ಬೀಜಿಂಗ್ : ವಿಶ್ವಕ್ಕೆ ಕೊರೊನಾ ಹಬ್ಬಿಸಿದ ಚೀನಾದಲ್ಲಿ ಮತ್ತೆ ಕೊರೊನಾ ರಣಾರ್ಭಟ ಹೆಚ್ಚಾಗಿದ್ದು, ದಿನದಿಂದ ದಿನಕ್ಕೆ ಮರಣ ಮೃದಂಗ ಬಾರಿಸುವಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ ಪ್ರತಿ ದಿನ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ.  ಒಂದೆಡೆ ಐಸಿಯೂ ಭರ್ತಿಯಾಗಿದ್ರೆ, ಸ್ಮಶಾನದಲ್ಲಿ ಶವಗಳ ಸಂಖ್ಯೆ ಹೆಚ್ಚಾಗುತ್ತುದೆ.  ಪ್ರತಿ ದಿನ  200ಕ್ಕೂ ಹೆಚ್ಚು ಕೋವಿಡ್‌ ಸೋಂಕಿಗೆ ಬಲಿಯಾಗುತ್ತಾರೆ ಎಂಬ ಮಾಹಿತಿ ಲಭ್ಯವಾಗಿದೆ

ಅಷ್ಟೇ ಅಲ್ಲದೇ ಮುಂದಿನ ಮೂರು ತಿಂಗಳಲ್ಲಿ ಚೀನಾದ ಶೇ.60ರಷ್ಟು ಜನರನ್ನು ಕೋವಿಡ್ ಹೆಮ್ಮಾರಿ ಆವರಿಸಲಿದೆ ಎಂದು ಪರಿಣಿತರು ಅಂದಾಜಿಸಿದ್ದಾರೆ.ಸ್ಮಶಾನಗಳಲ್ಲಿ ಶವಗಳ ಅಂತ್ಯಸಂಸ್ಕಾರಕ್ಕೆ ಹಲವು ದಿನ ಕ್ಯೂ ನಿಲ್ಲಬೇಕಾದ ಪರಿಸ್ಥಿತಿಯಿದೆ.

 ಈ ಮೊದಲು ಪ್ರತಿ ದಿನ 30-40 ಶವ ಬರುತ್ತಿದ್ದರೆ ಈಗ ಸರಾಸರಿ 200ಕ್ಕೂ ಹೆಚ್ಚು ಶವಗಳು ಬರುತ್ತಿದೆ ಎಂದು ಅಮೆರಿಕದ ‘ವಾಲ್‌ಸ್ಟ್ರೀಟ್ ಜರ್ನಲ್’ ವರದಿ ಮಾಡಿದೆ. ಈ ನಿಟ್ಟಿನಲ್ಲಿ ಎಚ್ಚರಿಕೆ ಕ್ರಮಗಳನ್ನು ಅನುಸರಿಸುವುದು ಅತ್ಯಗತ್ಯವಾಗಿದೆ ಈಗಾಗಲೇ ಭಾರತದಲ್ಲಿ ಎಚ್ಚರಿಕೆ ಸಂದೇಶವನ್ನು ರವಾನಿಸಲಾಗುತ್ತಿದೆ

Share.
Exit mobile version