ಬೆಳಗಾವಿ: ವ್ಯಕ್ತಿಯೊಬ್ಬ ತೀರ್ಥದ ಜೊತೆಗೆ ಕೃಷ್ಣನ ವಿಗ್ರಹವನ್ನೇ ನುಂಗಿದ್ದಾನೆ. ಈ ಬಳಿಕ ವಿಗ್ರಹ ಗಂಟಲಲ್ಲಿ ಸಿಲುಕಿ, ಒದ್ದಾಡಿದಂತ ಘಟನೆ ಬೆಳಗಾವಿಯ ಕೆಎಲ್ಇ ಆಸ್ಪತ್ರೆಯಿಂದ ಬೆಳಕಿಗೆ ಬಂದಿದೆ.
BIG NEWS: BBMP ಹೊಸ ವಾರ್ಡ್ ಗಳ ಪಟ್ಟಿ ಪ್ರಕಟ: ಹೊಸ ವಾರ್ಡ್ ಗಳಿಗೆ ಇತಿಹಾಸ ಪುರುಷರ ಹೆಸರು
ಹೌದು.. 45 ವರ್ಷದ ವ್ಯಕ್ತಿಯೊಬ್ಬ ನಿತ್ಯ ಮನೆಯಲ್ಲಿ ಪೂಜೆ ಮಾಡಿ, ದೇವರ ತೀರ್ಥ ಸೇವನೆ ಮಾಡೋ ಅಭ್ಯಾಸವಿತ್ತು. ಎಂದಿನಂತೆ ಪೂಜೆ ನೆರವೇರಿಸಿದ ನಂತ್ರ, ತೀರ್ಥ ಕುಡಿಯೋ ಸಂದರ್ಭದಲ್ಲಿ 50 ಗ್ರಾಂ ತೂಕದ ವಿಗ್ರಹ ಕೂಡ ನುಂಗಿ ಬಿಟ್ಟಿದ್ದಾನೆ.
ಇದು ವಿಟಿಯು ಮೌಲ್ಯಮಾಪನ ಯಡವಟ್ಟು: 100 ಅಂಕದ ಪರೀಕ್ಷೆಗೆ 106 ಅಂಕ ನೀಡಿಕೆ
ಹೀಗೆ ಆತ ನುಂಗಿದಂತ ವಿಗ್ರಹ ಗಂಟಲಲ್ಲಿ ಸಿಲುಕಿಕೊಂಡಿದೆ. ಆಗ ಗಂಟಲು ನೋವು, ಬಳಿಕ ಊತ ಕಾಣಿಸಿಕೊಂಡಿದೆ. ಕೂಡಲೇ ಬೆಳಗಾವಿಯ ಕೆ ಎಲ್ ಇ ಆಸ್ಪತ್ರೆಗೆ ತೆರಳಿ, ಪರೀಕ್ಷೆ ನಡೆಸಿದ ವೇಳೆ ಎಂಡೋಸ್ಕೋಫಿಯಲ್ಲಿ ಆತನ ಗಂಟಲಿನಲ್ಲಿ ಕೃಷ್ಣನ ವಿಗ್ರಹ ಸಿಲುಕಿರೋದು ಕಂಡು ಬಂದಿದೆ.
NEP ವಿರುದ್ಧದ ಶಕ್ತಿಗಳೇ ಪಠ್ಯ ಪರಿಷ್ಕರಣೆ ಗಲಾಟೆ ಮಾಡಿಸುತ್ತಿವೆ – ಸಚಿವ ಡಾ.ಸಿಎನ್ ಅಶ್ವತ್ಥನಾರಾಯಣ ಕಿಡಿ
ವೈದ್ಯರು ಅನ್ನ ನಾಳದಲ್ಲಿ ಸಿಲುಕಿದ್ದಂತ ವಿಗ್ರಹವನ್ನು ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ಮೂಲಕ, ಹೊರ ತೆಗೆದಿದ್ದಾರೆ. ಈ ಮೂಲಕ ತೀರ್ಥದ ಜೊತೆಗೆ ಕೃಷ್ಣನ ವಿಗ್ರಹವನ್ನು ನುಂಗಿದ ಭೂಪನನ್ನು ಸಾವಿನ ದವಡೆಯಿಂದ ಬಚಾವ್ ಮಾಡಿದ್ದಾರೆ.