ಸುಭಾಷಿತ :

Tuesday, April 7 , 2020 7:15 AM

ಬಿಗ್ ನ್ಯೂಸ್ : ತಂಬಾಕು ಸೇವನೆ ವಯಸ್ಸು 21 ಕ್ಕೆ ಏರಿಕೆ?


Monday, February 24th, 2020 6:20 am

ನವದೆಹಲಿ : ತಂಬಾಕು ಸೇವನೆಗೆ ಇರುವ ವಯೋಮಿತಿಯನ್ನು ಈಗಿನ 18 ರಿಂದ 21 ವರ್ಷಕ್ಕೆ ಹೆಚ್ಚಿಸಲು ಕೇಂದ್ರ ಆರೋಗ್ಯ ಸಚಿವಾಲಯ ಮುಂದಾಗಿದೆ ಎನ್ನಲಾಗಿದೆ.

ಸಿಗರೇಟ್ ಗಳು ಮತ್ತು ಇತರೆ ತಂಬಾಕು ಉತ್ಪನ್ನಗಳ ಕಾಯ್ದೆಯನ್ನು ಬಲಗೊಳಿಸಲು ಸಚಿವಾಲಯವು ರೂಪಿಸಿದ್ದ ಉಪಸಮಿತಿಯು, ಕೆಲವು ಮಹತ್ವದ ಕಾನೂನಾತ್ಮಕ ಸಲಹೆಗಳನ್ನು ನೀಡಿದೆ. ವಯೋಮಿತಿ ಹೆಚ್ಚಳದಿಂದ ತಂಬಾಕು ಸೇವನೆಯನ್ನು ತಗ್ಗಿಸಬಹುದು ಎನ್ನುವುದು ಪ್ರಮುಖ ಉದ್ದೇಶವಾಗಿದೆ.

ವಯಸ್ಕರ ತಂಬಾಕು ಸೇವನೆಯ ಜಾಗತಿಕ ಸಮೀಕ್ಷೆ ಪ್ರಕಾರ, ತಂಬಾಕು ಸೇವನೆ ವಯೋಮಿತಿಯನ್ನು 17.9 ವರ್ಷದಿಂದ 18.9 ವರ್ಷಕ್ಕೆ ಹೆಚ್ಚಿಸಲಾಗಿದೆ. ಇದರ ಆಧಾರದಲ್ಲಿಯೇ 21 ವರ್ಷಕ್ಕೆ ವಯೋಮಿತಿ ನಿಗಿದಿ ಮಾಡುವ ಬಗ್ಗೆ ಆರೋಗ್ಯ ಸಚಿವಾಲಯ ಮುಂದಾಗಿದೆ ಎನ್ನಲಾಗಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions