ಬೆಂಗಳೂರು : ತಾನು ಕೆಲಸ ಮಾಡುತ್ತಿದ್ದ ಮನೆಯಲ್ಲಿಯೇ ಮಹಿಳೆಯೊಬ್ಬಳು ಕಳ್ಳತನ ಮಾಡಿ ಲಕ್ಷಾಂತರ ರೂಪಾಯಿ ಚಿನ್ನ ವಜ್ರ ಹಾಗೂ ನಗದನ್ನು ದೋಚಿರುವ ಘಟನೆ ಬೆಂಗಳೂರಿನ ಜೆಪಿ ನಗರದಲ್ಲಿ ನಡೆದಿದೆ.ಈ ಸಂಬಂಧ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ.

ಬಂಧಿತ ಮಹಿಳೆಯನ್ನು ಚಾಮರಾಜನಗರ ಮೂಲದ ಮಂಜುಳಾ (38) ಎಂದು ಹೇಳಲಾಗುತ್ತಿದೆ. ಹೀಗೆ ಸುಮಾರು 363 ಗ್ರಾಂ ಚಿನ್ನ ವಜ್ರದ ವಸ್ತುಗಳು 176 ಬೆಳ್ಳಿ ವಸ್ತುಗಳು ಒಂದು ಲಕ್ಷ ನಗದು ಸೇರಿದಂತೆ ಒಟ್ಟು 35 ಲಕ್ಷ ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿದ್ದಳು. ಇದೀಗ ಪೊಲೀಸರು ಆರೋಪಿ ಮಂಜುಳಾ ರನ್ನು ಬಂಧಿಸಿ ಚಿನ್ನಾಭರಣ ವಜ್ರ ಬೆಳ್ಳಿ ಹಾಗೂ ನಗದನ್ನು ಜಪ್ತಿ ಮಾಡಿಕೊಂಡಿದ್ದಾರೆ.

ಇತ್ತೀಚಿಗೆ ಜೆಪಿ ನಗರ 1 ನೇ ಹಂತದ ಅಪಾರ್ಟ್ಮೆಂಟ್ ನಲ್ಲಿ ವಾಸಿಸುತ್ತಿದ್ದ ರೇಖಾ ಕಿರಣ್ ಎನ್ನುವರ ಮನೆಯಲ್ಲಿ ಈ ಘಟನೆ ನಡೆದಿತ್ತು, ಇದೀಗ ಜೆಪಿ ನಗರ ಠಾಣೆಯ ಪೊಲೀಸರು ಪ್ರಕರಣವನ್ನು ದಾಖಲಿಸಿ ಕೊಂಡು ತನಿಖೆ ನಡೆಸಿ ಇದೀಗ ಆರೋಪಿ ಮಂಜುಳಾಳನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ರೇಖಾ ಕಿರಣ ಹಿರಿಯ ನಾಗರಿಕ ದಂಪತಿಗಳಾಗಿದ್ದು, ವಿದೇಶದಲ್ಲಿ ಅವರ ಮಕ್ಕಳು ನೆಲೆಸಿದ್ದಾರೆ. ಆರೋಪಿ ಮಂಜುಳಾ 8 ವರ್ಷಗಳಿಂದ ಇವರ ಮನೆಯಲ್ಲಿ ಕೆಲಸ ಮಾಡಿಕೊಂಡು ಇದ್ದಳು. ಇತ್ತೀಚಿಗೆ ಮಾರ್ಚ್ 27ರಂದು ರೇಖಾ ಕಿರಣ ದಂಡಪತಿಯ ಮೊಮ್ಮಗ ನಾಮಕರಣ ಆಗಿತ್ತು. ನಾಮಕರಣ ಮುಗಿದ ನಂತರ ರೇಖಾ ತಮ್ಮ ಎಲ್ಲಾ ಆಭರಣಗಳನ್ನು ಬೀರುವಿನಲ್ಲಿ ಹಾಕಿ ಇಟ್ಟಿದ್ದರು.

ನಂತರ ಏಪ್ರಿಲ್ ನಾಲ್ಕರಂದು ರೇಖಾ ಅವರು ಬಿರುವಿನಲ್ಲಿ ಪರಿಶೀಲಿಸಿದಾಗ 4 ಚಿನ್ನದ ಬಳೆಗಳು ಸೇರಿದಂತೆ ವಸ್ತುಗಳು ಹಾಗೂ 50,000 ನಗದು ಕಳ್ಳತನವಾಗಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಮಂಜುಳಾನ್ನು ವಿಚಾರಿಸಿದಾಗ ತಕ್ಷಣ ಅವಳು ಗೊತ್ತಿಲ್ಲ ಎಂದಿದ್ದಾಳೆ. ಏಕೆಂದರೆ ನಾಮಕರಣ ದಿವಸ ಮಂಜುಳಾ ಬಿಟ್ಟು ಬೇರೆ ಯಾರು ಬಂದಿಲ್ಲ ಎನ್ನುವುದು ರೇಖಾ ಅವರಿಗೆ ಗೊತ್ತಾಗಿದೆ. ಹಾಗಾಗಿ ಮಂಜುಳನೆ ಕದ್ದಿದ್ದಾಳೆ ಎಂದು ಬಲವಾದ ಅನುಮಾನ ವ್ಯಕ್ತವಾಗಿದೆ. ತಕ್ಷಣ ಅವರು ಜೆಪಿ ನಗರ ಠಾಣೆ ಪೋಲೀಸರಿಗೆ ದೂರು ನೀಡಿದ್ದಾರೆ. ಇವಳು ಪೊಲೀಸರು ವಿಚಾರಣೆ ನಡೆಸಿದಾಗ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ.

Share.
Exit mobile version