ಬೆಂಗಳೂರು : ಬೆಳಗಾವಿ ಜಿಲ್ಲಾ ಬಿಜೆಪಿಯಲ್ಲಿ ಯಾವುದೇ ಬಣ ರಾಜಕೀಯ ಇಲ್ಲ. ಬಿಜೆಪಿಯಲ್ಲಿ ಇರುವುದು ಒಂದೇ ಬಣ. ಅದು ಬಿಜೆಪಿ ಬಣ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಜಿಲ್ಲಾ ಬಿಜೆಪಿಯಲ್ಲಿ ಯಾವುದೇ ಬಣ ರಾಜಕೀಯ ಇಲ್ಲ. ಬಿಜೆಪಿಯಲ್ಲಿ ಇರುವುದು ಒಂದೇ ಬಣ. ಅದು ಬಿಜೆಪಿ ಬಣ, ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ. ಪ್ರಧಾನಿ ಮೋದಿ, ಜೆ.ಪಿ. ನಡ್ಡಾ, ಬಿ.ಎಸ್.ಯಡಿಯೂರಪ್ಪ, ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದರು.
ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬೇಕೆಂದು ಜನರು ಹೇಳುತ್ತಿದ್ದಾರೆ. ಈಗಾಗಲೇ ನಾವು 61 ಸಾವಿರ ಬೂತ್ ಗಳನ್ನು ತಲುಪಿದ್ದೇವೆ. ಅಮಿತ್ ಶಾ, ನಡ್ಡಾ ಸಿಎಂ ಸೇರಿ ಎಲ್ಲರೂ ಅಭಿಯಾನ ಮಾಡಿದ್ದೇವೆ ಎಂದರು.
ಮಂಡ್ಯದಲ್ಲಿ ಸಚಿವ ಆರ್. ಅಶೋಕ್ ವಿರುದ್ಧ ಗೋ ಬ್ಯಾಕ್ ಪೋಸ್ಟರ್ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅರುಣ್ ಸಿಂಗ್,ಕಂದಾಯ ಸಚಿವ ಆರ್. ಅಶೋಕ್ ಪಕ್ಷದ ಸೀನಿಯರ್ ಲೀಡರ್. ಅಶೋಕ್ ಅನೇಕ ವರ್ಷಗಳಿಂದ ಪಕ್ಷಕ್ಕಾಗಿ ಕೆಲಸ ಮಾಡತ್ತಿದ್ದಾರೆ ಎಂದು ಹೇಳಿದ್ದಾರೆ.