‘ಶಿವಮೊಗ್ಗ ಜಿಲ್ಲೆ’ಯಲ್ಲೊಂದು ‘ಬಹುದೊಡ್ಡ ಹಗರಣ’: ‘ಸಹಕಾರ ಸಂಘ’ಕ್ಕೆ ಕಟ್ಟಿದ ಹಣ ‘ಕಾರ್ಯದರ್ಶಿ ಪಂಗನಾಮ’

ಶಿವಮೊಗ್ಗ: ಜಿಲ್ಲೆಯಲ್ಲಿ ಸಹಕಾರ ಸಂಘಕ್ಕೆ ಪಿಗ್ಮಿ, ಶೇರು ರೂಪದಲ್ಲಿ ಜನರು ನೀಡಿದಂತ ಹಣವನ್ನೇ, ಕಾರ್ಯದರ್ಶಿಯೊಬ್ಬ ಸ್ವಂತಕ್ಕೆ ಬಳಸಿಕೊಂಡು, ನಾಪತ್ತೆಯಾಗಿರೋದಾಗಿ ಹೇಳಲಾಗುತ್ತಿದೆ. ಈಗ ಸಹಕಾರ ಸಂಘಕ್ಕೆ ಹಣ ಕಟ್ಟಿದಂತ ಜನರು ತಮ್ಮ ದುಡ್ಡು ವಾಪಾಸ್ಸು ಕೊಡಿಸುವಂತೆ ಒತ್ತಾಯಿಸಿದ್ದಾರೆ. ಹೌದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಲ್ಲೇ ಬಹುದೊಡ್ಡ ಹಗರಣ ಎನ್ನುವಂತೆ ಕಲ್ಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಡೆದಿದೆ. ಕಲ್ಮನೆಯಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದಲ್ಲಿ ಶೇರುದಾರರು, ಪಿಗ್ಮಿ ಕಟ್ಟಿದಂತವರ ಲಕ್ಷಾಂತರ ರೂ ಜನರ ಹಣವನ್ನು ನುಂಗಿ ನೀರು ಕುಡಿಯಲಾಗಿದೆ. … Continue reading ‘ಶಿವಮೊಗ್ಗ ಜಿಲ್ಲೆ’ಯಲ್ಲೊಂದು ‘ಬಹುದೊಡ್ಡ ಹಗರಣ’: ‘ಸಹಕಾರ ಸಂಘ’ಕ್ಕೆ ಕಟ್ಟಿದ ಹಣ ‘ಕಾರ್ಯದರ್ಶಿ ಪಂಗನಾಮ’