ಭೋಪಾಲ್: 3 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ಬಸ್ ಚಾಲಕನ ಮನೆ ಧ್ವಂಸ

ಭೋಪಾಲ್: ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಮೂರೂವರೆ ವರ್ಷದ ನರ್ಸರಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬಂಧಿತ ಶಾಲಾ ಬಸ್ ಚಾಲಕನ ಮನೆಯನ್ನು ಅಧಿಕಾರಿಗಳು ಮಂಗಳವಾರ ನೆಲಸಮಗೊಳಿಸಿದ್ದಾರೆ. ಭೋಪಾಲ್‌ನ ಶಾಹಪುರ ಪ್ರದೇಶದಲ್ಲಿರುವ ಆರೋಪಿಯ ಮನೆ ಧ್ವಂಸವು ಪೊಲೀಸರ ಮೇಲ್ವಿಚಾರಣೆಯಲ್ಲಿ ನಡೆದಿದೆ. ಅನಧಿಕೃತವಾಗಿ ನಿರ್ಮಾಣ ಕಾಮಗಾರಿ ಕೆಡವಲು ಅಧಿಕಾರಿಗಳು ಅಧಿಕೃತ ಕಾರಣ ನೀಡಿದ್ದಾರೆ. ಕಳೆದ ಗುರುವಾರ ಭೋಪಾಲ್‌ನಲ್ಲಿ ಈ ಘಟನೆ ನಡೆದಿದೆ. ಬಸ್ ಚಾಲಕನ ಜೊತೆಗೆ ವಾಹನದೊಳಗೆ ಇದ್ದ ಮಹಿಳಾ ಅಟೆಂಡರ್‌ನನ್ನು ಸಹ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. … Continue reading ಭೋಪಾಲ್: 3 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ಬಸ್ ಚಾಲಕನ ಮನೆ ಧ್ವಂಸ