ಬೆಂಗಳೂರು: ನಗರದಲ್ಲಿ ಇಂದು ಸರಣಿ ಅಪಘಾತದಲ್ಲಿ ಬೈಕ್ ಸವಾರನೊಬ್ಬ ಸಾವನ್ನಪ್ಪಿ, ಹಲವರು ಗಾಯಗೊಂಡಿರೋ ಘಟನೆ ನೃಪತುಂಗ ರಸ್ತೆಯಲ್ಲಿ ನಡೆದಿದೆ.
ಬೆಂಗಳೂರಿನ ನೃಪತುಂಗ ರಸ್ತೆಯ ಮ್ಯಾಜಿಸ್ಟ್ರೇಟ್ ಕೋರ್ಟ್ ಬಳಿಯಲ್ಲಿ 2 ಕಾರು, 2 ಬೈಕ್ ಗಳಿಗೆ ಇನೋವಾ ಕಾರೊಂದು ಡಿಕ್ಕಿ ಹೊಡೆದಿದೆ. ಈ ಪರಿಣಾಮ ಬೈಕ್ ಸವಾರನೋರ್ವ ಸ್ಥಳದಲ್ಲಿಯೇ ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ.
ಸರಣಿ ಅಪಘಾತದಲ್ಲಿ ಸಾವನ್ನಪ್ಪಿದಂತ ಬೈಕ್ ಸವಾರನನ್ನು ಮಾಜಿದ್ ಖಾನ್(39) ಎಂದು ಗುರುತಿಸಲಾಗಿದೆ. ಇನೋವಾ ಕಾರು ಬೈಕ್ ಗೆ ಡಿಕ್ಕಿಯಾದ ಪರಿಣಾಮ ಈತ ಸ್ಥಳದಲ್ಲಿಯೇ ಸಾವನ್ನಪ್ಪಿರೋದಾಗಿ ಹೇಳಲಾಗುತ್ತಿದೆ.
ಮೃತ ಮಾಜಿತ್ ಖಾನ್ ಆಟೋಮೊಬೈಲ್ ಅಂಗಡಿ ಇಟ್ಟಿಕೊಂಡಿದ್ದ ಎನ್ನಲಾಗಿದೆ. ಈ ಸರಣಿ ಅಪಘಾತದಲ್ಲಿ ರಿಯಾಜ್ ಸೇರಿದಂತೆ ನಾಲ್ವರು ಗಾಯಗೊಂಡು, ಸ್ಥಳೀಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೆಎ 50, ಎಂಎ 6600 ಎಂಬ ಇನೋವಾ ಕಾರು ಸರಣಿ ಅಪಘಾತಕ್ಕೆ ಕಾರಣವಾಗಿದೆ. ಈ ಕಾರು ರಾಮುಸುರೇಶ್ ಎಂಬುವರ ಹೆಸರಿನಲ್ಲಿದೆ ಎನ್ನಲಾಗಿದೆ. ಕಾರಿನ ಮೇಲೆ ಮಾಜಿ ಎಂಎಲ್ಎ ಎಂಬ ಸ್ಟಿಕ್ಕರ್ ಕೂಡ ಅಂಟಿಸಲಾಗಿದೆ.
ಅಪಘಾತದ ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದಂತ ಹಲಸೂರು ಗೇಟ್ ಠಾಣೆಯ ಪೊಲೀಸರು, ಪರಿಶೀಲನೆ ನಡೆಸಿ ಕಾರನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೇ ಪ್ರಕರಣ ದಾಖಲಿಸಿಕೊಂಡಿದ್ದಾರೆ.
BIGG NEWS: ಕುಮಾರಸ್ವಾಮಿ ಆರೋಗ್ಯ ಲೆಕ್ಕಿಸದೇ ಪಕ್ಷಕ್ಕಾಗಿ ಹೋರಾಟ ಮಾಡುತ್ತಿದ್ದಾರೆ: ರೇವಣ್ಣ ಭಾವುಕ
BIGG NEWS : ತುಮಕೂರು ದೇಶದ ಅತಿದೊಡ್ಡ ಔದ್ಯೋಗಿಕ ಜಿಲ್ಲೆಯಾಗಿ ಬೆಳೆಯಲಿದೆ : ಪ್ರಧಾನಿ ಮೋದಿ