ಬೆಂಗಳೂರು :ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಜನತೆಗೆ ಇದೀಗ ಟೊಮೊಟೊ ಸೇರಿದಂತೆ ತರಕಾರಿ ಬೆಲೆಯಲ್ಲಿ ಏರಿಕೆಯಾಗಿದ್ದು, ಜನಸಾಮಾನ್ಯರು ತತ್ತರಿಸಿದ್ದಾರೆ.

ಈ ನಡುವೆ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಟೊಮೆಟೊ ಸೇರಿದಂತೆ ಕಾಯಿಪಲ್ಲೆ, ಹಸಿರುಪಲ್ಲೆಗಳ ದರಗಳು ಹೆಚ್ಚಳವಾಗುತ್ತಿದ್ದು, ಬೆಲೆ ಕೇಳಿಸಿಕೊಳ್ಳುವ ಗ್ರಾಹಕ ತಮ್ಮಹಣಕಾಸಿನ ಸ್ಥಿತಿಯನ್ನು ಎರಡು ಎರಡು ಬಾರಿ ಯೋಚನೆ ಮಾಡಿ ಯಿಪಲ್ಲೆ, ಹಸಿರುಪಲ್ಲೆಗಳನ್ನು ಕೊಂಡುಕೊಳ್ಳುತ್ತಿದ್ದಾರೆ. ಕಳೆದ ವಾರವಷ್ಟೆ ಕೆಜಿಗೆ 50 ರೂ.ಗೆ ದೊರೆಯುತ್ತಿದ್ದ ಟೊಮೆಟೊ, ಈಗ ಏಕಾಏಕಿ 100 ರೂ. ಗಡಿ ದಾಟಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬಿದಿದ್ದೆ. ಇವೆಲ್ಲದರ ನಡುವೆ ಶನಿವಾರದಿಂದ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯೂ ಹೆಚ್ಚಳ ಕಂಡಿದ್ದು, ಇದು ಕೂಡ ತರಕಾರಿಗಳ, ದಿನಸಿ ವಸ್ತುಗಳ ಬೆಲೆಯಲ್ಲಿನ ಹೆಚ್ಚಳಕ್ಕೆ ಕಾರಣವಾಗಬಹುದು ಎನ್ನಲಾಗಿದೆ.

ಇನ್ನೂ ಕ್ಯಾರೆಟ್ ಬೆಲೆ ಕೆಜಿಗೆ 110 ರೂ.ಇದ್ದರೆ, ಆಲೂಗಡ್ಡೆ ಬೆಲೆ 60 ರೂ. ಆಗಿದೆ. ಹೂಕೋಸು 60 ರೂ, ಬೆಂಡೆಕಾಯಿ 66 ರೂ., ಕ್ಯಾಪ್ಸಿಕಂ 80 ರೂ., ನುಗ್ಗೇಕಾಯಿ 213 ರೂ., ಮೆಣಸಿನಕಾಯಿ 140 ರೂ., ಬೀನ್ಸ್ 150 ರೂ., ಬಿಟ್‌ರೂಟ್‌ 63 ರೂ., ಬದನೆಕಾಯಿ 90 ರೂ.ಗಡಿ ದಾಟಿದ್ದರೆ. ಸೊಪ್ಪಿನ ದರ ಕೂಡ ಹೆಚ್ಚಾಗಿದ್ದು ಪಾಲಕ್ ಸೊಪ್ಪು 1 ಕೆಜಿಗೆ 115 ರೂ., ಕೊತ್ತಂಬರಿ ಸೊಪ್ಪಿನ ಬೆಲೆ 300 ರೂ. ಮೆಂತ್ಯ ಸೊಪ್ಪಿನ ಬೆಲೆ ಒಂದು ಕೆಜಿಗೆ 245 ರೂ. ಆಗಿದೆ.

Share.
Exit mobile version