅರ್ಚನಾ ರೆಡ್ಡಿ ಕೊಲೆ ಪ್ರಕರಣದಲ್ಲಿ ಅವರ ಪುತ್ರಿ ಯುವಿಕಾಳನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಅರ್ಚನಾ ರೆಡ್ಡಿ ಕೊಲೆ ಪ್ರಕರಣಕ್ಕೆ ಈಗ ಸ್ಪೋಟಕ ಟ್ವಿಸ್ಟ್ ಸಿಕ್ಕಂತೆ ಆಗಿದೆ. ಮತ್ತಷ್ಟು ಮಾಹಿತಿ ತನಿಖೆಯಿಂದ ತಿಳಿದು ಬರಬೇಕಿದೆ.