Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನಿಮ್ಮ ಮನೆಯ `ಸ್ಮಾರ್ಟ್ ಟಿವಿ’ ತಿಂಗಳಿಗೆ ಎಷ್ಟು ಕರೆಂಟ್ ಬಳಸುತ್ತೆ ಗೊತ್ತಾ? ಇಲ್ಲಿದೆ ವಿದ್ಯುತ್ ಉಳಿತಾಯದ ಟಿಪ್ಸ್!

BIG NEWS : ಉದ್ಯಮಿಗೆ ಕೋಟ್ಯಾಂತರ ರೂ. ವಂಚನೆ ಕೇಸ್ : ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ನಿಜಾಂ ಉಚ್ಚಾಟನೆ!

BREAKING : ಸಂಡೂರು ರಾಜವಂಶಸ್ಥ, ಬಿಜೆಪಿ ಮುಖಂಡ ಕಾರ್ತಿಕೇಯ ಘೋರ್ಪಡೆ ಹೃದಯಾಘಾತದಿಂದ ನಿಧನ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಉದ್ಯಮಿಗೆ ಕೋಟ್ಯಾಂತರ ರೂ. ವಂಚನೆ ಕೇಸ್ : ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ನಿಜಾಂ ಉಚ್ಚಾಟನೆ!
KARNATAKA

BIG NEWS : ಉದ್ಯಮಿಗೆ ಕೋಟ್ಯಾಂತರ ರೂ. ವಂಚನೆ ಕೇಸ್ : ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ನಿಜಾಂ ಉಚ್ಚಾಟನೆ!

By ಸುರೇಶ್‌

ಮಂಗಳೂರಿನಲ್ಲಿ ಉದ್ಯಮಿಯೊಬ್ಬರಿಗೆ ಬರೋಬ್ಬರಿ 2.77 ಕೋಟಿ ರೂಪಾಯಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಇದೀಗ ದೊಡ್ಡ ರಾಜಕೀಯ ಬೆಳವಣಿಗೆಯಾಗಿದೆ. ಪ್ರಕರಣದಲ್ಲಿ ಆರೋಪಿಯಾಗಿರುವ ಮಂಗಳೂರು ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಿಜಾಮ್‌ನನ್ನು ಪಕ್ಷದ ಸ್ಥಾನದಿಂದ ಉಚ್ಚಾಟನೆ ಮಾಡಲಾಗಿದೆ. ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯು ಈ ಕಠಿಣ ಕ್ರಮ ಕೈಗೊಂಡಿದ್ದು, ನಿಜಾಮ್‌ಗೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಕೊಕ್ ನೀಡಿದೆ.

ಈ ಇಡೀ ಹಗರಣದ ಬೇರುಗಳು ಆರಂಭವಾಗುವುದು ಬ್ಲಾಕ್‌ಮೇಲ್ ತಂತ್ರದಿಂದ. ಮೊದಲಿಗೆ ಜಿತೇಶ್ ಎಂಬಾತ ಉದ್ಯಮಿಯ ಅಶ್ಲೀಲ ಫೋಟೋ ಹಾಗೂ ವಿಡಿಯೋಗಳನ್ನು ಇಟ್ಟುಕೊಂಡು ಬ್ಲಾಕ್‌ಮೇಲ್ ಮಾಡಲು ಆರಂಭಿಸಿದ್ದ. “ನೀನು ಕೇಳಿದಷ್ಟು ಹಣ ನೀಡದಿದ್ದರೆ ಈ ವಿಡಿಯೋಗಳನ್ನು ನಿನ್ನ ಪತ್ನಿಗೆ ತೋರಿಸುತ್ತೇನೆ” ಎಂದು ಹೆದರಿಸಿ, ಆರಂಭದಲ್ಲಿ 35 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ.

ಸಮಾಜದಲ್ಲಿ ತನ್ನ ಮರ್ಯಾದೆ ಎಲ್ಲಿ ಹರಾಜಾಗುತ್ತದೆಯೋ ಎಂಬ ಭಯದಿಂದ ಉದ್ಯಮಿ ಜಿತೇಶ್ ಕೇಳಿದ ಹಣವನ್ನು ನೀಡಿದ್ದಾರೆ. ಆದರೆ, ಜಿತೇಶ್‌ನ ಹಣದ ದಾಹ ಅಷ್ಟಕ್ಕೇ ನಿಲ್ಲಲಿಲ್ಲ. ಆತ ಮತ್ತೆ ಮತ್ತೆ ಹಣಕ್ಕಾಗಿ ಪೀಡಿಸಲು ಮತ್ತು ಬೆದರಿಕೆ ಹಾಕಲು ಆರಂಭಿಸಿದಾಗ, ಇದರಿಂದ ಬೇಸತ್ತ ಉದ್ಯಮಿ ತನಗೆ ನ್ಯಾಯ ಕೊಡಿಸುವಂತೆ ಪರಿಚಯಸ್ಥನಾಗಿದ್ದ ಯುವ ಕಾಂಗ್ರೆಸ್ ಮುಖಂಡ ನಿಜಾಮ್‌ಗೆ ಈ ಬಗ್ಗೆ ಮಾಹಿತಿ ನೀಡಿ ಸಹಾಯ ಕೋರಿದ್ದರು.

ಆದರೆ, ಉದ್ಯಮಿಗೆ ರಕ್ಷಣೆ ನೀಡಬೇಕಾಗಿದ್ದ ನಿಜಾಮ್ ತಾನೇ ಖೆಡ್ಡಾ ತೋಡಿದ್ದ. ಜಿತೇಶ್‌ನೊಂದಿಗೆ ಕೈಜೋಡಿಸಿದ ಆತ, ಉದ್ಯಮಿಯನ್ನೇ ಹೆದರಿಸಲು ಶುರುಮಾಡಿದ. ವಿಷಯ ಹೊರಗೆ ಹೋದರೆ ಮಾನ ಹೋಗುತ್ತದೆ ಎಂದು ಹೆದರಿಸಿ, 2024 ರಿಂದ 2026 ರ ಅವಧಿಯಲ್ಲಿ ಹಂತ ಹಂತವಾಗಿ ಉದ್ಯಮಿಯಿಂದ ಬರೋಬ್ಬರಿ 2 ಕೋಟಿ 77 ಲಕ್ಷ ರೂಪಾಯಿಗಳನ್ನು ವಸೂಲಿ ಮಾಡಿದ್ದಾನೆ. ಉದ್ಯಮಿಯ ಅಸಹಾಯಕತೆಯನ್ನು ಇಬ್ಬರೂ ಆರೋಪಿಗಳು ಬಂಡವಾಳ ಮಾಡಿಕೊಂಡಿದ್ದರು.

ಇಷ್ಟೆಲ್ಲಾ ಆದ ಬಳಿಕ, ಪ್ರಕರಣವನ್ನು ಮುಚ್ಚಿಹಾಕಲು ಮತ್ತು ಉದ್ಯಮಿ ಮತ್ತೆ ಪ್ರಶ್ನೆ ಮಾಡಬಾರದು ಎಂಬ ಕಾರಣಕ್ಕೆ ನಿಜಾಮ್ ಒಂದು ಸುಳ್ಳು ಕಥೆ ಕಟ್ಟಿದ್ದ. ಬ್ಲಾಕ್‌ಮೇಲ್ ಮಾಡುತ್ತಿದ್ದ ಜಿತೇಶ್ ಈಗಾಗಲೇ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದಾನೆ ಎಂದು ಉದ್ಯಮಿಗೆ ನಂಬಿಸಿದ್ದ. ಆದರೆ, ಜೂನ್ 1 ರಂದು ಉದ್ಯಮಿಗೆ ಜಿತೇಶ್ ಜೀವಂತವಾಗಿ ಓಡಾಡುತ್ತಿರುವುದು ಕಣ್ಣಿಗೆ ಬಿದ್ದಾಗ ಇಡೀ ವಂಚನೆಯ ಜಾಲ ಬಯಲಾಗಿದೆ. ತಾನು ಸಂಪೂರ್ಣವಾಗಿ ಮೋಸ ಹೋಗಿರುವುದನ್ನು ಅರಿತ ಉದ್ಯಮಿ ತಕ್ಷಣವೇ ಆಘಾತಕ್ಕೊಳಗಾಗಿದ್ದಾರೆ.

ಕೊನೆಗೆ ಉದ್ಯಮಿ ಮಂಗಳೂರಿನ ಊರ್ವ ಪೊಲೀಸ್ ಠಾಣೆಗೆ ಧಾವಿಸಿ ಇಬ್ಬರ ವಿರುದ್ಧವೂ ಅಧಿಕೃತ ದೂರು ದಾಖಲಿಸಿದ್ದಾರೆ. ಉದ್ಯಮಿಯ ದೂರನ್ನು ಆಧರಿಸಿ ತನಿಖೆ ಕೈಗೆತ್ತಿಕೊಂಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಸದ್ಯ ನಿಜಾಮ್ ಮತ್ತು ಜಿತೇಶ್ ಇಬ್ಬರನ್ನೂ ಬಂಧಿಸಿದ್ದಾರೆ. ಸದ್ಯ ಇಬ್ಬರೂ ಆರೋಪಿಗಳು ಪೊಲೀಸ್ ವಶದಲ್ಲಿದ್ದು, ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.

Share. Facebook Twitter LinkedIn WhatsApp Email

Related Posts

ನಿಮ್ಮ ಮನೆಯ `ಸ್ಮಾರ್ಟ್ ಟಿವಿ’ ತಿಂಗಳಿಗೆ ಎಷ್ಟು ಕರೆಂಟ್ ಬಳಸುತ್ತೆ ಗೊತ್ತಾ? ಇಲ್ಲಿದೆ ವಿದ್ಯುತ್ ಉಳಿತಾಯದ ಟಿಪ್ಸ್!

2 Mins Read

BREAKING : ಸಂಡೂರು ರಾಜವಂಶಸ್ಥ, ಬಿಜೆಪಿ ಮುಖಂಡ ಕಾರ್ತಿಕೇಯ ಘೋರ್ಪಡೆ ಹೃದಯಾಘಾತದಿಂದ ನಿಧನ!

2 Mins Read

BREAKING : ಮಂಡ್ಯದಲ್ಲಿ ಘೋರ ದುರಂತ : ಒಂದೇ ಕುಟುಂಬದ ಮೂವರು ಅನುಮಾನಾಸ್ಪದ ಸಾವು!

1 Min Read
Recent News

ನಿಮ್ಮ ಮನೆಯ `ಸ್ಮಾರ್ಟ್ ಟಿವಿ’ ತಿಂಗಳಿಗೆ ಎಷ್ಟು ಕರೆಂಟ್ ಬಳಸುತ್ತೆ ಗೊತ್ತಾ? ಇಲ್ಲಿದೆ ವಿದ್ಯುತ್ ಉಳಿತಾಯದ ಟಿಪ್ಸ್!

BIG NEWS : ಉದ್ಯಮಿಗೆ ಕೋಟ್ಯಾಂತರ ರೂ. ವಂಚನೆ ಕೇಸ್ : ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ನಿಜಾಂ ಉಚ್ಚಾಟನೆ!

BREAKING : ಸಂಡೂರು ರಾಜವಂಶಸ್ಥ, ಬಿಜೆಪಿ ಮುಖಂಡ ಕಾರ್ತಿಕೇಯ ಘೋರ್ಪಡೆ ಹೃದಯಾಘಾತದಿಂದ ನಿಧನ!

BREAKING : ಮಂಡ್ಯದಲ್ಲಿ ಘೋರ ದುರಂತ : ಒಂದೇ ಕುಟುಂಬದ ಮೂವರು ಅನುಮಾನಾಸ್ಪದ ಸಾವು!

State News
KARNATAKA

ನಿಮ್ಮ ಮನೆಯ `ಸ್ಮಾರ್ಟ್ ಟಿವಿ’ ತಿಂಗಳಿಗೆ ಎಷ್ಟು ಕರೆಂಟ್ ಬಳಸುತ್ತೆ ಗೊತ್ತಾ? ಇಲ್ಲಿದೆ ವಿದ್ಯುತ್ ಉಳಿತಾಯದ ಟಿಪ್ಸ್!

By kannadanewsnow57 KARNATAKA 2 Mins Read

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಸ್ಮಾರ್ಟ್ ಟಿವಿಗಳು ತೀರಾ ಸಾಮಾನ್ಯ ರಂಜನಾ ಸಾಧನವಾಗಿಬಿಟ್ಟಿವೆ. ಆದರೆ, ಈ ಸ್ಮಾರ್ಟ್ ಟಿವಿಗಳಿಂದಾಗಿ ನಿಮ್ಮ…

BIG NEWS : ಉದ್ಯಮಿಗೆ ಕೋಟ್ಯಾಂತರ ರೂ. ವಂಚನೆ ಕೇಸ್ : ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ನಿಜಾಂ ಉಚ್ಚಾಟನೆ!

BREAKING : ಸಂಡೂರು ರಾಜವಂಶಸ್ಥ, ಬಿಜೆಪಿ ಮುಖಂಡ ಕಾರ್ತಿಕೇಯ ಘೋರ್ಪಡೆ ಹೃದಯಾಘಾತದಿಂದ ನಿಧನ!

BREAKING : ಮಂಡ್ಯದಲ್ಲಿ ಘೋರ ದುರಂತ : ಒಂದೇ ಕುಟುಂಬದ ಮೂವರು ಅನುಮಾನಾಸ್ಪದ ಸಾವು!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.