ಬೆಂಗಳೂರು : ಎಲೆಕ್ಟ್ರಾನಿಕ್ ಸಿಟಿ ಜಿ ಆರ್ ಫಾರ್ಮ್ ಹೌಸ್ ನಲ್ಲಿ ರೇವ್ ಪಾರ್ಟಿ ಕೇಸ್ ಗೆ ಸಂಬಂಧಿಸಿದಂತೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ನಾನು ಪಾರ್ಟಿಯಲ್ಲಿ ಇಲ್ಲ ಹೈದರಾಬಾದ್ ನಲ್ಲಿ ಇದ್ದೇನೆ ಎಂದಿದ್ದ ನಟಿ ಹೇಮಾ ಇದೀಗ ಬೆಂಗಳೂರಿಗೆ ಹೇಮಾ ಬಂದಿರುವ ವಿಮಾನದ ಟಿಕೆಟ್ ಮಾಹಿತಿ ಲಭ್ಯವಾಗಿದೆ. ನಟಿ ಹೇಮಾ ಜೊತೆಗೆ ಮೂವರು ಬೆಂಗಳೂರಿಗೆ ಬಂದಿದ್ದ ಮಾಹಿತಿ ಲಭ್ಯವಾಗಿದೆ.

ಇಂಡಿಗೋ 6E-6305 ವಿಮಾನದಲ್ಲಿ ನಟಿ ಹೇಮಾ ಬೆಂಗಳೂರಿಗೆ ಬಂದಿದ್ದರು.ಮಧ್ಯಾಹ್ನ 1:55ಕ್ಕೆ ಶಾಂಶಾಬಾದ್ ನಿಂದ ಬೆಂಗಳೂರಿಗೆ ಪ್ರಯಾಣಿಸಿದ್ದರು. ಮಧ್ಯಾಹ್ನ 3 15ಕ್ಕೆ ಬೆಂಗಳೂರು ಏರ್ಪೋರ್ಟ್ಗೆ ವಿಮಾನ ಆಗಮಿಸಿದ್ದು, ನಟಿ ಹೇಮಾ ಜೊತೆ ಮತ್ತಿಬರು ಬಂದಿರುವ ಬಗ್ಗೆ ಟಿಕೆಟ್ ದಾಖಲೆ ಲಭ್ಯವಾಗಿದೆ.

ನಾನು ಎಲ್ಲೂ ಹೋಗಿಲ್ಲವೆಂದು ನಂಬಿಸಲು ನಟಿ ಹೇಮ ಡ್ರಾಮಾ ಮಾಡಿದ್ದರು ಒಂದು ದಿನ ರೆಸಾರ್ಟ್ ನಲ್ಲಿದ್ದೇನೆ ಎಂದು ನಟಿ ಹೇಮ ವಿಡಿಯೋ ಬಿಡುಗಡೆ ಮಾಡಿದ್ದರು ಅಲ್ಲದೆ ಮನೆಯಲ್ಲಿ ಬಿರಿಯಾನಿ ಮಾಡುತ್ತಿರುವ ಇನ್ನೊಂದು ವಿಡಿಯೋ ಕೂಡ ಪೋಸ್ಟ್ ಮಾಡಿದ್ದರು ಸಾಮಾಜಿಕ ಜಾಲತಾಣದಲ್ಲಿ ನಟಿ ಹೇಮ ಈ ಕುರಿತಂತೆ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದರು.

ಪ್ರಕರಣದ ಹಿನ್ನೆಲೆ?

ಬೆಂಗಳೂರಿನ ಇಲೆಕ್ಟ್ರಾನಿಕ್ ಸಿಟಿ ಬಳಿ ಇರುವ ಜಿಆರ್​ ಫಾರ್ಮ್​​ಹೌಸ್​ನಲ್ಲಿ ರೇವ್ ಪಾರ್ಟಿ ನಡೆಯುತ್ತಿರುವ ಮಾಹಿತಿ ಆಧಾರದ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ಮೇ 20 ರಂದು ಮಾಡಿದ್ದರು.ಈ ವೇಳೆ ಟಾಲಿವುಡ್​ ನಟಿ ಹೇಮಾ ಕೂಡ ಇದ್ದರು ಎನ್ನುವ ಸುದ್ದಿ ಹರಿದಾಡಿತ್ತು. ಇದಕ್ಕೆ ನಟಿ ಹೇಮಾ ಸ್ಪಷ್ಟನೆ ನೀಡಿದ್ದರು. ನಾನು ಹೈದರಾಬಾದ್ ಫಾರ್ಮ್​ಹೌಸ್​ನಲ್ಲಿ ಆರಾಮಾಗಿ ಇದ್ದೇನೆ ಎಂದು ತಿಳಿಸಿದ್ದರು.

ಜಿಆರ್​ ಫಾರ್ಮ್​ಹೌಸ್​ ‘ಕಾನ್ ಕಾರ್ಡ್’ ಮಾಲೀಕ ಗೋಪಾಲ ರೆಡ್ಡಿ ಎಂಬುವವರ ಹೆಸರಲ್ಲಿ ಇದೆ. ಬರ್ತ್​ಡೇ ಹೆಸರಲ್ಲಿ ಇಲ್ಲಿ ಪಾರ್ಟಿ ನಡೆಯುತ್ತಿತ್ತು. ರಾತ್ರಿ 2 ಗಂಟೆಯಾದರೂ ಪಾರ್ಟಿ ಮುಗಿದಿರಲಿಲ್ಲ. ಆ ಬಳಿಕ ಸಿಸಿಬಿ ಅಧಿಕಾರಿಗಳಿಗೆ ಕೆಲವು ಅನುಮಾನ ಬಂದ ಕಾರಣ ಅವರು ದಾಳಿ ಮಾಡಿದ್ದಾರೆ. ದಾಳಿ ವೇಳೆ ಡ್ರಗ್ಸ್ ಪತ್ತೆ ಆಗಿದೆ.

ಹೈದರಾಬಾದ್ ಮೂಲದ ವಾಸು ಎಂಬುವವರು ಪಾರ್ಟಿ ಆಯೋಜನೆ ಮಾಡಿದ್ದರು. ಪಾರ್ಟಿಯಲ್ಲಿ ಕೆಲವು ತೆಲುಗು ನಟಿಯರೂ ಇದ್ದರು ಎನ್ನಲಾಗಿದೆ. ಈ ವೇಳೆ ನಟಿ ಹೇಮಾ ಹೆಸರು ಕೂಡ ಕೇಳಿ ಬಂದಿತ್ತು.ಹೇಮಾ ಅವರು ತಮ್ಮ ಬಗ್ಗೆ ಕೇಳಿ ಬಂದ ಆರೋಪಕ್ಕೆ ಸ್ಪಷ್ಟನೆ ನೀಡಿದ್ದಾರೆ. ‘ನಾನು ಹೈದರಾಬಾದ್ ಫಾರ್ಮ್​ಹೌಸ್​ನಲ್ಲಿ ಆರಾಮಾಗಿ ಇದ್ದೇನೆ. ನನ್ನ ಬಗ್ಗೆ ಕೇಳಿ ಬಂದಿರೋದು ಫೇಕಸ್ ನ್ಯೂಸ್’ ಎಂದು ಹೇಳಿದ್ದಾರೆ. ಈ ಮೂಲಕ ದಾಳಿ ನಡೆದ ಜಾಗದಲ್ಲಿ ನಾನು ಇರಲಿಲ್ಲ ಎಂದು ಸ್ಪಷ್ಟಪಡಿಸಿದ್ದರು

Share.
Exit mobile version