ಸುಭಾಷಿತ :

Wednesday, January 29 , 2020 9:38 PM

ರಗಡ್ ‘ಭರಾಟೆ’ಯ ಸೊಗಡೇ ಬೇರೆ! – ರೇಟಿಂಗ್ 4/5


Friday, October 18th, 2019 7:03 pm

ಫಿಲ್ಮಿಂ ಡೆಸ್ಕ್ : ಮುಹೂರ್ತ ಕಂಡ ದಿನದಿಂದಲೂ ಭರ್ಜರಿ ಸುದ್ದಿಯಾಗುತ್ತಾ ಸಾಗಿ ಬಂದಿದ್ದ ಚಿತ್ರ ಭರಾಟೆ. ರೋರಿಂಗ್ ಸ್ಟಾರ್ ಶ್ರೀಮುರುಳಿ ಅಭಿನಯದ ಈ ಚಿತ್ರ ಅದೇ ಖದರ್ ನೊಂದಿಗೆ ಇದೀಗ ತೆರೆ ಕಂಡಿದೆ. ಶ್ರೀಮುರುಳಿ ಪಾಲಿಗೆ ಉಗ್ರಂ ಚಿತ್ರದಿಂದಲೇ ಮಾಸ್ ದೆಸೆ ಆರಂಭವಾಗಿ ಬಿಟ್ಟಿತ್ತು. ಆ ನಂತರ ಅದು ರಥಾವರ ಮತ್ತು ಮಫ್ತಿ ಚಿತ್ರಗಳ ಮೂಲಕ ಅನೂಚಾನವಾಗಿ ಮುಂದುವರೆದುಕೊಂಡು ಬಂದಿತ್ತು. ಅದೀಗ ಭರಾಟೆಯ ಮೂಲಕ ಬೇರೆಯದ್ದೇ ರೀತಿಯಲ್ಲಿ ರಂಗು ಪಡೆದುಕೊಂಡಿದೆ.

ನಿರ್ದೇಶಕ ಚೇತನ್ ಕುಮಾರ್ ಅಷ್ಟೊಂದು ವಿಶೇಷವಾದ ರೀತಿಯಲ್ಲಿ ಈ ಚಿತ್ರವನ್ನು ಕಟ್ಟಿ ಕೊಟ್ಟಿದ್ದಾರೆ. ಹಾಗೆ ನೋಡಿದರೆ ಶ್ರೀಮುರುಳಿ ಅಭಿನಯಿಸಿರೋ ಈ ಹಿಂದಿನ ಚಿತ್ರಗಳಿಗಿಂತಲೂ ತುಸು ಹೆಚ್ಚೇ ಮಾಸ್ ಖದರ್ ಭರಾಟೆಯಲ್ಲಿದೆ. ಆದರೆ ಅದರೊಂದಿಗೇ ಇತರೇ ಒಂದಷ್ಟು ಅಂಶಗಳೂ ಸೇರಿಕೊಂಡು ಭರಾಟೆಯನ್ನು ಶ್ರೀಮುರುಳಿ ಸಿನಿಮಾ ಯಾನದಲ್ಲಿಯೇ ವಿಶಿಷ್ಟ ಚಿತ್ರವಾಗಿ ದಾಖಲಿಸಿದೆ. ರಾಜಸ್ಥಾನದಿಂದ ಶುರುವಾಗೋ ಈ ಕಥೆ ಕರ್ನಾಟಕವನ್ನೇಲ್ಲ ಸುತ್ತಿ ಬಳಸುತ್ತಲೇ ಒಂದೊಳ್ಳೆ ಸಿನಿಮಾ ನೋಡಿದ ಅನುಭವವನ್ನು ಪ್ರೇಕ್ಷಕರಲ್ಲಿ ಮೂಡಿಕೊಳ್ಳುವಂತೆ ಮಾಡುತ್ತದೆ.

ಶ್ರೀಮುರುಳಿ ಇಲ್ಲಿ ಜಗನ್ ಎಂಬುವ ಪಾತ್ರಕ್ಕೆ ಜೀವ ತುಂಬಿದ್ದಾರೆ. ರಾಜಸ್ಥಾನದಿಂದ ಶುರುವಾಗೋ ಈ ಕಥೆಯಲ್ಲಿ ಜಗನ್ ಪಾತ್ರ ಅಪ್ಪನ ಕಡೆಯಿಂದ ಬಳುವಳಿಯಾಗಿ ಬಂದಿದ್ದ ನಾಡಿಮಿಡಿತದ ಆಧಾರದಲ್ಲಿ ನಾಟಿ ಔಷಧಿ ಕೊಡೋ ವಿದ್ಯೆಯ ಮೂಲಕ ಶುರುವಾಗುತ್ತೆ. ಆತ ಪ್ರವಾಸಿಗರಿಗೆ ಗೈಡ್ ಆಗಿಯೂ ಕಾರ್ಯ ನಿರ್ವಹಿಸುತ್ತಿರುತ್ತಾನೆ. ಈ ನಡುವೆ ಹಬ್ಬಿಕೊಳ್ಳುವ ಭೀಕರ ದ್ವೇಷದ ಜಾಲ, ಪಕ್ಕಾ ಮಾಸ್ ಸನ್ನಿವೇಶಗಳ ಜೊತೆ ಜೊತೆಗೇ ಜಗನ್ ಕರ್ನಾಟಕಕ್ಕೆ ಬಂದಿಳಿಯುತ್ತಾನೆ. ಅಲ್ಲೆದುರಾಗೋ ಗೊಂಬೆಯಂಥಾ ಹುಡುಗಿ, ಆಕೆಯೊಂದಿಗಿನ ಪ್ರೇಮ ಸಲ್ಲಾಪ ಮತ್ತು ಕಥೆಗೂ ಆ ಹುಡುಗಿಗೂ ಇರೋ ದೊಡ್ಡ ಕನೆಕ್ಷನ್ನು… ಇವಿಷ್ಟು ಅಂಶಗಳೊಂದಿಗೆ ಚೇತನ್ ಕುಮಾರ್ ಎಂಥವರೂ ತಲೆದೂಗುವಂತೆ ಈ ಚಿತ್ರವನ್ನು ಕಟ್ಟಿ ಕೊಟ್ಟಿದ್ದಾರೆ.

ಈ ಮೂಲಕ ರೋರಿಂಗ್ ಸ್ಟಾರ್ ಶ್ರೀಮುರುಳಿ ವಿಭಿನ್ನವಾದ ಸ್ವರೂಪದಲ್ಲಿಯೇ ಅಭಿಮಾನಿಗಳನ್ನು ಖುಷಿಗೊಳಿಸಿದ್ದಾರೆ. ತುಂಬಾ ಸಂಕೀರ್ಣವಾದಂಥಾ ಕಥೆಯನ್ನು ಚೇತನ್ ಕುಮಾರ್ ಸಂಭಾಳಿಸಿರೋ ರೀತಿ, ಅಷ್ಟು ದೊಡ್ಡ ತಾರಾಗಣದಲ್ಲಿ ಪ್ರತೀ ಪಾತ್ರವನ್ನೂ ನೆನಪಿಟ್ಟುಕೊಳ್ಳುವಂತೆ ಕಟ್ಟಿ ಕೊಟ್ಟಿರೋ ರೀತಿಗಳೆಲ್ಲ ಯಾರಿಗಾದರೂ ಖುಷಿ ಕೊಡದಿರೋದಿಲ್ಲ. ಸಂಗೀತ, ಹಿನ್ನೆಲೆ ಸಂಗೀತ, ಕ್ಯಾಮೆರಾ ವರ್ಕ್ ಸೇರಿದಂತೆ ಎಲ್ಲದರಲ್ಲಿಯೂ ಭರಾಟೆಯ ಖದರ್ ಜೋರಾಗಿದೆ. ಈ ಚಿತ್ರ ಕುಟುಂಬ ಸಮೇತರಾಗಿ ನೋಡಿ ಎಂಜಾಯ್ ಮಾಡುವಂತೆ ಮೂಡಿ ಬಂದಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions