ಕೇರಳ: ಸ್ಯಾಂಡಲ್ ವುಡ್ ನಲ್ಲಿ ( Sandalwood ) ಹೊಸ ಅಲೆಯನ್ನು ಸೃಷ್ಠಿಸಿ, ಕೆಜಿಎಫ್-2 ( KGF-2 ) ದಾಖಲೆಯನ್ನು ಉಡೀಸ್ ಮಾಡಿದ್ದಂತ ಕಾಂತಾರ ಚಿತ್ರದಲ್ಲಿನ ( Kantara Movie ) ವರಾಹ ರೂಪಂ ಹಾಡಿಗೆ ಕೇರಳ ಕೋರ್ಟ್ ( Kerala Court ) ತಡೆ ನೀಡಿತ್ತು. ಇದೀಗ ಮತ್ತೆ ವರಾಹ ರೂಪಂ ಹಾಡನ್ನು ( Varaha Rupam Song ) ಚಿತ್ರದಲ್ಲಿ ಬಳಕೆ ಮಾಡುವುದಕ್ಕೆ ಕೋಜಿಕ್ಕೋಡ್ ಕೋರ್ಟ್ ಆದೇಶಿಸಿದೆ.

BIG NEWS : ʻಸಲಿಂಗ ವಿವಾಹʼಕ್ಕೆ ಕಾನೂನು ಮಾನ್ಯತೆ ಕೋರಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ದಂಪತಿ | Same-Sex Marriage

ಕೇರಳದ ತೆಕ್ಕುಡಂ ಬ್ರಿಡ್ಜ್ ಬ್ಯಾಂಡ್ ನ ನವರಸಂ ಹಾಡಿನ ಟ್ಯೂನ್ ಅನ್ನು ಕನ್ನಡದ ಕಾಂತಾರ ಚಿತ್ರದಲ್ಲಿನ ವರಾಹ ರೂಪಂ ನಲ್ಲಿ ಬಳಕೆ ಮಾಡಲಾಗಿದೆ ಎಂಬುದಾಗಿ ತೈಕ್ಕುಡಂ ಬ್ರಿಡ್ಜ್ ಕೇರಳದ ಕೋಝಿಕ್ಕೋಡ್ ಪ್ರಧಾನ ಜಿಲ್ಲಾ ಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ್ದಂತ ನ್ಯಾಯಪೀಠವು ಒಪ್ಪಿಗೆ ಇಲ್ಲದೇ ಟ್ಯೂನ್ ಬಳಕೆ ಮಾಡಿದ್ದಕ್ಕೆ ತಡೆಯಾಜ್ಞೆ ಹೊರಡಿಸಿತ್ತು.

BREAKING NEWS : ಹೈಕೋರ್ಟ್ ಮೆಟ್ಟಿಲೇರಿದ ‘B.L ಸಂತೋಷ್’ ; ‘SIT’ ನೋಟಿಸ್ ವಿರುದ್ಧ ಅರ್ಜಿ

ಆದ್ರೇ ಹೊಂಬಾಳೆ ಫಿಲ್ಮ್ ನಿಂದ ಕೇರಳದ ಪಾಲಕ್ಕಾಡ್ ಜಿಲ್ಲಾ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿ, ಪ್ರೇಕ್ಷಕರು ನೀಡಿದಂತ ಅಭಿಪ್ರಾಯವನ್ನು ಪರಿಗಣಿಸಬಾರದು. ನಾವು ತೆಕ್ಕುಡಂ ಬ್ರಿಡ್ಜ್ ಅವರ ಟ್ಯೂನ್ ಕದ್ದು ಬಳಕೆ ಮಾಡಿಲ್ಲ ಎಂಬುದಾಗಿ ಹೇಳಿತ್ತು. ಈ ಮನವಿ ಪುರಸ್ಕರಿಸಿದಂತ ಕೋರ್ಟ್, ಇದೀಗ ಹೊಸ ಆದೇಶದಲ್ಲಿ ಕಾಂತಾರ ಚಿತ್ರದ ವರಾಹ ರೂಪಂ ಹಾಡಿಗೆ ನೀಡಿದ್ದಂತ ತಡೆಯಾಜ್ಞೆಯನ್ನು ತೆರವುಗೊಳಿಸಿದೆ. ಈ ಮೂಲಕ ಕಾಂತಾರ ಚಿತ್ರ ತಂಡಕ್ಕಿ ಬಿಗ್ ರಿಲೀಫ್ ನೀಡಿದೆ.

BIGG NEWS: ಭಾರತ್ ಜೋಡೋ ಯಾತ್ರೆ ವೇಳೆ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ : ಬಿಜೆಪಿ ಆರೋಪಕ್ಕೆ ಕಾಂಗ್ರೆಸ್ ಪ್ರತಿಕ್ರಿಯೆ | Bharat Jodo Yatra

Share.
Exit mobile version