ಮಂಗಳೂರು: ನಗರದಲ್ಲಿ ಆಟೋ ರಿಕ್ಷಾದಲ್ಲಿ ಸಂಭವಿಸಿದಂತ ಶಂಕಿತ ಸ್ಪೋಟಕಕ್ಕೆ ಈಗ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಈ ಸ್ಪೋಟಕ ಘಟನೆಯ ಬಳಿಕ, ಶಿವಮೊಗ್ಗದ ಉಗ್ರ ಶಾರಿಕ್ ನಾಪತ್ತೆಯಾಗಿರೋದು ಹಲವು ಶಂಕೆಯನ್ನು ಹುಟ್ಟು ಹಾಕಿದೆ. 

ಮಂಗಳೂರು ಸ್ಪೋಟಕಕ್ಕೂ ಹಾಗೂ ಶಿವಮೊಗ್ಗದಿಂದ ನಾಪತ್ತೆಯಾಗಿರುವಂತ ಶಂಕಿತ ಉಗ್ರ ಶಾರಿಕ್ ಗೂ ಲಿಂಕ್ ಇದೆ ಎಂಬುದಾಗಿ ಪೊಲೀಸರು ಶಂಕಿತಸಿದ್ದಾರೆ. ಅಲ್ಲದೇ ಈ ಸ್ಪೋಟಕದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಶಾರಿಕ್ ಎನ್ನಲಾಗಿದೆ. ಸ್ಪೋಟಕದ ವೇಳೆಯಲ್ಲಿ ಗಾಯಾಳುವಿನ ಮುಖಕ್ಕೆ ಸಂಪೂರ್ಣಗಾಯವಾಗಿರೋದಾಗಿ ತಿಳಿದು ಬಂದಿದೆ. ಈ ಹಿನ್ನಲೆಯಲ್ಲಿ ಶಂಕಿತ ಉಗ್ರ ಶಾರೀಕ್ ನಾಪತ್ತೆಯಾಗಿರೋದು ಹಲವು ಅನುಮಾನಕ್ಕೆ ಕಾರಣವಾಗಿದೆ.

ಮತ್ತೊಂದೆಡೆ ಮಂಗಳೂರು ಸ್ಪೋಟಕ ಪ್ರಕರಣಕ್ಕೂ, ಪ್ರೇಮರಾಜ್ ಗೂ ಯಾವುದೇ ಸಂಬಂಧವಿಲ್ಲ ಎಂಬುದಾಗಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಸ್ಪಷ್ಟ ಪಡಿಸಿದ್ದಾರೆ. ಆತ ಗುರುತಿನ ಚೀಟಿ ಕಳ್ಳತನಕ್ಕೆ ಬಲಿಯಾಗಿದ್ದಾನೆ. ಈ ಘಟನೆಗೂ ಪ್ರೇಮರಾಜ್ ಗೂ ಯಾವುದೇ ಸಂಬಂಧವಿಲ್ಲ ಎಂಬುದಾಗಿ ತಿಳಿಸಿದ್ದಾರೆ.

Share.
Exit mobile version