ಬೆಂಗಳೂರು : ಪಾನಿಯಲ್ಲಿ ಬಳಸುವ ಕೆಲವು ಪದಾರ್ಥಗಳಲ್ಲಿ ಕ್ಯಾನ್ಸರ್‌ ಕಾರಕ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪಾನಿಪುರಿಗೆ ಬಳಸುವ ಸಾಸ್‌ ಮತ್ತು ಮೀಠಾ ನಿಷೇಧಕ್ಕೆ ರಾಜ್ಯ ಸರ್ಕಾರ ನಿರ್ಧರಿಸಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಇದೆ.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಅಧಿಕಾರಿ ಈ ಕುರಿತು ಮಾಹಿತಿ ನೀಡಿದ್ದು, ಪಾನಿಪುರಿ 243 ಸ್ಯಾಂಪಲ್ಸ್‌ ಗಳನ್ನು ಟೆಸ್ಟ್‌ ಮಾಡಲಾಗಿದ್ದು, ಇದರಲ್ಲಿ 43 ಪರೀಕ್ಷೆಗಳಲ್ಲಿ ಇವುಗಳು ಅಸುರಕ್ಷಿತ ಎಂದು ವರದಿ ಬಂದಿದೆ. ಇದರಲ್ಲಿ ಐದು ಪಾದರ್ಥಗಳಲ್ಲಿ ಹೊಟ್ಟೆ ಕ್ಯಾನ್ಸರ್‌ ಗೆ ಕಾರಣವಾಗುವ ಅಂಶ ಪತ್ತೆಯಾದ ಹಿನ್ನೆಲೆಯಲ್ಲಿ ಪಾನಿಪುರಿಗೆ ಬಳಸುವ ಸಾಸ್‌ ಮತ್ತು ಮೀಠಾ ಬಳಕೆ ನಿಷೇಧಿಸುವ ಸಾಧ್ಯತೆ ಇದೆ.

ಈ ಬಗ್ಗೆ ರಾಜ್ಯ ಸಚಿವರ ಹಂತದಲ್ಲಿ ಸಭೆ ನಡೆಸಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಈಮೂಲಕ ರಾಜ್ಯದಲ್ಲಿ ಗೋಬಿ, ಕಬಾಬ್‌ ಕಲರ್‌ ಬಳಿಕ ಪಾನಿಪುರಿಗೆ ಬಳಸುವ ಸಾಸ್‌, ಮೀಠಾ ಬ್ಯಾನ್‌ ಗೆ ರಾಜ್ಯ ಸರ್ಕಾರ ಮುಂದಾಗಿದೆ.

Share.
Exit mobile version