ಸುಭಾಷಿತ :

Monday, March 30 , 2020 2:01 AM

ವಿದೇಶ ಪ್ರವಾಸಕ್ಕೆ ಹೋಗುವವರಿಗೆ ಕೇಂದ್ರದಿಂದ ಬಿಗ್ ಶಾಕ್!


Saturday, February 22nd, 2020 9:28 am

ನವದೆಹಲಿ : ಕೇಂದ್ರ ಸರ್ಕಾರವು ವಿದೇಶಿ ಪ್ರವಾಸಕ್ಕೆ ಹೋಗುವವರಿಗೆ ಬಿಗ್ ಶಾಕ್ ನೀಡಿದ್ದು, ಏಪ್ರಿಲ್ 1 ರಿಂದ ವಿದೇಶಕ್ಕೆ ಪ್ರವಾಸಕ್ಕೆಹೋಗುವವರು ಟಿಸಿಎಸ್ (ಟ್ಯಾಕ್ಸ್ ಕಲೆಕ್ಷನ್ ಅಟ್ ಸೋರ್ಸ್) ಕಟ್ಟಬೇಕು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ವಾರ್ಷಿಕ 7 ಲಕ್ಷ ರೂ. ವೆಚ್ಚ ಮಾಡಿ ಪ್ರವಾಸಕ್ಕೆ ಹೋಗುವವರು, ಪ್ಯಾನ್ ಹೊಂದಿದ್ದರೆ ಶೇ. 5 ಇಲ್ಲದಿದ್ದರೆ ಶೇ. 10ರಷ್ಟು ಟಿಸಿಎಸ್ ಪಾವತಿಸಬೇಕು. ಪ್ಯಾಕೇಜ್ ಟೂರ್ ಆಯೋಜಿಸುವಾತ ಟಿಸಿಎಸ್ ಅನ್ನು ಸಂಗ್ರಹಿಸಬೇಕು ಎಂಬ ಅಂಶ ಬಜೆಟ್ ನಲ್ಲಿದ್ದು, ತೆರಿಗೆ ಸಲಹೆಗಾರರು ಇದನ್ನು ಪತ್ತೆ ಮಾಡಿದ್ದಾರೆ.

ಆದಾಯ ತೆರಿಗೆ ರಿಟರ್ನ್ ಅರ್ಜಿಯಲ್ಲಿ ಪಾಸ್ ಪೋರ್ಟ್ ವಿರಗಳನ್ನು ನಮೂದಿಸಬೇಕಾಗುತ್ತದೆ. ಆದರೆ, ಬಹುತೇಕ ತೆರಿಗೆದಾರರು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಒಂದು ವೇಳೆ ತೆರಿಗೆದಾರರು ವಿದೇಶಕ್ಕೆ ಹೋಗಿ ಬಂದಿದ್ದರೂ ತೆರಿಗೆ ಸಲಹೆಗಾರರು ಕೂಡ ಪಾಸ್ ಪೋರ್ಟ್ ವಿವರ ನಮೂದಿಸಲು ಸೂಚಿಸುವುದಿಲ್ಲ. ಆದರೆ ಇದೀಗ ಟಿಸಿಎಸ್ ಸಂಗ್ರಹದ ಮೂಲಕ ವಿದೇಶ ಪ್ರವಾಸಕ್ಕೆ ಹೋಗವವರ ಮೇಲೆ ಕೇಂದ್ರ ಸರ್ಕಾರ ನಿಗಾ ಇಡಲು ಹೊಸ ಪ್ಲಾನ್ ರೂಪಿಸಿದೆ ಎನ್ನಲಾಗಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions