ಬೆಂಗಳೂರು: ಟೀಮ್ಲೀಸ್ ಸರ್ವೀಸಸ್ 2022-2023ರ ಹಣಕಾಸು ವರ್ಷದ ತನ್ನ ಪ್ರಮುಖ ‘ಜಾಬ್ಸ್ ಅಂಡ್ ಸ್ಯಾಲರಿ ಪ್ರೈಮರ್ ರಿಪೋರ್ಟ್’ ಅನ್ನು ಬಿಡುಗಡೆ ಮಾಡಿದೆ. ಈ ವೇಳೆ ಬೆಂಗಳೂರು, ಮುಂಬೈ, ಚೆನ್ನೈ, ದೆಹಲಿ ಮತ್ತು ಹೈದರಾಬಾದ್ ಅತಿ ಹೆಚ್ಚು ಸಂಬಳ ಪಡೆಯುವ ನಗರಗಳಾಗಿವೆ ಎಂದು ವರದಿ ತಿಳಿಸಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಬೆಂಗಳೂರು ಶೇ.7.79ರಷ್ಟು ಬೆಳವಣಿಗೆ ದರವನ್ನು ಹೊಂದಿದೆ. ಇದಕ್ಕೆ ವ್ಯತಿರಿಕ್ತವಾಗಿ, BFSI ವಿಭಾಗವು ಎರಡು ವರ್ಷಗಳ ಸ್ಥಿರ ಬೆಳವಣಿಗೆಯ ನಂತರ ಈ ವರ್ಷ ಸರಾಸರಿ ವೇತನದಲ್ಲಿ ತೀವ್ರ ಕುಸಿತಕ್ಕೆ ಸಾಕ್ಷಿಯಾಗಿದೆ. ಆದಾಗ್ಯೂ, ಪಾವತಿಯಲ್ಲಿ ಇಳಿಕೆಯ ಹೊರತಾಗಿಯೂ, BFSI ಉದ್ಯಮವು ಇನ್ನೂ ದೀರ್ಘಕಾಲೀನವಾದ ವೈವಿಧ್ಯಮಯ ಶ್ರೇಣಿಯ ಉದ್ಯೋಗ ಪ್ರೊಫೈಲ್ಗಳನ್ನು ಸೃಷ್ಟಿಸುತ್ತಿದೆ, ಅಂದರೆ ಸಂಬಳವನ್ನು ಉತ್ತಮಗೊಳಿಸುವ ಕ್ರಮಗಳನ್ನು ಜಾರಿಗೆ ತರುತ್ತಿದೆ ಅಂಥ ವರದಿಯಲ್ಲಿ ಉಲ್ಲೇಖ ಮಾಡಿದೆ.
ಟೆಲಿಕಾಂ ಉದ್ಯಮದಲ್ಲಿ ಸರಾಸರಿ ವೇತನದಲ್ಲಿ ಕುಸಿತದ ಹೊರತಾಗಿಯೂ, ಬೆಂಗಳೂರಿನ ಟೆಲಿಕಾಂ ವಲಯದಲ್ಲಿ ರಿಲೇಶನ್ಶಿಪ್ ಮ್ಯಾನೇಜರ್ ಪಾತ್ರದಲ್ಲಿ 10.19% ಸಂಬಳದ ಹೆಚ್ಚಳವನ್ನು ವರದಿಯಲ್ಲಿ ಉಲ್ಲೇಖ ಮಾಡಿದೆ , ಇದು ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಸಂಬಳದ ಉದ್ಯೋಗವಾಗಿದೆ.