ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟ ನಂತ್ರ, ಬಿಸಿಲಿನ ಬೇಗೆ ಹೆಚ್ಚಾಗಿದೆ. ಇದರ ಪರಿಣಾಮ ಬಿಸಿಲಿನಿಂದ ಉಂಟಾಗುವಂತ ಕಾಯಿಲೆಗಳು ಉಲ್ಬಣಗೊಂಡಿದ್ದಾವೆ. ಅದರಲ್ಲೂ ಅತಿಸಾರ ತಾಂಡವವಾಡುತ್ತಿದ್ದು, 21 ದಿನಗಳಲ್ಲಿ 7 ಸಾವಿರ ಮಂದಿಗೆ ಅತಿಸಾರ ಕಾಣಿಸಿಕೊಂಡಿರೋದಾಗಿ ತಿಳಿದು ಬಂದಿದೆ.

ರಾಜ್ಯ ಆರೋಗ್ಯ ಇಲಾಖೆಯ ಮಾಹಿತಿಯಂತೆ ರಾಜ್ಯದಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ಉಷ್ಣಾಂಶ, ಬಿಸಿಗಾಳಿಯಿಂದಾಗಿ ಜನರು ನಿರ್ಜಲೀಕರಣದ ಜೊತೆಗೆ ಅತಿಸಾರ, ಹೊಟ್ಟೆ ನೋವು ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆಯಂತೆ. ಇದೇ ಕಾರಣಕ್ಕೆ 21 ದಿನಗಳಲ್ಲಿ Acute Diarrhoeal Diseases ಸಂಬಂಧಿಸಿದ 7,000ಕ್ಕೂ ಅಧಿಕ ಪ್ರಕರಣಗಳು ವರದಿಯಾಗಿವೆ.

ಇನ್ನೂ ಬಿಸಿಲಾಘಾತ ಒಂದೆಡೆಯಾದರೇ, ನೀರಿಗಾಗಿ ಉಂಟಾದಂತ ಆಹಾಕಾರದಿಂದ ಅಲ್ಲಲ್ಲಿ ಅಸುರಕ್ಷಿತ ನೀರು ಮತ್ತು ಆಹಾರ ಸೇವಿಸಿದ ಪರಿಣಾಮ ಮಕ್ಕಳು ಸೇರಿ ಎಲ್ಲ ವಯೋಮಾನದವರಲ್ಲೂ ತೀವ್ರ ಅತಿಸಾರ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ.

ಆರೋಗ್ಯ ಇಲಾಖೆಯ ಅಧಿಕೃತ ಮಾಹಿತಿ ಪ್ರಕಾರ ಏಪ್ರಿಲ್.1ರಿಂದ 21ರವರೆಗೆ 7,324 ತೀವ್ರತರ ಅತಿಸಾರ ಪ್ರಕರಣಗಳು ದೃಞಪಟ್ಟಿವೆ. ಬೇಸಿಗೆಯಲ್ಲಿ ಬಾಯಾರಿಕೆ ಸಾಮಾನ್ಯ. ಮನೆಯಿಂದ ಹೊರಹೋಗುವವರು ದಣಿವಾರಿಸಿಕೊಳ್ಳಲು ಸಿಕ್ಕ ಸಿಕ್ಕಲ್ಲಿ ನೀರು, ಮಜ್ಜಿಗೆ, ಪಾನೀಯಗಳನ್ನು ಸೇವಿಸುತ್ತಾರೆ. ಇದರಿಂದ ಅತಿಸಾರ ಪ್ರಕರಣಗಳು ವರದಿಯಾಗುತ್ತಿವೆ. ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ.

ಈ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿ

  • ನೈಸರ್ಗಿಕವಾಗಿ ಸಿಗುವಂತ ಹಣ್ಣಿನ ರಸ ಹಾಗೂ ದ್ರವ ಆಹಾರ ಸೇವೆ ಮಾಡಿ
  • ನಾರಿನಿ ಅಂಶ ಹೆಚ್ಚಾಗಿರುವಂತ ತರಕಾರಿಗಳನ್ನು ಸೇವಿಸಿ
  • ಕೈ ಸ್ವಚ್ಛತೆಗೆ ಆದ್ಯತೆಯನ್ನು ನೀಡೋದು ಮರೆಯಬೇಡಿ
  • ಮನೆಯ ಆಹಾರ ಸೇವನೆಗೆ ಆದ್ಯತೆಯನ್ನು ನೀಡಿ
  • ಎಳನೀರು ಸೇರಿ ಹಣ್ಣಿನ ರಸ ಸೇವನೆ ಬೇಸಿಗೆಯಲ್ಲಿ ಉತ್ತಮ
  • ಹಳಸಿದ, ಹೊರಗಿನ ಆಹಾರ ಸೇವಿಸಬಾರದು
  • ಅತಿಯಾದ ಜಂಕ್ ಪುಡ್ ಬೇಡವೇ ಬೇಡ
  • ಬಿಸಿಲಿನಲ್ಲಿ ಓಡಾಟ ಕಡಿಮೆ ಮಾಡಿ
  • ಶುದ್ಧ, ಕುದಿಸಿ, ಆರಿಸಿದ ನೀರು ಕುಡಿಯಿರಿ

ಇನ್ನೂ ವರ್ಷಕ್ಕೆ ಎರಡು ಬಾರಿ ‘CBSE’ ಬೋರ್ಡ್ ಪರೀಕ್ಷೆ : ಮುಂದಿನ ಶೈಕ್ಷಣಿಕ ವರ್ಷದಿಂದಲೇ ಜಾರಿ ಸಾಧ್ಯತೆ

ಇನ್ನೂ ವರ್ಷಕ್ಕೆ ಎರಡು ಬಾರಿ ‘CBSE’ ಬೋರ್ಡ್ ಪರೀಕ್ಷೆ : ಮುಂದಿನ ಶೈಕ್ಷಣಿಕ ವರ್ಷದಿಂದಲೇ ಜಾರಿ ಸಾಧ್ಯತೆ

Share.
Exit mobile version