ಬೆಂಗಳೂರು: ನಗರ ಫ್ರೀಡಂ ಪಾರ್ಕ್ ನಲ್ಲಿ ತಮ್ಮ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಆರೋಗ್ಯ ಇಲಾಖೆಯ ಗುತ್ತಿಗೆ, ಹೊರಗುತ್ತಿಗೆ ನೌಕರರು ಅನಿರ್ಧಿಷ್ಟಾವಧಿಯ ಮುಷ್ಕರ ನಡೆಸುತ್ತಿದ್ದಾರೆ. 2ನೇ ದಿನವಾದಂತ ಇಂದು ಮುಷ್ಕರ ನಡೆಸುತ್ತಿದ್ದಂತ ಸಿಬ್ಬಂದಿಯೊಬ್ಬರು ಅಸ್ವಸ್ಥಗೊಂಡು, ಆಸ್ಪತ್ರೆಗೆ ದಾಖಲಾಗಿರೋದಾಗಿ ತಿಳಿದು ಬಂದಿದೆ.
ಬೆಂಗಳೂರಿನ ಫ್ರೀಡಂ ಪಾರ್ಕ್ ಬಳಿಯಲ್ಲಿ ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಗುತ್ತಿಗೆ, ಹೊರಗುತ್ತಿಗೆ ನೌಕರರು ನಡೆಸುತ್ತಿರುವಂತ ಅನಿರ್ಧಿಷ್ಟಾವಧಿಯ ಮುಷ್ಕರ 2ನೇ ದಿನಕ್ಕೆ ಕಾಲಿಟ್ಟಿದೆ.
ಮೊದಲ ದಿನವಾದ ನಿನ್ನೆಯಂದು ಸ್ಥಳಕ್ಕೆ ಆಗಮಿಸಿದ್ದಂತ ಸಚಿವ ಮುನಿರತ್ನ, ಆರೋಗ್ಯ ಇಲಾಖೆಯ ಅಧಿಕಾರಿಗಳು ಬೇಡಿಕೆ ಈಡೇರಿಸೋ ಭರವಸೆ ನೀಡಿದ್ದರು, ಭರವಸೆಗೆ ಒಪ್ಪದೆ ಮುಷ್ಕರವನ್ನು ಮುಂದುವರೆಸೋ ನಿರ್ಧಾರ ಕೈಗೊಂಡು, ಪ್ರತಿಭಟನೆ ನಿರತರಾಗಿದ್ದರು.
ಇಂದು ಅನಿರ್ಧಿಷ್ಟಾವಧಿಯ ಮುಷ್ಕರದ ವೇಳೆಯಲ್ಲಿ ಸ್ಥಳಕ್ಕೆ ಬಂದ ಅಧಿಕಾರಿಗಳ ಬಳಿಯಲ್ಲಿ ಮನವಿ ಸಲ್ಲಿಸುತ್ತಿದ್ದ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರಲ್ಲಿ ಒಬ್ಬರ ಆರೋಗ್ಯದಲ್ಲಿ ಏರು ಪೇರಾಗಿತ್ತು. ದಿಢೀರ್ ಕುಸಿದು ಬಿದ್ದು, ಅಸ್ಪಸ್ಥಗೊಂಡಿದ್ದರು. ಹೀಗಾಗಿ ಅವರನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ದು ದಾಖಲಿಸಲಾಗಿದೆ.
ಇನ್ನೂ ನಿನ್ನೆಯಿಂದ ಅನಿರ್ಧಿಷ್ಟಾವಧಿ ಮುಷ್ಕರ ನಡೆಸುತ್ತಿರುವಂತ ಆರೋಗ್ಯ ಇಲಾಖೆಯ ಗುತ್ತಿಗೆ, ಹೊರಗುತ್ತಿಗೆ ನೌಕರರ ಪ್ರತಿಭಟನೆ ನಾಳೆಯಿಂದ ಮತ್ತಷ್ಟು ತೀವ್ರಗೊಳ್ಳಲಿದೆ. ನಾಳೆಯಿಂದ ಉಪವಾಸ ಸತ್ಯಾಗ್ರಹಕ್ಕೆ ಕರೆ ನೀಡಲಾಗಿದ್ದು, ಪ್ರತಿಭಟನೆ ವ್ಯಾಪಕ ಸ್ವರೂಪವನ್ನು ಪಡೆಯಲಿದೆ.
BREAKING NEWS : ಸಂಸತ್ತಿನಲ್ಲಿ ‘ರಾಹುಲ್ ಗಾಂಧಿ’ ಭಾಷಣ ; ಇಲ್ಲಿದೆ ಕೈ ನಾಯಕನ ಮಾತಿನ ಹೈಲೈಟ್ಸ್.!
‘ವಾಟ್ಸಾಪ್’ ಹೊಸ ವೈಶಿಷ್ಟ್ಯ ; ಇನ್ಮುಂದೆ ಈ ಬಳಕೆದಾರರು ಏಕಕಾಲಕ್ಕೆ 100 ಫೋಟೋ, ವಿಡಿಯೋ ಹಂಚಿಕೊಳ್ಳಬಹುದು!