ನವದೆಹಲಿ: ಸೌರಶಕ್ತಿಯಿಂದ ಚಾಲಿತವಾದ ವಿದ್ಯುತ್ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸಲು ಸರ್ಕಾರ ಮುಂದಾಗಿದೆ. ಇದು ಹೆವಿ ಡ್ಯೂಟಿ ಟ್ರಕ್ಗಳು ಮತ್ತು ಬಸ್ಗಳ ಚಾರ್ಜಿಂಗ್ಗೆ ಅನುಕೂಲ ಮಾಡಿಕೊಡುತ್ತದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸೋಮವಾರ ಹೇಳಿದ್ದಾರೆ.

ಇಂಡೋ-ಅಮೆರಿಕನ್ ಛೇಂಬರ್ ಆಫ್ ಕಾಮರ್ಸ್ (ಐಎಸಿಸಿ) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಗಡ್ಕರಿ, ವಿದ್ಯುತ್ ಮೇಲೆ ಭಾರತದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಸರ್ಕಾರ ಬಯಸುತ್ತದೆ ಎಂದು ಪುನರುಚ್ಚರಿಸಿದರು. ಇದೇ ವೇಳೆ ಅವರ”ವಿದ್ಯುತ್ ಚಲನಶೀಲತೆಗಾಗಿ ಸೌರ ಮತ್ತು ಪವನ ಶಕ್ತಿ ಆಧಾರಿತ ಚಾರ್ಜಿಂಗ್ ಕಾರ್ಯವಿಧಾನಗಳನ್ನು ಸರ್ಕಾರ ಬಲವಾಗಿ ಪ್ರೋತ್ಸಾಹಿಸುತ್ತಿದೆ ಅಂತ ತಿಳಿಸಿದರು. “ನಾವು ವಿದ್ಯುತ್ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸಲು ಸಹ ಕೆಲಸ ಮಾಡುತ್ತಿದ್ದೇವೆ, ಇದು ಸೌರಶಕ್ತಿಯಿಂದ ಚಾಲಿತವಾಗಿರುತ್ತದೆ ಮತ್ತು ಇದು ಚಲಿಸುವಾಗ ಹೆವಿ ಡ್ಯೂಟಿ ಟ್ರಕ್ಗಳು ಮತ್ತು ಬಸ್ಗಳ ಸಂಚಾರವನ್ನು ಸುಗಮಗೊಳಿಸುತ್ತದೆ” ಎಂದು ಅವರು ಹೇಳಿದರು.

ಇಲೆಕ್ಟ್ರಿಕ್ ಹೆದ್ದಾರಿಗಳ ಮೇಲೆ ವಾಹನ ಸಂಚರಿಸಿದರೆ ಸಾಕು, ವಾಹನಗಳು ಚಾರ್ಜ್ ಆಗಲಿದೆಯಂಂತೆ. ಸೌರಶಕ್ತಿಯಿಂದ ಚಾಲಿತವಾಗುವಂತೆ ಟೋಲ್ ಪ್ಲಾಜಾಗಳನ್ನು ಸಹ ಸರ್ಕಾರ ಪ್ರೋತ್ಸಾಹಿಸುತ್ತಿದೆ ಎಂದು ಗಡ್ಕರಿ ಹೇಳಿದರು. ರಸ್ತೆ ಸಚಿವಾಲಯವು ಪ್ರಮುಖ ಕಾರಿಡಾರ್ ಗಳಲ್ಲಿ ಮಾರ್ಗ ಆಪ್ಟಿಮೈಸೇಶನ್ ಕೆಲಸಗಳನ್ನು ನಡೆಸಿದೆ ಮತ್ತು ಹೊಸ ಜೋಡಣೆಯನ್ನು ವಿನ್ಯಾಸಗೊಳಿಸಿದೆ ಎಂದು ಸಚಿವರು ಹೇಳಿದರು. ಉತ್ತಮವಾಗಿ ಅಭಿವೃದ್ಧಿ ಹೊಂದಿದ ಮೂಲಸೌಕರ್ಯವು ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸುತ್ತದೆ, ಹೊಸ ವ್ಯವಹಾರಗಳನ್ನು ಸೃಷ್ಟಿಸುತ್ತದೆ ಮತ್ತು ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸುತ್ತದೆ ಎಂದು ಒತ್ತಿ ಹೇಳಿದ ಗಡ್ಕರಿ, “ನಾವು 26 ಗ್ರೀನ್ಫೀಲ್ಡ್ ಎಕ್ಸ್ಪ್ರೆಸ್ವೇಗಳನ್ನು ನಿರ್ಮಿಸುತ್ತಿದ್ದೇವೆ” ಎಂದು ಹೇಳಿದರು.

 

 

Share.
Exit mobile version