ಸುಭಾಷಿತ :

Wednesday, April 1 , 2020 2:31 AM

ಬಿಗ್ ನ್ಯೂಸ್‌: ಕ್ರಿಕೆಟ್‌ ಬುಕ್ಕಿ ಸಂಜೀವ್ ಚಾವ್ಲಾ ಇಂಗ್ಲೆಂಡ್‌ನಿಂದ ಭಾರತಕ್ಕೆ ಹಸ್ತಾಂತರ!


Thursday, February 13th, 2020 12:37 pm

ನ್ಯೂಸ್‌ಡೆಸ್ಕ್: ದಕ್ಷಿಣ ಆಫ್ರಿಕಾದ ಕ್ರಿಕೆಟಿಗರನ್ನು ಒಳಗೊಂಡ 2000 ರ ಮ್ಯಾಚ್ ಫಿಕ್ಸಿಂಗ್ ಹಗರಣದ ಪ್ರಮುಖ ಆರೋಪಿ ಬುಕ್ಕಿ ಸಂಜೀವ್ ಚಾವ್ಲಾನನ್ನು ಲಂಡನ್‌ನಿಂದ ಹಸ್ತಾಂತರಿಸಲಾಗಿದೆ ಎನ್ನಲಾಗಿದೆ. ದೆಹಲಿ ಪೊಲೀಸರು ಗುರುವಾರ ಬೆಳಿಗ್ಗೆ ಆರೋಪಿಗಳನ್ನು ದೆಹಲಿಗೆ ಕರೆದುಕೊಂಡು ಬಂದಿದ್ದಾರೆ ಎನ್ನಲಾಗಿದೆ.

ಭಾರತದ ನ್ಯಾಯಾಲಯಗಳಲ್ಲಿ ಮ್ಯಾಚ್ ಫಿಕ್ಸಿಂಗ್ ಆರೋಪಗಳನ್ನು ಎದುರಿಸಲು ಸ್ಕಾಟ್ಲೆಂಡ್ ಯಾರ್ಡ್ ಪೊಲೀಸರು ದೆಹಲಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ ಎನ್ನಲಾಗಿದೆ. ಇನ್ನು ಬಂಧಿತ ಬುಕ್ಕಿ ಸಂಜೀವ್ ತಿಹಾರ್ ಜೈಲಿಗೆ ಕರೆದುಕೊಂಡು ಹೋಗುವ ಮುನ್ನ ಅಗತ್ಯವಾದ ವೈದ್ಯಕೀಯ ಪರೀಕ್ಷೆಗಳನ್ನು ಮಾಡಲಾಗಿದೆ ಎನ್ನಲಾಗಿದೆ.

ಪ್ರಕರಣದ ನ್ಯಾಯಾಲಯದ ದಾಖಲೆಗಳ ಪ್ರಕಾರ, ಚಾವ್ಲಾ ಅವರನ್ನು ದೆಹಲಿ ಮೂಲದ ಉದ್ಯಮಿ ಎಂದು ತಿಳಿದು ಬಂದಿದ್ದು, ಈತ 1996 ರಲ್ಲಿ ವ್ಯಾಪಾರ ವೀಸಾದ ಮೇಲೆ ಯುಕೆಗೆ ತೆರಳಿದದ್ದ ಎನ್ನಲಾಗಿದೆ. 2000 ರಲ್ಲಿ ಚಾವ್ಲಾ ರ ಭಾರತೀಯ ಪಾಸ್ಪೋರ್ಟ್ ರದ್ದುಪಡಿಸಿದ ನಂತರ, ಆತ 2005 ರಲ್ಲಿ ಯುಕೆ ಪಾಸ್ಪೋರ್ಟ್ ಪಡೆದರು ಮತ್ತು ಬ್ರಿಟಿಷ್ ಪ್ರಜೆಯಾಗಿದ್ದ ಎನ್ನಲಾಗಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions