ನವದೆಹಲಿ:ಚೀನಾದ ಸ್ಮಾರ್ಟ್ಫೋನ್ ತಯಾರಕ ಶಿಯೋಮಿಗೆ ದೊಡ್ಡ ಹೊಡೆತ ಬಿದ್ದಿದೆ. ಶಿಯೋಮಿಗೆ ಸೇರಿದ 5,551 ಕೋಟಿ ರೂ.ಗಳ ನಗದನ್ನು ಜಾರಿ ನಿರ್ದೇಶನಾಲಯ (ಇಡಿ) ವಶಪಡಿಸಿಕೊಂಡಿದೆ. ಅಂದ ಹಾಗೇ ಇಡಿಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅತಿ ಹೆಚ್ಚು ನಗದು ವಶಪಡಿಸಿಕೊಳ್ಳಲಾಗಿದೆ ಎನ್ನಲಾಗಿದೆ. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ನಿಬಂಧನೆಗಳನ್ನು ಉಲ್ಲಂಘಿಸಿ ಶಿಯೋಮಿ ಹಣವನ್ನು ವಿದೇಶಕ್ಕೆ ತಿರುಗಿಸಿದೆ ಎಂದು ಕಂಡುಬಂದಿದೆ. ಮೂಲಗಳ ಪ್ರಕಾರ, ಸರ್ಕಾರಕ್ಕೆ ರಾಯಲ್ಟಿಯಾಗಿ ನೀಡಬೇಕಾದ ಹಣವನ್ನು ದುರುಪಯೋಗಪಡಿಸಿಕೊಂಡ ನಂತರ ಇಡಿ ಈ ಕ್ರಮವನ್ನು ಪ್ರಾರಂಭಿಸಿದೆ.

ಈ ಬಗ್ಗೆ ಮಾಧ್ಯಮ ಪ್ರಕಟಣೆಯನ್ನು ಹೊರಡಿಸಿರುವ ಇಡಿ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯ ಸೆಕ್ಷನ್ 37 ಎ ಅಡಿಯಲ್ಲಿ ನೇಮಕಗೊಂಡ ಸಕ್ಷಮ ಪ್ರಾಧಿಕಾರವು ಫೆಮಾದ ನಿಬಂಧನೆಗಳ ಅಡಿಯಲ್ಲಿ ಶಿಯೋಮಿ ಟೆಕ್ನಾಲಜಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವಿರುದ್ಧ 29.04.2022 ರಂದು ಜಾರಿ ನಿರ್ದೇಶನಾಲಯವು (ಇಡಿ) ಹೊರಡಿಸಿದ 5551.27 ಕೋಟಿ ರೂ.ಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಆದೇಶವನ್ನು ದೃಢಪಡಿಸಿದೆ. 199ಮತ್ತು ಅದನ್ನು ಫೆಮಾದ ಸೆಕ್ಷನ್37 ಎ ರ ನಿಬಂಧನೆಗಳ ಪ್ರಕಾರ ವಶಪಡಿಸಿಕೊಳ್ಳಲು ಬಾಧ್ಯಸ್ಥವಾಗಿದೆ. ರಾಜಧನದ ಪಾವತಿಯು ವಿದೇಶಿ ವಿನಿಮಯವನ್ನು ಭಾರತದಿಂದ ವರ್ಗಾಯಿಸುವ ಸಾಧನವಲ್ಲದೆ ಬೇರೇನೂ ಅಲ್ಲ ಮತ್ತು ಇದು ಫೆಮಾದ ನಿಬಂಧನೆಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಸಕ್ಷಮ ಪ್ರಾಧಿಕಾರವು ಗಮನಿಸಿದೆ.

05.07.2022 ರಂದು ಮಾನ್ಯ ಉಚ್ಚ ನ್ಯಾಯಾಲಯವು ಹೊರಡಿಸಿದ ಆದೇಶದ ಮೂಲಕ ವಜಾಗೊಂಡ ಈ ಆದೇಶದ ವಿರುದ್ಧ ಶಿಯೋಮಿ ಇಂಡಿಯಾ ಕರ್ನಾಟಕ ಹೈಕೋರ್ಟ್ ಗೆ ರಿಟ್ ಅರ್ಜಿಯನ್ನು ಸಲ್ಲಿಸಿದೆ. ಶಿಯೋಮಿ ಇಂಡಿಯಾ ಚೀನಾ ಮೂಲದ ಶಿಯೋಮಿ ಸಮೂಹದ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾಗಿದೆ. ಕಂಪನಿಯ ಬ್ಯಾಂಕ್ ಖಾತೆಗಳಲ್ಲಿದ್ದ 5551.27 ಕೋಟಿ ರೂ.ಗಳ ಈ ಮೊತ್ತವನ್ನು ಇಡಿ ವಶಪಡಿಸಿಕೊಂಡಿದೆ. ಈ ವರ್ಷದ ಫೆಬ್ರವರಿ ತಿಂಗಳಲ್ಲಿ ಕಂಪನಿಯು ಮಾಡಿದ ಅಕ್ರಮ ಹಣಕ್ಕೆ ಸಂಬಂಧಿಸಿದಂತೆ ಇಡಿ ತನಿಖೆಯನ್ನು ಪ್ರಾರಂಭಿಸಿತ್ತು.

 

Share.
Exit mobile version