ಬೆಂಗಳೂರು: ಬೆಂಗಳೂರು ಪ್ರಬಲ ಐಟಿ ಉದ್ಯಮಕ್ಕೆ ಹೆಸರುವಾಸಿಯಾಗಿದೆ. ಇದರೊಂದಿಗೆ ವಿಶ್ವದ ಅತ್ಯಂತ ಹೆಚ್ಚು ಟ್ರಾಫಿಕ್​ ದಟ್ಟಣೆಯ ನಗರಗಳಲ್ಲಿ ಒಂದಾಗಿದೆ. ಇಲ್ಲಿ ಸ್ವಲ್ಪ ದೂರ ಕ್ರಮಿಸಬೇಕಂದ್ರೂ ದೊಡ್ಡ ಸವಾಲಾಗಿರುತ್ತೆ. ಆದ್ರೆ, ಈ ನಡುವೆಯೇ ವ್ಯಕ್ತಿಯೋರ್ವ ಟ್ರಾಫಿಕ್​ ಜಾಮ್​ಗೆ ಥ್ಯಾಂಕ್ಸ್‌ ಹೇಳಿದ್ದಾನೆ.

ಹೌದು, 3 ವರ್ಷಗಳ ಹಿಂದೆ ಟ್ರಾಫಿಕ್‌ ಜಾಮ್‌ನಲ್ಲಿ ಸಿಕ್ಕ ಯುವತಿಯೊಬ್ಬಳನ್ನು ಪ್ರೀತಿಸಿ ಮದುವೆಯಾದ ಪ್ರೇಮಕಥೆಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಇದೀಗ ವೈರಲ್ ಆಗುತ್ತಿದೆ.

ಏನಿದು ಪ್ರೇಮಕಥೆ?

ನಾನು ನಗರದ ಸೋನಿ ವರ್ಲ್ಡ್​ ಸಿಗ್ನಲ್ ಹತ್ತಿರ ಮೊದಲ ಬಾರಿಗೆ ಆ ಯುವತಿಯನ್ನು ನೋಡಿದೆ. ಈ ವೇಳೆ ಯುವತಿ ರಸ್ತೆ ದಾಟಲು ಟ್ರಾಫಿಕ್​ನಲ್ಲಿ ಸಿಲುಕಿಕೊಳ್ಳುತ್ತಿದ್ದಳು. ಪರಸ್ಪರ ಮುಖ ನೋಡಿಕೊಂಡು ಮುಗುಳ್ನಕ್ಕವು. ಆಗ ಇಬ್ಬರಿಗೂ ಮುಖ ಪರಿಚಯವಾಗಿತ್ತು.

ಒಂದು ದಿನ ಈಜಿಪುರದ ಮೇಲ್ಸೆತುವೆ ನಿರ್ಮಾಣದ ವೇಳೆ ಟ್ರಾಫಿಕ್ ಜಾಮ್​​ನಲ್ಲಿ ಸಿಲುಕಿಕೊಂಡಿದ್ದಾಗ ಆಕೆಯನ್ನು ನಾನು ಮನೆಗೆ ಡ್ರಾಪ್ ಮಾಡಿದ್ದೆ. ಟ್ರಾಫಿಕ್ ಕಿರಿಕಿರಿ ಹಾಗೂ ಹಸಿವಾಗಿದ್ದರಿಂದ ಬೇರೊಂದು ಪ್ರದೇಶ ಆಯ್ಕೆ ಮಾಡಿಕೊಂಡು ಒಟ್ಟಿಗೆ ಊಟಕ್ಕೆ ಹೋಟೆಲ್​​ಗೆ ಹೋಗಿದ್ದೆವು. ಅಂದಿನಿಂದ ನಮ್ಮ ಪ್ರೇಮ ಆರಂಭವಾಯಿತು.

ಸುಮಾರು ಮೂರು ವರ್ಷಗಳ ಕಾಲ ಪ್ರೀತಿಸಿ ಕಳೆದ ಎರಡು ವರ್ಷಗಳ ಹಿಂದೆ ನಾವು ವಿವಾಹವಾದೆವು. ಒಟ್ಟು ಐದು ವರ್ಷಗಳು ಕಳೆದಿವೆ. ಆದ್ರೆ, ಅಂದು ನಾವು ಭೇಟಿಯಾದ ಫ್ಲೈಓವರ್ ಮಾತ್ರ ಇನ್ನೂ ಹಾಗೆಯೇ ಇದೆ. ಅದು ಪೂರ್ಣಗೊಂಡಿಲ್ಲ ಎಂದಿದ್ದಾರೆ.

BIG NEWS: ‘ಇದು ಯುದ್ಧದ ಸಮಯವಲ್ಲವೆಂದು ಪ್ರಧಾನಿ ಮೋದಿ ಹೇಳಿದ್ದು ಸರಿಯಾಗಿಯೇ ಇದೆ’: ಫ್ರಾನ್ಸ್​ ಅಧ್ಯಕ್ಷ ಮ್ಯಾಕ್ರನ್

BIGG BREAKING NEWS : ಹಾಸ್ಯನಟ ರಾಜು ಶ್ರೀವಾಸ್ತವ ಇನ್ನಿಲ್ಲ | Comedian Raju Srivastava passes away

BIG BREAKING NEWS: ಹಾಸ್ಯನಟ ರಾಜು ಶ್ರೀವಾತ್ಸವ (58) ಇನ್ನಿಲ್ಲ | Comedian Raju Srivastava No More

Share.
Exit mobile version