ನವದೆಹಲಿ: ಬ್ಲೂಮ್ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಗೌತಮ್ ಅದಾನಿ ಮತ್ತೊಮ್ಮೆ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಸೋಮವಾರ ಭಾರತೀಯ ಮಾರುಕಟ್ಟೆಯಲ್ಲಿನ ಭಾರಿ ಕುಸಿತದಿಂದಾಗಿ ಅವರು ತಮ್ಮ ಸ್ಥಾನವನ್ನು ಕಳೆದುಕೊಂಡಿದ್ದಾರೆ.

ನಿನ್ನೆ, (ಸೋಮವಾರ) ಅದಾನಿ ಗ್ರೂಪ್ ಕಂಪನಿಗಳ ಷೇರುಗಳು ತೀವ್ರ ಕುಸಿತವನ್ನು ಕಂಡ ಹಿನ್ನಲೆ, ಗೌತಮ್ ಅದಾನಿ ಅವರ ಒಟ್ಟು ಆಸ್ತಿಗಳಲ್ಲಿ 6.91 ಬಿಲಿಯನ್ ಡಾಲರ್ ನಷ್ಟು ಲಾಸ್‌ ಆಗಿದೆ. ಇದರಿಂದಾಗಿ ಅವರು ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದರು ಮತ್ತು ಇದೇ ವೇಳೆ ಅಮೆಜಾನ್ನ ಜೆಫ್ ಬೆಜೋಸ್ ಮತ್ತೊಮ್ಮೆ ಟಾಪ್‌ ಸ್ಥಾನವನ್ನು ಕಂಡುಕೊಂಡಿದ್ದಾರೆ . ಜೆಫ್ ಬೆಜೋಸ್ ಅವರ ಸಂಪತ್ತು ಸೋಮವಾರ 1.36 ಬಿಲಿಯನ್ ಡಾಲರ್ ನಷ್ಟು ಹೆಚ್ಚಾಗಿದೆ, ಗೌತಮ್ ಅದಾನಿ ಅವರ ಸಂಪತ್ತು 6.91 ಬಿಲಿಯನ್ ಡಾಲರ್ನಿಂದ 135 ಬಿಲಿಯನ್ ಡಾಲರ್ಗೆ ಇಳಿದಿದೆ.

ಇದೇ ವೇಳೆ ಭಾರತದ ಮುಕೇಶ್ ಅಂಬಾನಿ ಬ್ಲೂಮ್ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಅಗ್ರ 10 ಪಟ್ಟಿಯಿಂದ ಹೊರಗುಳಿದಿದ್ದಾರೆ ಮತ್ತು ಅವರ ಸಂಪತ್ತು ನಿನ್ನೆ 2.83 ಬಿಲಿಯನ್ ಡಾಲರ್ಗೆ ಕುಸಿದಿದೆ. ಮುಕೇಶ್ ಅಂಬಾನಿ ಶ್ರೀಮಂತರ ಪಟ್ಟಿಯಲ್ಲಿ 11 ನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ ಅವರ ಒಟ್ಟು ನಿವ್ವಳ ಮೌಲ್ಯವು 82.4 ಬಿಲಿಯನ್ ಡಾಲರ್ಗೆ ಇಳಿದಿದೆ. ಲ್ಯಾರಿ ಎಲಿಸನ್ 84.9 ಶತಕೋಟಿ ಡಾಲರ್ ಆಸ್ತಿಯೊಂದಿಗೆ 10ನೇ ಸ್ಥಾನದಲ್ಲಿದ್ದಾರೆ.

ಚಾಮರಾಜನಗರದಲ್ಲಿ ಪಿಎಪ್ಐ ಕಾರ್ಯಕರ್ತರಿಬ್ಬರ ಬಂಧನ

ಆಸ್ಪತ್ರೆಯಲ್ಲಿ ತನ್ನ ಪತಿಗೆ ಪ್ರೀತಿಯಿಂದ ಹಾಡಿದ ವೃದ್ಧೆ : ಹೃದಯಸ್ಪರ್ಶಿ ʻವಿಡಿಯೋ ವೈರಲ್ ʼ | Watch

ಇತಿಹಾಸದಲ್ಲಿ ಇದೇ ಮೊದಲು: PFI ವಿರುದ್ದ ಪೋಲಿಸ್‌ ಸಮರ, ಕರ್ನಾಟಕದ ನಾನಾ ಕಡೆ ದಾಳಿ 75ಕ್ಕೂ ಅಧಿಕ ಮಂದಿ ಬಂಧನ

 

BIGG NEWS : ಮಡಿಕೇರಿ ದಸರಾ ಕರಗ ಮಹೋತ್ಸವಕ್ಕೆ ಅದ್ಧೂರಿ ಚಾಲನೆ

Share.
Exit mobile version