ಕೆಎನ್‌ಎನ್‌ಡಿಜಿಟಲ್ ಡೆಸ್ಕ್ : ಪ್ರತಿಯೊಬ್ಬ ಹುಡುಗಿಯೂ ತನ್ನ ಮದುವೆ ಬಗ್ಗೆ ಅನೇಕ ಕನಸುಗಳನ್ನ ಹೊಂದಿರ್ತಾಳೆ.ಅದ್ರಂತೆ, ಮದುವೆಯ ನಂತ್ರ ಅವಳು ಹೊಸ ಸಂತೋಷದ ಜೀವನದ ಭರವಸೆಯಲ್ಲಿ ತನ್ನ ಮನೆಯ ಹೊಸ್ತಿಲನ್ನ ದಾಟುತ್ತಾಳೆ. ಆದ್ರೆ, ಕೆಲವೊಮ್ಮೆ ಕನಸುಗಳು ಇದ್ದಕ್ಕಿದ್ದಂತೆ ಮುರಿದು ಹೋಗುತ್ವೆ. ಇಟಾವಾ ನಗರದಲ್ಲಿಯೂ ಇಂತಹದ್ದೇ ಒಂದು ಘಟನೆ ನಡೆದಿದೆ. ತನ್ನ ಮೊದಲ ರಾತ್ರಿಯೇ ಕರಾಳ ರಾತ್ರಿಯಾಗಿ ಉಳಿಯಲಿದೆ ಅನ್ನೋದು ಮದುವೆಯ ನಂತ್ರ ತನ್ನ ಅತ್ತೆಯ ಮನೆಗೆ ಬಂದ ಸ್ವತಃ ಯುವತಿಗೆ ಗೊತ್ತಿರಲಿಲ್ವೇನು. ಯಾಕಂದ್ರೆ, ಮಧುಚಂದ್ರಕ್ಕೆಂದು ಕೊಣೆಯೊಳಗೊದ ನವವಧುವಿನ ಸ್ಥಿತಿ ಸಧ್ಯ ಚಿಂತಾಜನಕವಾಗಿದೆ.
ನವೆಂಬರ್ 28ರಂದು ಯುವತಿಯ ಮದುವೆ ನಡೆದಿದ್ದು, ನವೆಂಬರ್ 29ರಂದು ಗಂಡನ ಮನೆಗೆ ಆಗಮಿಸಿದ್ದಾಳೆ. ಇನ್ನು ಸಂಬಂಧಿಕರು ಕೂಡ ರಾತ್ರಿ ಶಾಸ್ತ್ರೋತ್ರವಾಗಿ ಮಧುಚಂದ್ರಕ್ಕೆಂದು ಯುವತಿಯನ್ನ ಕೋಣೆಗೆ ಕಳುಹಿಸಿಕೊಟ್ಟಿದ್ದಾರೆ. ನಂತ್ರ ಆ ವಧುವನ್ನ ಪುಸಲಾಯಿಸಿದ ವರ ಆಕೆಗೆ ಮಾತ್ರೆಯೊಂದನ್ನ ಕೊಟ್ಟು ತಿನ್ನುವಂತೆ ಒತ್ತಾಯಿಸಿದ್ದಾನೆ. ಆಕೆಯೂ ಮಾತ್ರೆ ತೆಗೆದುಕೊಂಡಿದ್ದು, ನಂತ್ರ ಮೂರ್ಛೆ ತಪ್ಪಿದ್ದಾಳೆ. ನಂತ್ರ ಆ ಯುವತಿಯ ಮೇಲೆ ಆಕೆಯ ಪತಿ ಮತ್ತು ಆತನ ಇಬ್ಬರು ಸ್ನೇಹಿತರು ಅತ್ಯಾಚಾರವೆಸಗಿದ್ದು, ಆಕೆಯ ಸ್ಥಿತಿ ಸಧ್ಯ ಗಂಭೀರವಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಯುವತಿಯ ಪ್ರಕಾರ, ಟ್ಯಾಬ್ಲೆಟ್ ತಿಂದ ನಂತ್ರ ಆಕೆ ಮೂರ್ಛೆ ಹೋಗಿದ್ದಾಳೆ. ಆ ಸಮಯದಲ್ಲಿ ಅವಳಿಗೆ ತಪ್ಪು ನಡೆದಿದೆ. ಆಕೆಗೆ ಪ್ರಜ್ಞೆ ಬಂದಾಗ ಇಬ್ಬರು ಯುವಕರು ಕೊಠಡಿಯಿಂದ ಹೊರಗೆ ಹೋಗುತ್ತಿದ್ದೃು. ಈ ಬಗ್ಗೆ ಆಕೆ ತನ್ನ ಪತಿಯೊಂದಿಗೆ ಮಾತನಾಡಲು ಬಯಸಿದಾಗ, ಇದಕ್ಕೆ ವಿರುದ್ಧವಾಗಿ ಆತ ಆಕೆಯ ಮೇಲೆ ಆರೋಪಿಸಲು ಪ್ರಾರಂಭಿಸಿದ್ದಾನೆ.
ಘಟನೆಯ ನಂತರ ನವವಿವಾಹಿತ ಸ್ಥಿತಿ ಹದಗೆಡಲು ಪ್ರಾರಂಭಿಸಿದ್ದು, ಆಕೆಯನ್ನ ಆಸ್ಪತ್ರೆಗೆ ದಾಖಲಿಸಲಾಯಿತು. ಸಧ್ಯ ಆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಯ, ಪತಿ ಹಾಗೂ ಆತನ ಇಬ್ಬರು ಸ್ನೇಹಿತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನೊಂದ ಸಂತ್ರಸ್ತೆಯ ಕುಟುಂಬಸ್ಥರು ಆಗ್ರಹಿಸಿದ್ದಾರೆ. ಇನ್ನು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಕುಟುಂಬಸ್ಥರಿಗೆ ಭರವಸೆ ನೀಡಿದ್ದಾರೆ.