BIG BREAKING : ರೈತರಿಗೆ ಕೇಂದ್ರ ಸರ್ಕಾರದಿಂದ ‘ಗುಡ್ ನ್ಯೂಸ್’ : ಲಾಕ್ ಡೌನ್ ನಿಂದ ಮೀನುಗಾರಿಕೆ, ಕೃಷಿ ಚಟುವಟಿಕೆಗಳಿಗೆ ವಿನಾಯಿತಿ – Kannada News Now


India

BIG BREAKING : ರೈತರಿಗೆ ಕೇಂದ್ರ ಸರ್ಕಾರದಿಂದ ‘ಗುಡ್ ನ್ಯೂಸ್’ : ಲಾಕ್ ಡೌನ್ ನಿಂದ ಮೀನುಗಾರಿಕೆ, ಕೃಷಿ ಚಟುವಟಿಕೆಗಳಿಗೆ ವಿನಾಯಿತಿ

ನವದೆಹಲಿ :  ಮಾರಕ ಕೊರೊನಾ ವೈರಸ್ ದೇಶಾದ್ಯಂತ ತಲ್ಲಣ ಸೃಷ್ಟಿಸಿದ್ದು, ದಿನೇ ದಿನೇ ಸೋಂಕು ಪೀಡಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಏತನ್ಮಧ್ಯೆ ಲಾಕ್ ಡೌನ್ ಘೋಷಿಸಿದ್ದು, ಏ.14ರ ಬಳಿಕವೂ ಮುಂದುವರೆಯುವ ಸಾಧ್ಯತೆ ಇದೆ. ಈಗಾಗಲೇ ರೈತ ಸಮುದಾಯ ಲೌಕ್ ಡೌನ್ ನಿಂದ ತೀವ್ರ ತೊಂದರೆಗೀಡಾಗಿದ್ದು, ನಷ್ಟ ಅನುಭವಿಸಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ರೈತ ಸಮುದಾಯಕ್ಕೆ ಗುಡ್ ನ್ಯೂಸ್ ಕೊಟ್ಟಿದ್ದು, ಲಾಕ್ ಡೌನ್ ನಿಯಮದಿಂದ ಮೀನುಗಾರಿಕೆ, ಕೃಷಿ ಚಟುವಟಿಕೆಗಳಿಗೆ ವಿನಾಯಿತಿ ನೀಡಿದೆ.

ಈ ಕುರಿತಂತೆ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೆ ಸಂದೇಶ ರವಾನಿಸಿದೆ. ಇನ್ನು ಕೈಗೆ ಬಂದ ಬೆಳೆ ಮಾರಾಟ ಮಾಡಲು ಕಷ್ಟದಲ್ಲಿರುವ ರೈತರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ರೈತರಿಂದ ನೇರವಾಗಿ ಎಲ್ಲ ಉತ್ಪನ್ನಗಳನ್ನು ಖರೀದಿಸುವುದಾಗಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ಥೋಮರ್ ತಿಳಿಸಿದ್ದಾರೆ. ಇದೇ ವೇಳೆ, ರೈತರು, ಕೃಷಿಕ ಸಮುದಾಯದ ಹಿತದೃಷ್ಟಿಯಿಂದ ಇನ್ನು 6 ತಿಂಗಳವರೆಗೆ ಎಪಿಎಂಸಿ ಮಂಡಿ ನಿಯಮ ಅಮಾನತಿನಲ್ಲಿಟ್ಟರೆ ಒಳಿತು ಎಂದು ನೀತಿ ಆಯೋಗದ ಸದಸ್ಯ ರಮೇಶ್ ಚಂದ್ ಸಲಹೆ ನೀಡಿದ್ದಾರೆ….




error: Content is protected !!