ಕೆಎನ್‌ಎನ್‌ ಡಿಜಿಟಲ್‌ ಡೆಸ್ಕ್‌ :  ಆಯುರ್ವೇದ ಪ್ರಕಾರದಲ್ಲಿ ತುಪ್ಪ ಒಂದು ಆರೋಗ್ಯಕರ ಆಹಾರ ಪದಾರ್ಥ. ಇದನ್ನು ಪ್ರತಿ ದಿನ ತಿನ್ನಬಹುದು. ನಿಮಗೆಲ್ಲ ಗೊತ್ತಿರುವ ಹಾಗೆ ಶುದ್ಧವಾದ ಹಸುವಿನ ತುಪ್ಪ ತನ್ನದೇ ಆದ ಅದ್ಭುತ ಪ್ರಯೋಜನಗಳನ್ನು ಹೊಂದಿದೆ. ಆದರೆ ಒಬ್ಬರ ದೇಹಕ್ಕೆ ಅಮೃತ ಎನ್ನುವ ಆಹಾರ ಇನ್ನೊಬ್ಬರ ದೇಹಕ್ಕೆ ವಿಷ ಎನ್ನುವಂತಾಗಬಹುದು.

BIGG NEWS: ಪೊಲೀಸ್‌ ಇನ್ಸ್‌ ಪೆಕ್ಟರ್‌ ಹೃದಯಾಘಾತದಿಂದ ಸಾವು ಪ್ರಕರಣ; ಸ್ಫೋಟಕ ಮಾಹಿತಿ ನೀಡಿದ ಬಿಕೆ ಹರಿಪ್ರಸಾದ್‌

ಹಾಗಾಗಿ ಕೆಲವರು ತುಪ್ಪ ತಿನ್ನಬಾರದು ಎಂದು ಹೇಳುತ್ತಾರೆ. ಯಾರಿಗೆ ರಕ್ತದ ಒತ್ತಡ ಮತ್ತು ಕೊಲೆಸ್ಟ್ರಾಲ್ ಹೆಚ್ಚಾಗಿರುತ್ತದೆ ಅಂತಹವರು ಮತ್ತು ಇನ್ನಿತರ ಅನೇಕ ತೊಂದರೆಗಳನ್ನು ಹೊಂದಿರುವ ವರು ತುಪ್ಪದಿಂದ ದೂರ ಉಳಿದರೆ ಒಳ್ಳೆಯದು ಎನ್ನುವ ಮಾತಿದೆ. ಹಾಗಾದರೆ ಇದು ಎಷ್ಟು ಸರಿ. ಇದಕ್ಕೆ ಸಂಬಂಧಪಟ್ಟಂತೆ ಆರೋಗ್ಯ ತಜ್ಞರಾದ ಡಾ. ರೇಖಾ ಏನು ಹೇಳುತ್ತಾರೆ ನೋಡೋಣ ಬನ್ನಿ….

ನಾವೆಲ್ಲರೂ ತುಪ್ಪ ತಿನ್ನಬಹುದಾ? ಆಯುರ್ವೇದ ಏನು ಹೇಳುತ್ತದೆ?

ತುಪ್ಪ ತಿನ್ನುವುದರ ಆರೋಗ್ಯ ಪ್ರಯೋಜನಗಳು

ಕಣ್ಣುಗಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು

ವಯಸ್ಸಾಗುವಿಕೆ ಪ್ರಕ್ರಿಯೆಗೆ ಮುಕ್ತಿ ಸಿಗುತ್ತದೆ

ಜೀರ್ಣಶಕ್ತಿ ಅಭಿವೃದ್ಧಿಯಾಗುತ್ತದೆ

ಜ್ಞಾಪಕ ಶಕ್ತಿ ಮತ್ತು ಬುದ್ಧಿವಂತಿಕೆ ಹೆಚ್ಚಾಗುತ್ತದೆ

ತ್ವಚೆಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಆದರೆ ತುಪ್ಪ ಯಾರು ತಿನ್ನಬೇಕು ಯಾರು ತಿನ್ನಬಾರದು ಎಂಬ ಬಗ್ಗೆ ಇಂದಿಗೂ ಸಹ ಗೊಂದಲ ಮುಂದುವರೆದಿದೆ ಮತ್ತು ಇದಕ್ಕೆ ಕಾರಣಗಳು ಸಹ ಇವೆ. ಅವುಗಳ ಬಗ್ಗೆ ಗಮನಹರಿಸುವುದಾದರೆ…

ತುಪ್ಪ ಜೀರ್ಣವಾಗುವುದು ಕಷ್ಟ!
ಮೊದಲೇ ಒಂದು ವೇಳೆ ನಿಮಗೆ ಅಜೀರ್ಣತೆ ಸಮಸ್ಯೆ ಇದ್ದರೆ ಅಥವಾ ಇರಿಟೇಬಲ್ ಬೋವೆಲ್ ಸಿಂಡ್ರೋಮ್ ತೊಂದರೆ ಇದ್ದರೆ, ತುಪ್ಪದ ಸೇವನೆ ನಿಮಗಲ್ಲ ಬಿಡಿ. ಏಕೆಂದರೆ ಇದು ಬೇರೆ ಆಹಾರ ಪದಾರ್ಥಗಳಿಗೆ ಹೋಲಿಸಿದರೆ ಜೀರ್ಣವಾಗಲು ಸ್ವಲ್ಪ ಹೆಚ್ಚಿನ ಸಮಯ ತೆಗೆದು ಕೊಳ್ಳುತ್ತದೆ. ಹಾಗಾಗಿ ಆಹಾರ ಪದ್ಧತಿಯಲ್ಲಿ ಎಚ್ಚರವಿರಲಿ.

BIGG NEWS: ಪೊಲೀಸ್‌ ಇನ್ಸ್‌ ಪೆಕ್ಟರ್‌ ಹೃದಯಾಘಾತದಿಂದ ಸಾವು ಪ್ರಕರಣ; ಸ್ಫೋಟಕ ಮಾಹಿತಿ ನೀಡಿದ ಬಿಕೆ ಹರಿಪ್ರಸಾದ್‌

ಇದು ಕಫ ಹೆಚ್ಚು ಮಾಡುತ್ತದೆ
ಆರೋಗ್ಯ ತಜ್ಞರು ಹೇಳುವ ಪ್ರಕಾರ, ಜ್ವರ ಇದ್ದಂತಹ ಸಂದರ್ಭದಲ್ಲಿ ಅದರಲ್ಲೂ ವಿಶೇಷ ವಾಗಿ ಚಳಿಗಾಲ ಮತ್ತು ಮಳೆಗಾಲದ ಸಂದರ್ಭದಲ್ಲಿ ತುಪ್ಪ ಸೇವನೆ ಮಾಡದೆ ಇರುವುದು ಒಳ್ಳೆಯದು. ಇದು ಶೀತದ ಪದಾರ್ಥವಾಗಿ ಕೆಲವರಿಗೆ ಎದೆಯ ಭಾಗದಲ್ಲಿ ಹಾಗೂ ಗಂಟಲಿನ ಭಾಗದಲ್ಲಿ ಕಫ ಉಂಟು ಮಾಡುವ ಸಾಧ್ಯತೆ ಇರುತ್ತದೆ.

ಗರ್ಭಿಣಿ ಮಹಿಳೆಯರು ಎಚ್ಚರಿಕೆ ವಹಿಸಬೇಕು
ತುಪ್ಪವನ್ನು ತಿನ್ನುವ ಮೊದಲು ಗರ್ಭಿಣಿ ಮಹಿಳೆಯರು ಎರಡು ಬಾರಿ ಯೋಚನೆ ಮಾಡ ಬೇಕು. ಏಕೆಂದರೆ ಗರ್ಭಾವಸ್ಥೆಯ ಸಂದರ್ಭದಲ್ಲಿ ದೇಹದ ತೂಕ ಹೆಚ್ಚಾಗುವ ಸಾಧ್ಯತೆ ಇರುತ್ತದೆ ಮತ್ತು ದೇಹದಲ್ಲಿ ಬೊಜ್ಜು ಕಂಡು ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ತುಪ್ಪ ಸೇವನೆಯನ್ನು ಗರ್ಭಿಣಿ ಮಹಿಳೆಯರು ಕಡಿಮೆ ಮಾಡಿಕೊಳ್ಳುವುದು ಅಥವಾ ಮಾಡದೆ ಇರುವುದು ಒಳ್ಳೆಯದು.

BIGG NEWS: ಪೊಲೀಸ್‌ ಇನ್ಸ್‌ ಪೆಕ್ಟರ್‌ ಹೃದಯಾಘಾತದಿಂದ ಸಾವು ಪ್ರಕರಣ; ಸ್ಫೋಟಕ ಮಾಹಿತಿ ನೀಡಿದ ಬಿಕೆ ಹರಿಪ್ರಸಾದ್‌

ಕೆಲವೊಂದು ಕಾಯಿಲೆ ಇರುವವರು ತಿನ್ನಬಾರದು

ಒಂದು ವೇಳೆ ಮೊದಲೇ ನಿಮಗೆ ಹೆಪಟೈಟಿಸ್, ಲಿವರ್ ತೊಂದರೆ, ಸ್ಪ್ಲಿನ್ ಸಮಸ್ಯೆ ಇತ್ಯಾದಿಗಳು ಇದ್ದರೆ, ತುಪ್ಪ ಸೇವನೆಯಿಂದ ದೂರ ಉಳಿಯಿರಿ. ಏಕೆಂದರೆ ಇದು ನಿಮಗೆ ತೊಂದರೆದಾಯಕ

ನಾವು ಸೇವನೆ ಮಾಡುವ ಪ್ರತಿಯೊಂದು ಆಹಾರ ನಮ್ಮ ದೇಹದ ಕಾರ್ಯ ಚಟುವಟಿಕೆಯ ವಿಧಾನದ ಜೊತೆ ಹೊಂದಿಕೊಳ್ಳಬೇಕು ಮತ್ತು ಸಮತೋಲನವನ್ನು ಕಾಯ್ದುಕೊಳ್ಳುವ ಹಾಗಿರಬೇಕು. ಹಾಗಾಗಿ ಆರೋಗ್ಯಕರವಾದ ಆಹಾರ ಪದಾರ್ಥ ಸೇವನೆ ತುಂಬಾ ಒಳ್ಳೆಯದು.

Share.
Exit mobile version