ಬೆಂಗಳೂರು: ಮೈಸೂರು ರಸ್ತೆಯ ಶ್ರೀ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಬ್ರಹ್ಮರಥೋತ್ಸವದ ಹಿನ್ನೆಲೆಯಲ್ಲಿ ಬೆಂಗಳೂರು ಸಂಚಾರ ಪೊಲೀಸರು (ಬಿಟಿಪಿ) ಶುಕ್ರವಾರದವರೆಗೆ ಈ ಮಾರ್ಗದಲ್ಲಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಿದ್ದಾರೆ.

ಗುರುವಾರ ಬೆಳಿಗ್ಗೆ 6 ಗಂಟೆಯಿಂದ ಶುಕ್ರವಾರ ಬೆಳಿಗ್ಗೆ 10 ಗಂಟೆಯವರೆಗೆ ಕಿಮ್ಕೋ ಜಂಕ್ಷನ್ ಮತ್ತು ನ್ಯೂ ಗುಡ್ಡದಹಳ್ಳಿ ಜಂಕ್ಷನ್ ನಡುವಿನ ಮಾರ್ಗವನ್ನು ಮೆಜೆಸ್ಟಿಕ್, ಸಿಟಿ ಮಾರ್ಕೆಟ್ ಮತ್ತು ಅದರಾಚೆಗೆ ಎರಡೂ ದಿಕ್ಕುಗಳಲ್ಲಿ ಮುಚ್ಚಲಾಗುವುದು.

ಕೆಂಗೇರಿಯಿಂದ ಮೈಸೂರು ರಸ್ತೆ ಮೂಲಕ ನಗರದ ಕಡೆಗೆ ಬರುವ ವಾಹನಗಳು ನಾಯಂಡಹಳ್ಳಿ ಜಂಕ್ಷನ್ ನಲ್ಲಿ ಎಡ ತಿರುವು ಪಡೆದು ನಾಗರಬಾವಿ ವೃತ್ತದ ಕಡೆಗೆ ಸಾಗಿ, ಚಂದ್ರಾಲೇಔಟ್ 80 ಅಡಿ ರಸ್ತೆ ಜಂಕ್ಷನ್ ನಲ್ಲಿ ಬಲಕ್ಕೆ ತಿರುಗಿ, ವೆಸ್ಟ್ ಆಫ್ ಕಾರ್ಡ್ ರಸ್ತೆಗೆ ಸೇರಿ, ಎಂಸಿ ವೃತ್ತ ತಲುಪಿ ಮಾಗಡಿ ರಸ್ತೆ ಮೂಲಕ ಸಾಗಬೇಕು.

ಮೆಜೆಸ್ಟಿಕ್ ತಲುಪಲು, ಕೆಬಿ ಜಂಕ್ಷನ್ ಮೂಲಕ ಹುಣಸೆ ಮರ ಜಂಕ್ಷನ್ನಲ್ಲಿ ಬಲ ತಿರುವು ಪಡೆದು, ಖೋಡೆ ವೃತ್ತದ ಕಡೆಗೆ ಸಾಗಿ ಮೆಜೆಸ್ಟಿಕ್ ತಲುಪಬಹುದು. ಮಾರುಕಟ್ಟೆಯನ್ನು ತಲುಪಲು, ಅವರು ಬಿನ್ನಿ ಮಿಲ್ ಜಂಕ್ಷನ್ ಮೂಲಕ ಹೋಗಿ ಶಿರಸಿ ವೃತ್ತದಲ್ಲಿ ಎಡಕ್ಕೆ ಹೋಗಬಹುದು.

ನಾಯಂಡಹಳ್ಳಿ, ಬಿಎಚ್ ಇಎಲ್, ಮೈಸೂರು ರಸ್ತೆಯಿಂದ ನಗರದ ಕಡೆಗೆ ಬರುವ ವಾಹನಗಳು ಕಿಮ್ಕೋ ಜಂಕ್ಷನ್ ನಲ್ಲಿ ಎಡ ತಿರುವು ಪಡೆದು ಅತ್ತಿಗುಪ್ಪೆ, ವಿಜಯನಗರ ಬಸ್ ನಿಲ್ದಾಣ ಮೂಲಕ ಎಂ.ಸಿ.ವೃತ್ತದಲ್ಲಿ ಬಲಕ್ಕೆ ತಿರುಗಿ ಮಾಗಡಿ ರಸ್ತೆ ಸೇರಬಹುದು.

Share.
Exit mobile version