ಸುಭಾಷಿತ :

Tuesday, April 7 , 2020 5:42 AM

ಬಿಗ್ ನ್ಯೂಸ್ : ರಾಜ್ಯದ ‘ದೀರ್ಘಾವಧಿ-ಮಧ್ಯಮಾವಧಿ’ ರೈತರಿಗೆ ಸರ್ಕಾರದಿಂದ ‘ಬಿಗ್ ರಿಲೀಫ್’


Monday, February 24th, 2020 5:59 pm

ಬೆಂಗಳೂರು : ರಾಜ್ಯದಲ್ಲಿ ಉದ್ಭವಿಸಿರುವ ಅತೀವೃಷ್ಠಿ ಮತ್ತು ಅನಾವೃಷ್ಠಿಯಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ರೈತರು ರಾಜ್ಯದ ಸಹಕಾರ ಸಂಸ್ಥೆಗಳ ಮೂಲಕ ಮಧ್ಯಮಾವಧಿ, ದೀರ್ಘಾವಧಿ ಕೃಷಿ ಸಾಲ ಪಡೆದು, ಮರುಪಾವತಿಸಲು ಆರ್ಥಿಕ ಸಂಕಷ್ಟಕ್ಕೆ ಎದುರಿಸುತ್ತಿದ್ದಾರೆ. ಹೀಗಾಗಿ ಸರಕಾರ ಸಂಘಗಳಿಂದ ಪಡೆದ ಸಾಲವನ್ನು ಮಾತ್ರವೇ ಪಾವತಿಸಿ. ಸಾಲದ ಮೇಲಿನ ಮನ್ನಾವನ್ನು ಸರ್ಕಾರ ಮನ್ನಾ ಮಾಡಿದೆ ಎಂಬುದಾಗಿ ಸುತ್ತೋಲೆಯನ್ನು ಹೊರಡಿಸುವ ಮೂಲಕ, ರಾಜ್ಯದ ಮಧ್ಯಮಾವಧಿ, ದೀರ್ಘಾವಧಿ ಸಾಲ ಪಡೆದ ರೈತರಿಗೆ ಬಿಗ್ ರಿಲೀಫ್ ಸರ್ಕಾರ ನೀಡಿದೆ.

ಈ ಕುರಿತಂತೆ ಸುತ್ತೋಲೆ ಹೊರಡಿಸಿರುವ ರಾಜ್ಯ ಸರ್ಕಾರ, ರಾಜ್ಯದ ರೈತರು ಕೃಷಿ ಚಟುವಟಿಕೆಗಾಗಿ ಮಧ್ಯಮಾವಧಿ, ದೀರ್ಘಾವಧಿಯ ಸಾಲವನ್ನು ವಿವಿಧ ಸಹಕಾರಿ ಬ್ಯಾಂಕ್ ಗಳಿಂದ ಪಡೆದಿದ್ದಾರೆ. ದಿನಾಂಕ 31-01-2020ರ ಅತ್ಯಂಕೆ ಸಹಕಾರ ಸಂಸ್ಥೆಗಳಿಗೆ 92,525 ರೈತರಿಂದ ಅಂದಾಜು ರೂ.56,011.03 ಲಕ್ಷಗಳ ಮಧ್ಯಮಾವಧಿ ಹಾಗೂ ದೀರ್ಘಾವಧಿ ಕೃಷಿ ಸಾಲಗಳು ಸುಸ್ತಿಯಾಗಿದ್ದು, ಇದರ ಮೇಲಿನ ಬಡ್ಡಿ ಅಂದಾಜು ರೂ.46,614.67 ಲಕ್ಷಗಳು ಇರುತ್ತದೆ.

ಹೀಗಾಗಿ ರಾಜ್ಯ ಸರ್ಕಾರವು ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ಈ ಒಂದು ಬಾರಿಗೆ ಅನ್ವಯಿಸುವಂತೆ ಸಹಕಾರ ಸಂಘಗಳಿಂದ ಸಾಲ ಪಡೆದು ದಿನಾಂಕ 31.01.2020ಕ್ಕೆ ಸುಸ್ತಿಯಾಗಿರುವ ಕೃಷಿ ಮತ್ತು ಕೃಷಿ ಪೂರಕ ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಾಲಗಳ ಅಸಲನ್ನು ದಿನಾಂಕ 31-03-2020ರೊಳಗೆ ರೈತರು ಸಂಬಂಧಿಸಿದ ಬ್ಯಾಂಕ್ ಗಳಿಗೆ ಮರು ಪಾವತಿಸಿದಲ್ಲಿ, ಈ ಸಾಲಗಳ ಮೇಲಿನ ಬಡ್ಡಿಯನ್ನು ಸರ್ಕಾರದಿಂದ ಭರಿಸಲಾಗುತ್ತದೆ ಎಂಬುದಾಗಿ ತಿಳಿಸಿದೆ. ಈ ಮೂಲಕ ರಾಜ್ಯದ ದೀರ್ಘಾವಧಿ-ಮಧ್ಯಮಾವಧಿ ರೈತರಿಗೆ ಬಿಗ್ ರಿಲೀಫ್ ನೀಡಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions