ಬೆಂಗಳೂರು: ರಾಜ್ಯದ ಸರ್ಕಾರಿ ಅಧಿಕಾರಿ, ನೌಕರರ ಸಾರ್ವತ್ರಿಕ ವರ್ಗಾವಣೆ ( Universal Transfer )  ಅವಧಿ ಮುಗಿದ್ದದರೂ, ಸಿಎಂ ಕಚೇರಿಗೆ ಪದೇ ಪದೇ ವರ್ಗಾವಣೆಗಾಗಿ ಶಿಫಾರಸ್ಸು, ಬೇಡಿಕೆಯ ಮನವಿಗಳನ್ನು, ಕೋರಿಕೆಗಳನ್ನು ಸಲ್ಲಿಸಲಾಗುತ್ತಿತ್ತು. ಈ ಹಿನ್ನಲೆಯಲ್ಲಿ ವರ್ಗಾವಣೆ ಪ್ರಸ್ತಾವನೆ ಸಲ್ಲಿಸದಂತೆ ಸಿಎಂ ಬೊಮ್ಮಾಯಿ ( CM Bommai ) ಖಡಕ್ ಸೂಚನೆ ನೀಡಿದ್ದಾರೆ.

ಮಾದಪ್ಪನ ಹಾಡನ್ನು ಕೆಟ್ಟದಾಗಿ ಬಿಂಬಿಸಿದಾಗ ಎಲ್ಲಿಗೆ ಹೋಗಿತ್ತು ನಿಮ್ಮ ಬುದ್ದಿ ನಟ ರಿಷಬ್ ಶೆಟ್ಟಿ ಜನತೆ ಪ್ರಶ್ನೆ

ಈ ಸಂಬಂಧ ಆಯಾ ಇಲಾಖೆಗೆ ಮೌಖಿಕ ಸೂಚನೆಯಲ್ಲದೇ ಅಧಿಕೃತ ಟಿಪ್ಪಣಿಯನ್ನು ಹೊರಡಿಸಿರುವಂತ ಸಿಎಂ ಬಸವರಾಜ ಬೊಮ್ಮಾಯಿ ( CM Basavaraj Bommai ) ಅವರು, ವರ್ಗಾವಣೆ ಪ್ರಸ್ತಾವನೆಗಳನ್ನು ಕಳುಹಿಸಕೂಡದಂತೆ ಸೂಚಿಸಿದ್ದಾರೆ.

BREAKING NEWS : ರಾಜ್ಯದಲ್ಲಿ ಮತ್ತೊಂದು ಗ್ಯಾಂಗ್ ರೇಪ್ : ಹೊಸಪೇಟೆಯಲ್ಲಿ 9 ನೇ ತರಗತಿ ಬಾಲಕಿ ಮೇಲೆ ಅತ್ಯಾಚಾರ

ಈ ಮೊದಲು ಅರಣ್ಯ, ಪರಿಸರ ಜೀವಶಾಸ್ತ್ರ ಇಲಾಖೆಗೆ ಸಿಎಂ ಬೊಮ್ಮಾಯಿ ವರ್ಗಾವಣೆ ಪ್ರಸ್ತಾವನೆ ಸಿಎಂ ಕಚೇರಿಗೆ ಸಲ್ಲಿಸದಂತೆ ಖಡಕ್ ಸೂಚನೆ ನೀಡಿದ್ದರು. ಈ ಬೆನ್ನಲ್ಲೇ ಆರೋಗ್ಯ, ಶಿಕ್ಷಣ ಇಲಾಖೆ ಸೇರಿದಂತೆ ಇತರೆ ಇಲಾಖೆಗೂ ಇದೇ ರೀತಿಯಾಗಿ ವರ್ಗಾವಣೆಗಾಗಿ ಸಿಎಂ ಕಚೇರಿಗೆ ಪ್ರಸ್ತಾವನೆ ಸಲ್ಲಿಸದಂತೆ ಸೂಚಿಸಿದ್ದಾರೆ ಎನ್ನಲಾಗಿದೆ.

ತಮಿಳುನಾಡಿನಾದ್ಯಂತ ದೇವಾಲಯಗಳಲ್ಲಿ ಮೊಬೈಲ್ ಫೋನ್ ನಿಷೇಧಿಸಿದ ಮದ್ರಾಸ್ ಹೈಕೋರ್ಟ್

ಅಂದಹಾಗೇ ರಾಜ್ಯದ ಸರ್ಕಾರಿ ಅಧಿಕಾರಿ, ನೌಕರರ ಸಾರ್ವತ್ರಿಕ ವರ್ಗಾವಣೆ ಈಗಾಗಲೇ ಮುಕ್ತಾಯಗೊಂಡಿದೆ. ಹೀಗಿದ್ದೂ ಅನೇಕ ಇಲಾಖೆಯಿಂದ ಸಿಎಂ ಕಚೇರಿಗೆ ವರ್ಗಾವಣೆಗಾಗಿ ಪ್ರಸ್ತಾವನೆಯನ್ನು ಮೇಲಿನಿಂದ ಮೇಲೆ ಸಲ್ಲಿಕೆ ಮಾಡಲಾಗುತ್ತಿದೆ ಎನ್ನಲಾಗುತ್ತಿದೆ. ಈ ಹಿನ್ನಲೆಯಲ್ಲಿಯೇ ಯಾವುದೇ ಇಲಾಖೆಯಿಂದ ನೌಕರರ ವರ್ಗಾವಣೆ ಪ್ರಸ್ತಾವನೆಯನ್ನು ಸಿಎಂ ಕಚೇರಿಗೆ ಸಲ್ಲಿಸದಂತೆ ಈಗ ಅಧಿಕೃತ ಟಿಪ್ಪಣಿಯಲ್ಲಿ ತಿಳಿಸಿದ್ದಾರೆ.

Share.
Exit mobile version