ಬೆಂಗಳೂರು : ಹಿಂದೆ ಮುಂದೆ AK-47 ಗನ್ ಹಿಡಿದುಕೊಂಡಿರುವ ಗನ್ ಮ್ಯಾನ್ ಗಳು, ಐಷಾರಾಮಿ ಕಾರುಗಳು, ಮೈ ತುಂಬ ಬಂಗಾರ ಹಾಕಿಕೊಂಡು ಕೈಯಲ್ಲಿ ಎಕೆ47 ಇಟ್ಕೊಂಡು ಕೆಶೋ ಕೊಡುತ್ತಿದ್ದ ಅಸಾಮಿಯನ್ನು ಬೆಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ.

ಹೌದು ರೀಲ್ಸ್​​ಗಾಗಿ ಫುಲ್​ ರಿಚ್​ ಆಗಿ ಕಾಣಿಸಿಕೊಳ್ಳಲು ಮೈಮೇಲೆ ಕೆಜಿಗಟ್ಟಲೇ ಚಿನ್ನ ಧರಿಸಿಕೊಂಡು ಶೋ ಕೊಡಲು ಹೋಗಿ ಈಗ ರೀಲ್ಸ್ ಸ್ಟಾರ್ ಜೈಲುಪಾಲಾಗಿದ್ದಾನೆ. ಗನ್ ಮ್ಯಾನ್, ಐಷಾರಾಮಿ ಕಾರು, ಕಂತೆ ಕಂತೆ ಹಣ, ಕೆಜಿಗಟ್ಟಲೆ ಚಿನ್ನಾಭರಣ ಹಾಕಿಕೊಂಡು ಶೋ ಮಾಡುತ್ತಿದ್ದವ ಶೋಕಿವಾಲಾನನ್ನು ಇದೀಗ ಕೊತ್ತನೂರು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನಲ್ಲಿ ಶೋ ಕೊಡಲು ಹೋಗಿ ಜೈಲು ಪಾಲಾದ ಯುವಕನ ಕಥೆ ಇದು. ಅರುಣ್ ಕಟಾರೆ ಎನ್ನುವ ಯುವಕನನ್ನು ಇದೀಗ ಕೊತ್ತನೂರು ಪೊಲೀಸರು ಬಂಧಿಸಿದ್ದಾರೆ. AK-47 ಮಾದರಿ ನಕಲಿ ಗನ್ ಹಿಡಿದು ರಸ್ತೆಯಲ್ಲಿ ಶೋ ಕೊಡುತ್ತಿದ್ದ. ಈತನ ಬಿಲ್ಡಪ್ ಬಗ್ಗೆ ಸಾರ್ವಜನಿಕರು ಪೊಲೀಸರಿಗೆ ದೂರು ನೀಡಿದ್ದಾರೆ.

ತಕ್ಷಣ ಅರುಣ್ ಕಟಾರೆಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ವಿಚಾರಣೆ ವೇಳೆ ನಕಲಿ ಗನ್ ಹಿಡಿದು ಆತಂಕ ಸೃಷ್ಟಿಸಿದ್ದಕ್ಕೆ ಕೇಸ್ ದಾಖಲಾಗಿದೆ.ಶಸ್ತ್ರಾಸ್ತ್ರ ಕಾಯಿದೆ ಐಪಿಸಿ ಸೆಕ್ಷನ್ ಅಡಿ ಪ್ರಕರಣ ದಾಖಲಾಗಿದೆ. ಶೋಕಿ ಮಾಡಿದವನು ಇದೀಗ ಜೈಲು ಪಾಲಾಗಿದ್ದಾನೆ.

Share.
Exit mobile version