ನವದೆಹಲಿ: ಕೆಲ ದಿನಗಳ ಹಿಂದೆ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ದತ್ತಾಂಶದ ವಿರುದ್ಧದ ಸೈಬರ್ ದಾಳಿಯು ಒಟ್ಟು ಆರು ದಿನಗಳ ಕಾಲ ನಡೆಯಿತು ಮತ್ತು ಆಸ್ಪತ್ರೆಯ ಕಾರ್ಯಾಚರಣೆಯನ್ನು ನಿಲ್ಲಿಸಿತು, ಈ ವೇಳೆಯಲ್ಲಿ ಮಾಜಿ ಪ್ರಧಾನಿಗಳು ಮತ್ತು ಸಂಸದರಂತಹ ವಿವಿಐಪಿಗಳು ಸೇರಿದಂತೆ ಕೋಟ್ಯಂತರ ರೋಗಿಗಳ ಪ್ರಮುಖ ಡೇಟಾವನ್ನು ಅಪಾಯಕ್ಕೆ ಸಿಲುಕಿಸಿತ್ತು ಕೂಡ.

ಈ ನಡುವೆ ಸೈಬರ್ ದಾಳಿಯು ನವದೆಹಲಿಯ ಏಮ್ಸ್ ಮತ್ತು ಸಫ್ದರ್ಜಂಗ್ ಆಡಳಿತವನ್ನು ಅಲುಗಾಡಿಸಿದ ಕೆಲವೇ ದಿನಗಳಲ್ಲಿ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ದತ್ತಾಂಶವನ್ನು ಹ್ಯಾಕ್ ಮಾಡುವ ಪ್ರಯತ್ನಗಳು ನಡೆದವು ಎನ್ನಲಾಗಿದೆ. ಕೆಲ ಮಾಧ್ಯಮ ವರದಿಗಳ ಪ್ರಕಾರ, 24 ಗಂಟೆಗಳ ಅವಧಿಯಲ್ಲಿ ಸುಮಾರು 6000 ಹ್ಯಾಕಿಂಗ್ ಪ್ರಯತ್ನಗಳು ನಡೆದಿವೆಯಂತೆ.

ಐಸಿಎಂಆರ್ ಕಡತಗಳ ಡೇಟಾ ಬ್ರೀಚ್ ಅನ್ನು ಹ್ಯಾಕ್ ಮಾಡಲು ಸಾವಿರಾರು ಪ್ರಯತ್ನಗಳನ್ನು ಮಾಡಲಾಗಿತ್ತಾದರೂ, ಇದಕ್ಕಾಗಿ ಎಲ್ಲಾ ಪ್ರಯತ್ನಗಳನ್ನು ವಿಫಲಗೊಳಿಸಲಾಗಿದೆ ಎಂದು ಸರ್ಕಾರ ಹೇಳಿದೆ. ಎನ್ಐಸಿ ಹಾಕಿದ ಭದ್ರತಾ ಫೈರ್ವಾಲ್ನಿಂದ ಹ್ಯಾಕಿಂಗ್ ಪ್ರಯತ್ನಗಳನ್ನು ತಡೆಯಲಾಗಿದೆ ಎಂದು ಸರ್ಕಾರ ಹೇಳಿದೆ.

Share.
Exit mobile version