ಸುಭಾಷಿತ :

Sunday, March 29 , 2020 10:53 AM

ಅಕ್ರಮ `BPL’ ಕಾರ್ಡ್ ದಾರರಿಗೆ ಬಿಗ್ ಶಾಕಿಂಗ್ ನ್ಯೂಸ್!


Saturday, February 22nd, 2020 6:06 am

ಬೆಂಗಳೂರು : ಅಕ್ರಮವಾಗಿ ಬಿಪಿಎಲ್ ಕಾರ್ಡ್ ದುರುಪಯೋಗ ಪಡಿಸಿಕೊಂಡು, ಪಡಿತರ ಧಾನ್ಯ ಪಡೆಯುತ್ತಿರುವವರ ವಿರುದ್ಧ ಸರ್ಕಾರ ಇದೀಗ ಕಠಿಣ ಕ್ರಮಕ್ಕೆ ಮುಂದಾಗಿದ್ದು, ಗಿವ್ ಇಟ್ ಆಪ್ ಗೆ ಅವಕಾಶ ಕೊಟ್ಟರೂ ಕಾರ್ಡ್ ಮರಳಿಸದವರ ಪತ್ತೆಗಾಗಿ ಖುದ್ದು ಕಾರ್ಯಾಚರಣೆಗೆ ಇಳಿದಿರುವ ಆಹಾರ ಇಲಾಖೆ ಅಧಿಕಾರಿಗಳು ಈಗ ಮನೆಮನೆ ಶೋಧ ಕಾರ್ಯ ಆರಂಭಿಸಿದ್ದಾರೆ.

ಆರ್ಥಿಕವಾಗಿ ದುರ್ಬಲರಿರುವ ಕುಟುಂಬಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ನೀಡುತ್ತಿರುವ ಬಿಪಿಎಲ್ ಪಡಿತರವನ್ನು ಕೆಲವು ಸದೃಢ ಕುಟುಂಬಗಳು ಸುಳ್ಳು ಮಾಹಿತಿ ನೀಡಿ ಪಡೆದು ಕೊಂಡು, ಸರ್ಕಾರಕ್ಕೆ ವಂಚನೆ ಮಾಡಿದ್ದಾರೆ. ಹೀಗಾಗಿ ಇದೀಗ ರಾಜ್ಯ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ.

ಅಕ್ರಮವಾಗಿ ಕಾರ್ಡ್ ಪಡೆದು ರೇಷನ್ ಪಡೆಯುತ್ತಿದ್ದ ಆರ್ಥಿಕ ಸ್ಥಿತಿವಂತರು ಕ್ರಿಮಿನಲ್ ಪ್ರಕರಣಕ್ಕೆ ಹೆದರಿ ಕಳೆದ 6 ತಿಂಗಳಲ್ಲಿ 61,919 ಬಿಪಿಎಲ್ ಮತ್ತು 1,658 ಅಂತ್ಯೋದಯ ಸೇರಿ ಒಟ್ಟು 63,577 ಪಡಿತರ ಕಾರ್ಡ್ ಗಳನ್ನು ವಾಪಸ್ ಮಾಡಿದ್ದಾರೆ. ಈ ಕಾರ್ಡ್ ಗಳನ್ನು ರದ್ದುಪಡಿಸಿದ್ದರಿಂದ 1,06,186 ಕುಟುಂಬದ ಸದಸ್ಯರ ಹೆಸರುಗಳು ಡಿಲೀಟ್ ಆಗಿವೆ.

ವಾರ್ಷಿಕ 1.2 ಲಕ್ಷ ರೂ.ಗಿಂತ ಹೆಚ್ಚು ವರಮಾನ, ಹಳ್ಳಿಗಳಲ್ಲಿ 7.5 ಎಕರೆಗಿಂತ ಹೆಚ್ಚು ಭೂಮಿ ಹೊಂದಿದ್ದರೆ, ನಗರದಲ್ಲಿ 1 ಸಾವಿರ ಚದರ ಅಡಿಗಿಂತ ಹೆಚ್ಚು ವಿಸ್ತೀರ್ಣದ ಮನೆ ಇದ್ದರೆ, ನಿವೃತ್ತ ಸರ್ಕಾರಿ ನೌಕರರು, ಬೈಕ್, ಕಾರು ಇನ್ನಿತರ ಸೌಲಭ್ಯ ಹೊಂದಿರುವ ಕುಟುಂಬಗಳು ಬಿಪಿಎಲ್ ಕಾರ್ಡ್ ಹೊಂದಿದ್ದರೆ ಅವು ಅಕ್ರಮ ಎಂದು ಪರಿಗಣಿಸಲಾಗುತ್ತದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions