ತೆರಿಗೆದಾರರಿಗೆ ಬಿಗ್‌ ರಿಲೀಫ್‌: ಲೋಕಸಭೆಯಲ್ಲಿ ತೆರಿಗೆ ವಿಧೇಯಕ ಅಂಗೀಕಾರ..! – Kannada News Now


India

ತೆರಿಗೆದಾರರಿಗೆ ಬಿಗ್‌ ರಿಲೀಫ್‌: ಲೋಕಸಭೆಯಲ್ಲಿ ತೆರಿಗೆ ವಿಧೇಯಕ ಅಂಗೀಕಾರ..!

ನವದೆಹಲಿ: ಕೊರೊನಾ ಸೋಂಕಿನ ನಡುವೆ ತೆರಿಗೆದಾರರಿಗೆ ಅನುಸರಣೆ ಪರಿಹಾರವನ್ನ ಒದಗಿಸಲು, ತೆರಿಗೆ ಕಾನೂನುಗಳಿಗೆ ತಿದ್ದುಪಡಿ ತರುವ ಮಸೂದೆಯನ್ನ ಲೋಕಸಭೆಯು ಅಂಗೀಕರಿಸಿದೆ. ತೆರಿಗೆ ಮತ್ತು ಇತರ ಕಾನೂನುಗಳು (ಕೆಲವು ನಿಬಂಧನೆಗಳ ಸಡಿಲಿಕೆ ಮತ್ತು ತಿದ್ದುಪಡಿ) ಮಸೂದೆ 2020, ಮಾರ್ಚ್‌ನಲ್ಲಿ ಹೊರಡಿಸಲಾದ ತೆರಿಗೆ ಮತ್ತು ಇತರ ಕಾನೂನುಗಳು (ಕೆಲವು ನಿಬಂಧನೆಗಳ ಸಡಿಲಿಕೆ) ಸುಗ್ರೀವಾಜ್ಞೆ, 2020ರ ಮಸೂದೆಗೆ ಬದಲಾವಣೆಗಳನ್ನ ತರಲಾಗಿದೆ. ಹೂಡಿಕೆಯನ್ನ ಉತ್ತೇಜಿಸಲು ತೆರಿಗೆ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನ ಸಹ ಶಿಫಾರಸು ಮಾಡಲಾಗಿದೆ.

ಪಿಎಂ-ಕೇರ್ಸ್ ಫಂಡ್ ನಲ್ಲಿ ವಂತಿಗೆಗಳಿಗೆ ತೆರಿಗೆ ವಿನಾಯಿತಿ ನೀಡಲು ಆದಾಯ ತೆರಿಗೆ ಕಾಯ್ದೆಯ ಉಪಬಂಧಗಳಿಗೆ ತಿದ್ದುಪಡಿ ತರುವ ಮಸೂದೆ. ಈ ಮಸೂದೆಯು ಕನಿಷ್ಠ 8 ಪ್ರಕ್ರಿಯೆಗಳಿಗೆ ಅನ್ವಯವಾಗುವ ಫೇಸ್ ಲೆಸ್ ಮೌಲ್ಯಮಾಪನವನ್ನ ಐ-ಟಿ ಕಾಯಿದೆಯ ಅಡಿಯಲ್ಲಿ ಅನ್ವಯಿಸಲಾಗಿದೆ.

ಜಿಎಸ್ ಟಿ ಮತ್ತು ಆದಾಯ ತೆರಿಗೆ (ಐಟಿ) ಕಾಯ್ದೆಯ ಡಿ.19ರ ಅವಧಿಯಲ್ಲಿ ವಿವಿಧ ಅನುಸರಣೆಯ ಗಡುವುಗಳನ್ನ ಮುಂದೂಡಲು ಸುಗ್ರೀವಾಜ್ಞೆಯ ಅಗತ್ಯವಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
error: Content is protected !!